ಪ್ರಕೃತಿಗೆ ಆದೇಶ ಕೊಡುವ ಯೋಗ್ಯತೆ ನಮಗಿಲ್ಲ. ಆಕೆ ಹೇಳುವ ಮಾತು ಕೇಳಿಸಿಕೊಳ್ಳುವುದಷ್ಟೆ ನಮ್ಮ ಕೆಲಸ.

–ಫ್ರಾನ್ಸಿಸ್ ಬೇಕನ್
Saturday, 30 July, 2016

ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ಆದೇಶ ವಿರೋಧಿಸಿ ಶನಿವಾರ ನಡೆದ ಕರ್ನಾಟಕ ಬಂದ್‌ನಿಂದಾಗಿ ರಾಜಧಾನಿ ಬೆಂಗಳೂರು ಸ್ತಬ್ಧಗೊಂಡಿತ್ತು.

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರಿಂದ ಅವಮಾನ ಮತ್ತು ಬೆದರಿಕೆ ಅನುಭವಿಸಿದ್ದ ಡಿಸಿಎಫ್ ದೀಪಿಕಾ ಬಾಜ್ಪೈ, ಮಳೆ ನೀರಿನಿಂದ ಮುಳುಗಡೆಯಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಸಹಾಯ ಮಾಡಿದ್ದಾರೆ.

ಅರೇಬಿಕ್‌ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತಿರುವುದನ್ನು ವಿರೋಧಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಮಂಗಳೂರಿನ ಸೇಂಟ್‌ ಥಾಮಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಶನಿವಾರ ದಾಳಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್‌ ಸಿದ್ದರಾಮಯ್ಯ ಅಕಾಲಿಕ ಮೃತ್ಯುವಿಗೆ ತುತ್ತಾಗಿದ್ದಾರೆ.

ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗಿರುವ ಗದಗ ಜಿಲ್ಲೆಯಲ್ಲಿ ನೀರು ಕೇಳಿ ಪ್ರತಿಭಟನೆ ನಡೆಸಿದ ರೈತರಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದರು. ಪೊಲೀಸರ ಈ ದೌರ್ಜನ್ಯವನ್ನು ಖಂಡಿಸಿ ನರಗುಂದ ನಿವಾಸಿ ರೈತ ಮುತ್ತಣ್ಣ ತಿರ್ಲಾಪುರ ಎಂಬವರು ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ಗೇ’ಯತೆ-ಸಲಿಂಗಕಾಮ ಮನೋವ್ಯಾಧಿಯೇ?!

ಇಂದು ಸಮಾಜ ಬದಲಾದಂತೆ, ಮನೋವೈದ್ಯಕೀಯ ವರ್ಗೀಕರಣ ಪದ್ಧತಿಯೂ ಬದಲಾಗುತ್ತಿದೆ. ಮನೋವೈದ್ಯಕೀಯ ಶಾಸ್ತ್ರ, ‘ಸಲಿಂಗಕಾಮ’ವನ್ನು ಹೇಗೆ ನೋಡುತ್ತದೆ, ಅರ್ಥ ಮಾಡಿಕೊಳ್ಳುತ್ತದೆ, ಅದನ್ನು ‘ಕಾಯಿಲೆ’ ಎನ್ನುತ್ತದೆಯೆ, ಇಲ್ಲವೆ? ಎಂಬುದರ ಕುರಿತು ಇಲ್ಲಿ ಬೆಳಕು ಚೆಲ್ಲಲಾಗಿದೆ.

ಸ್ತ್ರೀಯರ ಜಾಣತನದಲ್ಲಿ ಹೆಚ್ಚಿನ ಪಾಲು ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬಲ್ಲೆ? ಎಂಬುದರಲ್ಲಿಯೇ ವಿನಿಯೋಗವಾಗುತ್ತದೆ. ಪುರುಷಸಮಾಜ ಉದಾತ್ತವಾದರೆ ಮಾತ್ರ ಅವಳ  ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ನನಗೆ ತುಂಬಾ ಕೂದಲು ಉದುರುತ್ತಿದೆ. ಏನ್‌ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ. ಅವರಿವರು ಹೇಳಿದ ಔಷಧಿ ಪ್ರಯೋಗಿಸಿದ್ದಾಯಿತು. ಆದ್ರೂ, ಕೂದಲು ಉದುರೋದು ನಿಲ್ತಾ ಇಲ್ಲ. ಇದರಿಂದ ಜೀವನವೇ ಜುಗುಪ್ಸೆ ಬಂದಿದೆ, ಇದಕ್ಕೆ ಪರಿಹಾರವೇನು?’ ಬೆಂಗಳೂರಿನ ಅನೇಕರ ಪ್ರಶ್ನೆ ಇದು. 

‘ಕಬಾಲಿ’ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬೆಂಗಳೂರಿನ ಶೇಷಾದ್ರಿಪುರದ ನಟರಾಜ್‌ ಚಿತ್ರಮಂದಿರದ ಹೊರಭಾಗದಲ್ಲಿ ರಜಿನಿಕಾಂತ್‌ ಅವರ ಬೃಹತ್‌ ಕಟೌಟ್‌ಗಳನ್ನು ಹಾಕಲಾಗಿದೆ. ಈ ಕಟೌಟ್‌ಗಳ ರಕ್ಷಣೆಗೆ ಚಿತ್ರಮಂದಿರದ ಸಿಬ್ಬಂದಿ ‘ಹೊದಿಕೆ’ ತಂತ್ರ ಅನುಸರಿಸಿದ್ದಾರೆ!

ಫ್ರೀಡಂಪಾರ್ಕ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಟ ಶಿವರಾಜ್ ಕುಮಾರ್ ನಾವು ಶಕ್ತಿ ಪ್ರದರ್ಶನಕ್ಕಾಗಿ ಬೀದಿಗಿಳಿದಿಲ್ಲ, ಜನರಿಗಾಗಿ ಬಂದಿದ್ದೇವೆ. ಜನರಿಗೆ ಬೆಂಬಲ ನೀಡಲು ಬಂದಿದ್ದೇವೆ. ಸುಮ್ಮನೆ ತಮಾಷೆಗಾಗಿ ಎಂದಿಗೂ ಹೋರಾಟ ಮಾಡಬಾರದು.

ಮಹಾದಾಯಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಪಾಕಿಸ್ತಾನದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ಘಟಕದೊಳಗೆ ಹಿಂದೂ ವೈದ್ಯರೊಬ್ಬರ ಶವ ನಿಗೂಢ ರೀತಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯ  

ನಿತ್ಯ ನೂರಾರು ಜನರು ಓಡಾಡುವ ಬೀದಿಗಳೆಲ್ಲ ಖಾಲಿ ಖಾಲಿ; ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಆಂಬುಲೆನ್ಸ್‌ ಮತ್ತು ಮಾಧ್ಯಮ ಪ್ರತಿನಿಧಿಗಳ ವಾಹನಗಳ ಓಡಾಟವಷ್ಟೆ. ಬಾಗಿಲು ಹಾಕಿಕೊಂಡು ಮನೆಗಳಲ್ಲಿ ಕುಳಿತರವರಿಗೆ ಕೇಳಿಸುವುದು ಪೊಲೀಸ್ ವಾಹನಗಳ ಸೈರನ್‌ ಮಾತ್ರ...

ಜಿಲ್ಲೆ  

ಮಹದಾಯಿ ನದಿಯ ಏಳು ಟಿಎಂಸಿ ನೀರು ಬಳಕೆ ಮಾಡಲು ಅನು ಮತಿ ಕೋರಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯ ಮಂಡಳಿ ವಜಾಗೊಳಿಸಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯ ಸದಸ್ಯರು ನಗರದ ಸರ್ವೀಸ್ ಬಸ್‌ ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ  

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ. 7ನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕರಿಸಿದ ವೇತನ ಬಾಕಿಯನ್ನು ಒಂದೇ ಕಂತಿನಲ್ಲಿ ಆಗಸ್ಟ್ ತಿಂಗಳ ಸಂಬಳದ ಜತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕ್ರೀಡೆ  

ಆರಂಭಿಕ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಗಳಿಸಿ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿರುವ ವಿರಾಟ್‌ ಕೊಹ್ಲಿ ಬಳಗ   ಈಗ ಮತ್ತೊಂದು ಸವಾಲಿಗೆ ಎದೆ ಯೊಡ್ಡಲು  ಸಜ್ಜಾಗಿದೆ.

ವಾಣಿಜ್ಯ  

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ ಶುಕ್ರವಾರ ದೇಶದಾದ್ಯಂತ ಮುಷ್ಕರ ನಡೆಸಿದ್ದರಿಂದ 80 ಸಾವಿರ ಬ್ಯಾಂಕ್‌ ಶಾಖೆಗಳಲ್ಲಿ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ ಒದಗಿತು.

ವಿದೇಶ  

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದಿಂದ ನಾಮನಿರ್ದೇಶನವನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಹಿಲರಿ ಕ್ಲಿಂಟನ್ ಅವರು ಮಾಡಿದ ಭಾಷಣದಲ್ಲಿ ಹಲವು ಸುಧಾರಣಾ ನೀತಿಗಳನ್ನು ಪ್ರಸ್ತಾಪಿಸಿದರು.