ಶುಕ್ರವಾರ, ಜನವರಿ 8, 2010
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹವಾಮಾನ
ಸುಭಾಷಿತ
ಸಮಾಧಾನಿಯಾಗುವುದು ಉಚಿತ; ತಾಳ್ಮೆಯಿಂದ ಬಾಳುವುದು ಸಾರ್ಥಕ.
--ಆಚಾರ್ಯ ವಿನೋಬಾ ಭಾವೆ.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ಯುವಜನ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಭೂಮಿಕಾ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ತಂತ್ರಜ್ಞಾನ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಆರೋಗ್ಯ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್ ಅಮಿನ್‌ಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಡಾ.ದೇವಿ ಶೆಟ್ಟಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಭೂಮಿಯನ್ನು ನುಂಗಲಿರುವ ಸೂಪರ್‌ನೋವಾ
’ಭೂಮಿಯಿಂದ 3,260 ಜ್ಯೋತಿರ್ವರ್ಷ ಅಂತರದಲ್ಲಿರುವ ನಕ್ಷತ್ರವೊಂದು ‘ಘಟ ಸ್ಫೋಟ’ ( ಸೂಪರ್ ನೋವ)ಗೊಳ್ಳುವ ಹಂತ ತಲುಪಿದೆ. ಹಾಗೇನಾದರೂ ಸಂಭವಿಸಿದರೆ ಭೂಮಿ ಕೂಡ ನಾಶವಾಗಬಹುದು’ ...


ಲಂಡನ್ (ಪಿಟಿಐ):
ಇನ್ನು ಎರಡು ವರ್ಷಗಳಲ್ಲಿ ಅನಿರೀಕ್ಷಿತ ಘಟನೆಗಳಿಂದ ಭೂಮಿ ನಾಶವಾಗುವುದೇ? ಹಾಗೆಂದು ವೈಜ್ಞಾನಿಕ ಸಿನಿಮಾಗಳು ಕಥೆಕಟ್ಟಿವೆ. ಆದರೆ ‘ ಅದು ಕಟ್ಟು ಕಥೆಯೇನಲ್ಲ, ಭೂಮಿಯ ನಾಶ ನಿಜವಾಗಬಹುದು’  ಎಂದು ಈಗ ವಿಜ್ಞಾನಿಗಳು ಕೂಡ ಹೇಳತೊಡಗಿದ್ದಾರೆ.

’ಭೂಮಿಯಿಂದ 3,260  ಜ್ಯೋತಿರ್ವರ್ಷ ಅಂತರದಲ್ಲಿರುವ  ನಕ್ಷತ್ರವೊಂದು ‘ಘಟ ಸ್ಫೋಟ’  ( ಸೂಪರ್ ನೋವ)ಗೊಳ್ಳುವ ಹಂತ ತಲುಪಿದೆ. ಹಾಗೇನಾದರೂ ಸಂಭವಿಸಿದರೆ ಭೂಮಿ ಕೂಡ ನಾಶವಾಗಬಹುದು’ ಎಂದು ಫಿಲಿಡೆಲ್ಫಿಯಾದ ವಿಲ್ಲನೊವಾ ವಿಶ್ವವಿದ್ಯಾಲಯದ  ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆ.

ಸ್ಫೋಟಕ್ಕೆ ಸಿದ್ಧವಾಗಿರುವ ನಕ್ಷತ್ರವನ್ನು  ‘ಟಿಫಿಕ್ಸಿಡಿಸ್’ ಎಂದು ಹೆಸಲಾಗಿದೆ. ಇದು ಸ್ಫೋಟಗೊಂಡರೆ 20 ಮುಮ್ಮಡಿ ಶತಕೋಟಿ ಮೆಗಾಟನ್ ಟಿಎನ್‌ಟಿ  (ಸಾರಜನಕ ಯುಕ್ತ ಪ್ರಬಲ ಸ್ಫೋಟಕ) ಸಾಮರ್ಥ್ಯ ಹೊಂದಿರುತ್ತದೆ. ಸ್ಫೋಟ ಸಂಭವಿಸಿದರೆ ಅಪಾರ ಶಕ್ತಿಯಿಂದಾಗಿ ಭೂಮಿ ಹಾಗೂ ಅದರಲ್ಲಿರುವ ಜೀವಜಾಲಗಳು  ನಾಶವಾಗುವುದು ಖಚಿತ ಎಂದು ವಿಜ್ಞಾನಿಗಳು ಹೇಳಿದ್ದಾರೆ.

’ಟಿಫಿಕ್ಸಿಡಿಸ್’ ನಕ್ಷತ್ರದಂತೆ ಕಂಡುಬಂದರೂ ಅದು ನಕ್ಷತ್ರ ಅಲ್ಲ. ಅದು ಶ್ವೇತಕುಬ್ಜ (ಜೋಡಿ ನಕ್ಷತ್ರ). ನಕ್ಷತ್ರವೊಂದು ಉರಿದು ಮುಗಿದಾಗ  ಗುರುತ್ವಾಕರ್ಷಣೆ ಕಳೆದು ಕೊಂಡು ಸಂಕುಚಿತಗೊಳ್ಳುತ್ತದೆ. ಕಪ್ಪು ರಂಧ್ರ (ಬ್ಲ್ಯಾಕ್ ಹೋಲ್) ಎಂದು ಕರೆಯಲ್ಪಡುವ ಇದನ್ನು ಇತರ ಪ್ರಬಲ ನಕ್ಷತ್ರಗಳು ಆಕರ್ಷಿಸಿ ವಿಲೀನಗೊಳಿಸುತ್ತವೆ. ಇಂತಹವುಗಳನ್ನು ‘ಶ್ವೇತ ಕುಬ್ಜ’ ಎಂದು ಕರೆಯಲಾಗುವ ಈ ಜೋಡು ನಕ್ಷತ್ರ  ಸ್ವತಃ ದ್ರವ್ಯರಾಶಿಯ ಬಿಗುವು ಹಾಗೂ ಅನಿಲಗಳ ಹೀರುವಿಕೆಯಿಂದ ಉಬ್ಬ ತೊಡಗುತ್ತದೆ.

ಹೀಗೆ ಉಬ್ಬಿದ ’ಶ್ವೇತ ಕುಬ್ಜ ನಕ್ಷತ್ರ’ ದ ದ್ರವ್ಯರಾಶಿ ಒಂದು ನಿರ್ದಿಷ್ಟ ಹಂತದಲ್ಲಿ ಪೂರ್ಣ ಶಕ್ತಿಯೊಂದಿಗೆ ಸ್ಫೋಟಗೊಳ್ಳುತ್ತದೆ. ಇದನ್ನು ಸೂಪರ್ ನೋವ ಅನ್ನುತ್ತಾರೆ. ಇದರಿಂದ ಸೌರವ್ಯೆಹದಲ್ಲಿ ಅಲ್ಲೋಲಕಲ್ಲೋಲ ಆಗುತ್ತದೆ. ಗ್ರಹಗಳು, ಉಪಗ್ರಹಗಳು ಧ್ವಂಸವಾಗುತ್ತವೆ. ಟಿಫಿಕ್ಸಿಡಿಸ್ ನಕ್ಷತ್ರಕ್ಕೆ ಹತ್ತಿರವಾಗಿರುವುದರಿಂದ ಭೂಮಿಯೂ ನಾಶವಾಗಬಹುದು ಎಂಬುದು ವಿಜ್ಞಾನಿಗಳ ಸಂಶಯ.

ನಕ್ಷತ್ರಗಳ ಸ್ಫೋಟ (ಸೂಪರ್‌ನೋವಾ) ಪ್ರಕ್ರಿಯೆಯು 1890ರಿಂದೀಚಿಗೆ ಪ್ರತಿ 20 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಆದರೆ 1967ರಿಂದ ಇಂತಹ ಘಟನೆ ನಡೆದಿಲ್ಲ. ಇದೀಗ ಬಾಕಿ ಇರುವ ಸ್ಫೋಟದ ಸರದಿ ಹತ್ತಿರವಾಗುತ್ತಿದೆ.

‘ಇಪ್ಪತ್ತು ವರ್ಷಗಳ ನಿರ್ದಿಷ್ಟ ಅವಧಿ ಹತ್ತಿರವೇ ಇದೆ’ ಎಂದು ವಿಜ್ಞಾನಿಗಳ ತಂಡದ ಎಡ್ವರ್ಡ್ ಎಂ ಸಿಯಾನ್ ಅಮೆರಿಕದ ಖಗೋಳ ವಿಜ್ಞಾನಿಗಳ ಸಮಾವೇಶ (ಎಎಎಸ್)ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

ಈ ನಕ್ಷತ್ರವು ಅಂತಿಮ ಸ್ಫೋಟದ ಪೂರ್ವಭಾವಿಯಾಗಿ ಸಣ್ಣಸ್ಫೋಟ (ನೋವಾ)ಗಳು ನಡೆಯುತ್ತಿದೆ. ಇದನ್ನು ಹಬಲ್ ದೂರದರ್ಶಕ ಗುರುತಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇತರ ಸುದ್ದಿಗಳು
ಆಸ್ಟ್ರೇಲಿಯಾ: ಆರೋಪಿಗಳಿಗೆ ಪೊಲೀಸರ ಶೋಧ
‘ಜಾಗತಿಕ ಅಭಿವೃದ್ಧಿ ಭಾರತ ಪ್ರಮುಖ ಕೊಡುಗೆದಾರ’
‘ಕರೆಯದೇ ಬರಲಿಲ್ಲ, ಕರೆದವರು ಭಾರತೀಯರಲ್ಲ’
ಭೂಮಿಯನ್ನು ನುಂಗಲಿರುವ ಸೂಪರ್‌ನೋವಾ
ಪರಿಸರ ಶಿಕ್ಷಕನಿಗೆ ಅಮೆರಿಕ ಅಧ್ಯಕ್ಷರ ಗೌರವ
ಉಗ್ರರ ಕಚೇರಿಗೆ ಮಾನವ ಬಾಂಬ್: 6 ಸಾವು
ವೀಸಾ ಅರ್ಜಿಗಳಲ್ಲಿ ಭಾರಿ ಕುಸಿತ
ಅಮೆರಿಕ ದಾಳಿ- 17 ಸಾವು
ಡೆಟ್ರಾಯಿಟ್ ಪ್ರಕರಣ: ಆರೋಪ ಪಟ್ಟಿ ದಾಖಲು
ಚರ್ಚ್ ಬಳಿ ದಾಳಿ: ಏಳು ಮಂದಿ ಹತ್ಯೆ
18ನೇ ಮಹಡಿಯಿಂದ ಬಿದ್ದರೂ ಬದುಕಿದ ಮಹಿಳೆ
ಪ್ರಭಾಕರನ್ ತಂದೆ ಸಾವು
ರಾಣಾ ಜಾಮೀನು ಅರ್ಜಿ: ವಿಚಾರಣೆಗೆ ನಕಾರ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618