|
ಬ್ಯಾಂಕಾಕ್: ‘ನಾವು ಎರಡು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದೇವೆ. ಕಜಾನ್ ಚಾಂಪಿಯನ್ಸ್ ಚಾಲೆಂಜ್ ಹಾಗೂ ಏಷ್ಯಾ ಕಪ್‌ನಲ್ಲಿ ಮಿಂಚಿದ್ದೇವೆ. ಆದರೆ ನಮಗೆ ಇದುವರೆೆಗೆ ದಿನದ ಭತ್ಯೆ ಸಿಕ್ಕಿಲ್ಲ. ಪುರುಷರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತಿದೆ’ ಎಂದು ತಂಡದ ಹಿರಿಯ ಆಟಗಾರ್ತಿಯೊಬ್ಬರು ಬೇಸರದಿಂದ ಹೇಳಿದ್ದಾರೆ.
ಪ್ರವಾಸ ಕೈಗೊಂಡಾಗ ಕ್ರೀಡಾ ಮಂಡಳಿ ದಿನದ ಭತ್ಯೆಯಾಗಿ 1600 ರೂಪಾಯಿ ನೀಡಬೇಕು. ಆದರೆ ರೈಲ್ವೆ ಇಲಾಖೆಯಲ್ಲಿ ಹುದ್ದೆಯಲ್ಲಿರುವ ಆಟಗಾರ್ತಿಯರಿಗೆ ಇಲಾಖೆಯಿಂದ ಹಣ ಸಿಗುತ್ತಿದೆ. ಆದರೆ ಉಳಿದ ಆಟಗಾರ್ತಿಯರ ಪರಿಸ್ಥಿತಿ ಚಿಂತಾಜನಕವಾಗಿದೆ.
ಸ್ವದೇಶಕ್ಕೆ ಹಿಂತಿರುಗಿದ ತಂಡ (ನವದೆಹಲಿ ವರದಿ): ಏಷ್ಯಾ ಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತ ಹಾಕಿ ತಂಡದ ಆಟಗಾರ್ತಿಯರು ಸೋಮವಾರ ಸ್ವದೇಶಕ್ಕೆ ಹಿಂತಿರುಗಿದರು. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರ್ತಿಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಫೈನಲ್‌ನಲ್ಲಿ ಭಾರತ 3-5 ಗೋಲುಗಳಿಂದ ಚೀನಾ ಎದುರು ಸೋಲು ಕಂಡಿತ್ತು.
|