ಗುರುವಾರ, ನವೆಂಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಭೂಮಿಕಾ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಆರೋಗ್ಯ
ಮೆಟ್ರೊ ಶನಿವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಉಗ್ರರ ದಾಳಿ ನಡೆದು ಒಂದು ವರ್ಷ
ಮುಂಬೈ ಭದ್ರತೆ ಅಪೂರ್ಣ
ಮುಂಬೈ ದಾಳಿ ನಡೆದು ವರ್ಷ ಕಳೆಯುತ್ತಿದೆ. ತನಿಖೆಗಳು ನಡೆದಿವೆ ವಿಚಾರಣೆಗಳು ಸಾಗುತ್ತಿವೆ. ಚೇತರಿಸಿಕೊಂಡ ಮಹಾನಗರ ಮತ್ತೆ ತನ್ನದೇ ವ್ಯವಹಾರಗಳಲ್ಲಿ ಮುಳುಗಿ ಹೋಗಿದೆ ಆದರೆ ಒಂದು ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ- ಅದು ಮುಂಬೈಗೆ ಸಂಪೂರ್ಣ ಭದ್ರತೆ ಸಾಧ್ಯವೇ?


ಮುಂಬೈ(ಐಎಎನ್‌ಎಸ್): 
ಉಗ್ರರ ದಾಳಿ,  ಬಲಿಯಾದ ಅಮಾಯಕರು, ಹುತಾತ್ಮರಾದ ಯೋಧರು, ಅಲ್ಲೋಲ ಕಲ್ಲೋಲವಾದ ರಾಜಕಾರಣ,  ದಿಗ್ಭ್ರಾಂತ ದೇಶ... ಮುಂಬೈ ದಾಳಿ ನಡೆದು ವರ್ಷ ಕಳೆಯುತ್ತಿದೆ. ತನಿಖೆಗಳು ನಡೆದಿವೆ ವಿಚಾರಣೆಗಳು ಸಾಗುತ್ತಿವೆ. ಚೇತರಿಸಿಕೊಂಡ ಮಹಾನಗರ ಮತ್ತೆ ತನ್ನದೇ ವ್ಯವಹಾರಗಳಲ್ಲಿ ಮುಳುಗಿ ಹೋಗಿದೆ ಆದರೆ ಒಂದು ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ- ಅದು ಮುಂಬೈಗೆ ಸಂಪೂರ್ಣ ಭದ್ರತೆ ಸಾಧ್ಯವೇ?

ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ, ದೇಶದ ವಾಣಿಜ್ಯ ನಗರಿಯ ಪ್ರಧಾನ ಕಟ್ಟಡಗಳಿಗೆ ಬಿಗಿ ಭದ್ರತೆ, ನಗರದ ಜೀವಾಳವೇ ಆಗಿರುವ ರೈಲ್ವೆ ಜಾಲಕ್ಕೆ ಸೂಕ್ತ ರಕ್ಷಣೆಯ ಕಾರ್ಯಗಳು ಚುರುಕುಗೊಂಡಿರುವುದು ನಿಜವಾದರೂ ಇದಷ್ಟೇ ಸಾಲದು ಎಂಬ ಮಾತು ಕೇಳಿ ಬರುತ್ತಿದೆ.

ವರ್ಷದ ಹಿಂದೆ ಕಾಣದಿದ್ದ ಭದ್ರತಾ ಕಾರ್ಯವನ್ನು ಈಗ ನಗರದಲ್ಲಿ ನೋಡಬಹುದು. ಆದರೆ ಈ ಕಾರ್ಯ ಇನ್ನೂ ಪ್ರಗತಿಯ ಹಂತದಲ್ಲಿದೆ. ಭದ್ರತೆ ಬಗ್ಗೆ ವಿಶ್ವಾಸದಿಂದ ಮಾತನಾಡುವುದು ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಮುಂಬೈ ಪೊಲೀಸ್ ಕಮಿಷನರ್ ಡಿ. ಶಿವನಂದನ್ ತಿಳಿಸುತ್ತಾರೆ.  

click here

ಇನ್ನೆಂದೂ ಮುಂಬೈ ಮೇಲೆ ದಾಳಿ ನಡೆಯಬಾರದು ಎಂದು ಅಧಿಕಾರಿಗಳು ಪಣ ತೊಟ್ಟಿದ್ದಾರೆ. ಮುಂಬೈ ಪೊಲೀಸರನ್ನೂ ಒಳಗೊಂಡಂತೆ  ವಿವಿಧ ಭದ್ರತಾಪಡೆಗಳು ದೇಶದ ಪಶ್ಚಿಮ ಕರಾವಳಿಯನ್ನು ಎಚ್ಚರದಿಂದ ಕಾಯುತ್ತಿವೆ.  ಕಳೆದ ವಾರ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನಿರ್ಮಲ್ ವರ್ಮಾ ಅವರು ಪಶ್ಚಿಮ ನೌಕಾದಳದ ಕಾರ್ಯಕ್ಷಮತೆ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದ್ದರು.

ಸಾಗರದಲ್ಲಿ ಪ್ರತಿದಾಳಿ ನಡೆಸಬಲ್ಲ ಐದು ಜಲಾಂತರ್ಗಾಮಿಗಳನ್ನು ಹೊಂದಲು ನೌಕಾಪಡೆ ನಿರ್ಧರಿಸಿದೆ. 46 ಕರಾವಳಿ ರೆಡಾರ್‌ಗಳು ಹಾಗೂ 9  ಕರಾವಳಿ ರಕ್ಷಣಾ ಪಡೆ ಕೇಂದ್ರಗಳ ನಡುವೆ ಸಂಪೂರ್ಣ ಸಂಪರ್ಕ ಕಲ್ಪಿಸಲು ಯತ್ನಿಸಲಾಗುತ್ತಿದೆ.

ಗೋವಾದಲ್ಲಿ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಗುಂಡುನಿರೋಧಕ ದೋಣಿಗಳನ್ನು ಖರೀದಿಸಲಾಗಿದೆ. 

ಮಹಾರಾಷ್ಟ್ರ ಸರ್ಕಾರ ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ ರೂ. 63 ಕೋಟಿ ವಿನಿಯೋಗಿಸಿದೆ. ನಗರದ ಆಯಾಕಟ್ಟಿನ ಪ್ರದೇಶದಲ್ಲಿ ಲೋಹ ಪರಿಶೋಧಕಗಳು, ಶ್ವಾನಪಡೆ, ಬಂದೂಕುಧಾರಿ ಭಧ್ರತಾ ಸಿಬ್ಬಂದಿಗಳ ನೇಮಕವನ್ನು ದ್ವಿಗುಣಗೊಳಿಸಲಾಗಿದೆ.

ಆದರೆ ನಗರದ ಹೆಚ್ಚು ಜನ ಸಂದಣಿಯುಳ್ಳ ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ಸಂಪೂರ್ಣ ಭದ್ರತೆ ಸಾಧ್ಯವಾಗಿಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಭಿಪ್ರಾಯಪಟ್ಟಿದೆ.

ತೆರೆಮರೆಯ ಯೋಧರು...

ಉಗ್ರರ ದಾಳಿಗೆ ತುತ್ತಾಗಿ ಮುಂಬೈ ಹೊತ್ತಿ ಉರಿಯುತ್ತಿದ್ದಾಗ ಬೆಂಕಿಯ ಜ್ವಾಲೆಗಳ ಜತೆಗೆ ಗುಂಡಿನ ಸುರಿಮಳೆಯನ್ನೂ ಎದುರಿಸಿದವರು ಅಗ್ನಿ ಶಾಮಕ ದಳದ ಸಿಬ್ಬಂದಿ. ಜೀವದ ಹಂಗು ತೊರೆದು ನೂರಾರು ಮುಗ್ಧರನ್ನು ಅಪಾಯದಿಂದ ಪಾರು ಮಾಡಿದವರು ಇವರು.

ಆದರೆ ಇವರ ಕಾರ್ಯ ಜನರ ಗಮನ ಸೆಳೆದಿದ್ದು ಕಡಿವೆು. ಬೃಹತ್ ಮುಂಬೈ ಮಹಾನಗರ ಪಾಲಿಕೆ ಇವರ ಕಾರ್ಯವನ್ನು ಮೆಚ್ಚಿ ಶೌರ್ಯ ಪ್ರಶಸ್ತಿ ಘೋಷಿಸಿದ್ದರೂ ಅದು ಇನ್ನೂ ಅವರ ಕೈ ಸೇರಿಲ್ಲ.  

ದಾಳಿ ನಡೆದ ಕಡೆ ಅಗ್ನಿ ಶಾಮಕ ದಳ ಸತತ ಮೂರು ದಿನಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತ್ತು. ಯಾವುದೇ ಶಸ್ತ್ರಾಸ್ತ್ರ ಹೊಂದಿರದ 1200ಕ್ಕೂ ಅಗ್ನಿ ಶಾಮಕ ಸಿಬ್ಬಂದಿ ಉಗ್ರರ ಎದುರೇ 400 ಮಂದಿಯನ್ನು ರಕ್ಷಿಸಿದ್ದರು.

ಇತರ ಸುದ್ದಿಗಳು
‘ಉಗ್ರ ಹೆಡ್ಲಿ ವಿರುದ್ಧ ರಾಹುಲ್ ಸಾಕ್ಷಿ’
ಬಿಗಿ ಪಟ್ಟಿಗೆ ಸಜ್ಜಾದ ಪ್ರತಿಪಕ್ಷಗಳು
9 ಮಂದಿಗೆ ಶಿಕ್ಷೆ, ಐವರು ದೋಷಮುಕ್ತ
ವಿದ್ಯುತ್ ಆಘಾತದಿಂದ ಪಾರಾದ ನಟ ಚಿರಂಜೀವಿ
ಮುಂಬೈ ಭದ್ರತೆ ಅಪೂರ್ಣ
ಸಂಸತ್ತಿನಲ್ಲೂ ರೈತರ ಪರ ದನಿ, ಮುಂದೂಡಲ್ಪಟ್ಟ ಕಲಾಪ
ಎಚ್ಚೆತ್ತ ಸರ್ಕಾರ, ತುರ್ತು ಸಭೆ
ಶೇಖ್ ಹಸೀನಾಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ರಾಜಧಾನಿಯಲ್ಲಿ ಪ್ರತಿಭಟನೆಗಿಳಿದ ಅನ್ನದಾತ
ಡಿ.22ರಂದು ಸಂಸತ್ತಿನಲ್ಲಿ ಲಿಬರ್‍ಹಾನ್ ವರದಿ ಮಂಡನೆ
ಸಚಿವ ಎ.ರಾಜಾ ಕೈಬಿಡಲು ಪ್ರಧಾನಿಗೆ ಜಯಾ ಪತ್ರ
ವಿಚಾರಣೆ ಹಾದಿತಪ್ಪಿಸುವ ಯತ್ನ: ಉಜ್ವಲ್ ನಿಕ್ಕಂ
ಇನ್ನುಸಾಮಾನ್ಯರ ಗತಿ?
ಸ್ವರ್ಣಮಂದಿರಕ್ಕೆ ಕೆನಡಾ ಪ್ರಧಾನಿ ಹಾರ್ಪರ್ ಭೇಟಿ
ತಳಮಟ್ಟದ ಸಂಶೋಧನೆ ಅಗತ್ಯ: ರಾಷ್ಟ್ರಪತಿ
ಓಬಳಾಪುರಂ ಅದಿರು ಮುಟ್ಟುಗೋಲಿಗೆ ಆಗ್ರಹ
ಕೌಟುಂಬಿಕ ದೌರ್ಜನ್ಯ: ಗ್ರಾಮಗಳಲ್ಲಿ ಅರಿವು ಇಲ್ಲ
ಸಾವಿರಾರು ಮೀನುಗಳ ಸಾವು
ಹರಿಯಾಣ: ನವಿಲು ಸಂತಾನ ಅಭಿವೃದ್ಧಿ ಕೇಂದ್ರ?
ಮಾದಕ ಪದಾರ್ಥ ಸಾಗಣೆ: ಮಹಿಳೆಯರ ಬಂಧನ
ಈಶಾನ್ಯ ರಾಜ್ಯಗಳಲ್ಲಿ ಲಘು ಭೂಕಂಪ
ಉಗ್ರನ ಬಂಧನ
ಮಧ್ಯಸ್ಥಿಕೆ ಬೇಡ ಭಾರತ ಗರ್ಜನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618