ಹಳಿಯಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಾರ್ತಿಕ ಕೆ. ಹಾಗೂ ಆಳ್ವಾಸ್ ಮೂಡಬಿದ್ರೆಯ ಜಾಲಿ ವಿ,ಎಂ. ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ ಬಾಲಕ ಹಾಗೂ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿಕೊಂಡರು.
ಪದವಿ ಪೂರ್ವ-ವೃತ್ತಿ ಶಿಕ್ಷಣ ಇಲಾಖೆ, ದಾಂಡೇಲಿಯ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಹಳಿಯಾಳದ ಶಿವಾಜಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ತಂಡ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು. ಬಾಲಕರ ವಿಭಾಗದಲ್ಲಿ 68 ಹಾಗೂ ಬಾಲಕಿಯರ ವಿಭಾಗದಲ್ಲಿ 91 ಅಂಕಗಳು ತಂಡದ ಪಾಲಾದವು.
ಬಾಲಕರ ವೈಯಕ್ತಿಯ ಚಾಂಪಿಯನ್ ಕಾರ್ತಿಕ ಕೆ, 800 ಮೀಟರ್ ಓಟದಲ್ಲಿ ಚಿನ್ನ, 1500 ಮೀ ಓಟದಲ್ಲಿ ಬೆಳ್ಳಿ ಹಾಗೂ 400ಮೀ ಓಟದಲ್ಲಿ ಕಂಚು ಗಳಿಸಿದರೆ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಉದ್ದ ಜಿಗಿತ ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿಯನ್ನು ಜಾಲಿ ತಮ್ಮ ಬಗಲಿಗೆ ಹಾಕಿಕೊಂಡರು.
ಬುಧವಾರದ ಪಂದ್ಯಗಳ ಫಲಿತಾಂಶ:
ಬಾಲಕರ ಉದ್ದ ಜಿಗಿತ: ಜಾಯಲ್ ಅನುಷ ಕಾರ್ಡೊಜಾ (ಮಂಗಳೂರು)6.55ಮೀ-1, ಮುನಿರಾಜ (ಬೆಂಗಳೂರು ದಕ್ಷಿಣ) 6.31-2, ರೋಹನ ತೇರಾಲ್ಡ್(ಬೆಂಗಳೂರು ದಕ್ಷಿಣ) 6.31-3.
400ಮೀ ಓಟ: ರೋಷನ್ ಎಸ್.ಎಂ (ಬೆಂಗಳೂರು ಉತ್ತರ)52.05ಸೆ-1, ರಾಘವೇಂದ್ರ ದಕ್ಷಿಣ ಕನ್ನಡ) 52.68ಸೆ-2, ಕಾರ್ತಿಕ ಕೆ (ದಕ್ಷಿಣ ಕನ್ನಡ)53.90ಸೆ-3.
4x400 ಮೀ. ರೀಲೆ: 1-ಬೆಂಗಳೂರು ದಕ್ಷಿಣ (3.28ಸೆ), 2-ಮಂಗಳೂರು (3.29ಸೆ), 3-ಉಡುಪಿ (3.42ಸೆ).
4x100 ಮೀ ರೀಲೆ: 1-ಬೆಂಗಳೂರು ದಕ್ಷಿಣ (3.28ಸೆ). 2-ಮಂಗಳೂರು (3.29ಸೆ), 3-ಉಡುಪಿ (3.42ಸೆ)
ಡಿಸ್ಕಸ್ ಥ್ರೋ: ಜಾವಿದ್ ಎಂ. ಎಸ್ (ದಕ್ಷಿಣ ಕನ್ನಡ) 34.26ಮೀ-1, ಆದಿತ್ಯಾ ಹೆಗಡೆ (ಶಿರಸಿ) 33.89ಮೀ-2, ರೋಹಿತ್ ರೆಡ್ಡಿ (ಬೆಂಗಳೂರು ಉತ್ತರ) 32.76ಮೀ-3.
ಗುಡ್ಡಗಾಡು ಓಟ 8ಕಿ.ಮೀ: ಅಲವಂಡಿ ಎಸ್.ಎಸ್ (ಗದಗ) 26.48ನಿ-1. ಕೃಷ್ಣಪ್ಪ ಸಂತಿ (ಧಾರವಾಡ) 27.02ನಿ-2, ಶಮೀರ ಕೌಜನೂರ (ಧಾರವಾಡ) 27.6ನಿ-3
ಬಾಲಕಿಯರ 400ಮೀಟರ್ ಓಟ: ಸುಷ್ಮಿತಾ ದೇವದಾಸ್ (ದಕ್ಷಿಣ ಕನ್ನಡ)1.01ಸೆ.-1, ಪದ್ಮಿನಿ ಎನ್.ಜಿ (ಬೆಂಗಳೂರು ಉತ್ತರ)1.02ಸೆ.2, ಭರನಿ ಗೌಡ (ಬೆಂಗಳೂರು ದಕ್ಷಿಣ) 2.21ಸೆ.-3.
ಗುಡ್ಡಗಾಡು ಓಟ: ಯಶಸ್ವಿನಿ ಕೆ.(ಮೈಸೂರು)22.38ಸೆ.-1, ಸುಜಾತಾ (ದಕ್ಷಿಣ ಕನ್ನಡ) 22.42ಸೆ-2, ಸೌಮ್ಯಾ ಎನ್,ವಿ.(ದಕ್ಷಿಣ ಕನ್ನಡ)22.15ಸೆ-3.
4x100ಮೀ ರೀಲೆ: 1-ದಕ್ಷಿಣ ಕನ್ನಡ (56ಸೆ), 2-ಮೈಸೂರು (58.2ಸೆ),3-ಕೊಡಗು (1.01ಸೆ).
4x400ಮೀ ರೀಲೆ:1-ದಕ್ಷಿಣ ಕನ್ನಡ (4.12ಸೆ), 2-ಮೈಸೂರು (4.71ಸೆ), 3-ಕೊಡಗು (4.34ಸೆ).