
ಅಲಂಕಾರದಲ್ಲಿ ಹೂವಿಗೆ ತನ್ನದೇ ಸ್ಥಾನವಿದೆ. ಹೂವಿನ ಅಲಂಕಾರ ಒಂದು ಕಲೆ. ಅವುಗಳಲ್ಲಿಯೂ ಹಲವು ವಿಧಗಳಿವೆ. ಅಂಥವುಗಳಲ್ಲಿ ಇಕೆಬಾನ ಕೂಡ ಒಂದು.
ಇಕೆಬಾನದಲ್ಲಿ ಹೂ ಮಾತ್ರವಲ್ಲ, ಎಲೆ, ಟೊಂಗೆಗಳೆಲ್ಲ ಬಳಕೆಯಾಗುತ್ತವೆ. ಅವುಗಳನ್ನೆಲ್ಲ ಸೇರಿಸಿ ಅಲಂಕರಿಸಿದಾಗ ಆ ಸೊಬಗೇ ಬೇರೆ. ಇಕೆಬಾನ ಕಲೆ ಆರಂಭವಾದದ್ದು ಜಪಾನ್‌ನಲ್ಲಿ. ಇವುಗಳಲ್ಲಿ ಇಕೆಬಾನ, ಓಹರಾ, ಸೊಗೆಟ್ಸು ಪ್ರಮುಖವಾದದ್ದು. ಸೊಗೆಟ್ಸು ಸ್ಕೂಲ್ ಆಫ್ ಇಕೆಬಾನ ಭಾರತದಲ್ಲಿಯೂ ಖ್ಯಾತಿ ಹೊಂದಿದ್ದು ಬೆಂಗಳೂರಿನಲ್ಲಿ ಅದನ್ನು ಕಲಿಸುವ ಶಾಲೆಯೂ ಇದೆ.
1970ರಿಂದ ಸೊಗೆಟ್ಸು ಇಕೆಬಾನಾ ಬೆಂಗಳೂರಿನಲ್ಲಿ ಖ್ಯಾತಿ
ಇವು ನೋಡುಗರ ಕಣ್ಣಿಗೆ ಹಬ್ಬದಂತೆ. ಇಂಥ ಪ್ರದರ್ಶನಗಳ ಹಿಂದಿನ ಉದ್ದೇಶವೂ ಸೇವೆಯೇ ಆಗಿದೆ. ಇಂಥ ಹಲವು ಪ್ರದರ್ಶನಗಳು ಈಗಾಗಲೇ ನಡೆದ್ದು ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತ ಬಂದಿವೆ. ಇಂದು ಈ ಸಂಘದಲ್ಲಿ 150ಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಪಡೆದಿದೆ. ಪ್ರಿಯಾ ರಂಗನಾಥನ್ ನೇತೃತ್ವದಲ್ಲಿ ಸೊಗೆಟ್ಸು ಅಧ್ಯಯನ ಗುಂಪು 1985ರಲ್ಲಿ ಇಲ್ಲಿ ಆರಂಭಗೊಂಡಿತು. 1991ರಲ್ಲಿ ಈ ಅಧ್ಯಯನ ತಂಡವನ್ನು ಸೊಗೆಟ್ಸು ಸ್ಕೂಲ್ ಆಫ್ ಇಕೆಬಾನ ಎಂದು ಮೇಲ್ದರ್ಜೆಗೇರಿಸಲಾಯಿತು.
ಈ ಶಾಲೆಯಲ್ಲಿ ಇಕೆಬಾನ ಕುರಿತು ತರಗತಿಗಳನ್ನು ನಡೆಸಲಾಗುವುದಲ್ಲದೆ ಕಾರ್ಯಾಗಾರಗಳೂ ನಡೆಯುತ್ತವೆ. ಜೊತೆಗೆ ಇಕೆಬಾನಾ ಪ್ರದರ್ಶನಗಳನ್ನೂ ನಡೆಸಲಾಗುತ್ತದೆ.