ಶನಿವಾರ, ಅಕ್ಟೋಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಪ್ರೀತಿ ಎಲ್ಲಾ ವಿಧವಾದ ‘ರೋಗ’ಗಳನ್ನೂ ಪರಿಹರಿಸುವ ‘ಮದ್ದು’. ಆದರೆ ಅದು ನಿಸ್ವಾರ್ಥ ಮತ್ತು ನಿಷ್ಕಲ್ಮಶವಾಗಿಲ್ಲದಿದ್ದರೆ ಸತ್ವಹೀನ.
--ಮಹಾತ್ಮಾ ಗಾಂಧೀಜಿ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಕರ್ನಾಟಕ ದರ್ಶನ
ವಾಣಿಜ್ಯ ಪುರವಣಿ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಮೆಟ್ರೊ ಮಂಗಳವಾರ
ಕೃಷಿ
ಯುವಜನ
ಶಿಕ್ಷಣ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕ್ರೀಡಾ ಪುರವಣಿ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ನೆರವಿಗೆ ಬಂದ ಯೋಧರಿಗೆ ಊಟಕ್ಕೂ ಪರದಾಟ
ಪ್ರಜಾವಾಣಿ ವಾರ್ತೆ / ಗಣೇಶ ಚಂದನಶಿವ
ಊಟಕ್ಕಾಗಿ ಪರದಾಡಿದ ಯೋಧರ ಸ್ಥಿತಿ ಕಂಡು ಕೆಲ ಮಾನವೀಯತೆ ಇರುವವರು ಒಂದೆರಡು ದಿನ ಖಾಸಗಿಯಾಗಿ ಊಟದ ವ್ಯವಸ್ಥೆ ಮಾಡಿದರು. ಗುರುವಾರದ ಹೊತ್ತಿಗೆ ಪರಿಸ್ಥಿತಿ ಹದಗೆಟ್ಟಿತು. ಹೋಟೆಲ್ ಎದುರು ನಿಂತಿದ್ದ ಯೋಧರ ಸ್ಥಿತಿ ಕಂಡು ಮರುಗಿದ ನಗರದ ಸಮಾಜ ಕಾರ್ಯಕರ್ತರೊಬ್ಬರು ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿದರು.


ವಿಜಾಪುರದ ಹೋಟೆಲ್ ಎದುರು ಗುರುವಾರ ರಾತ್ರಿ ಊಟಕ್ಕಾಗಿ ಕಾಯುತ್ತಿದ್ದ ಯೋಧರು.

ವಿಜಾಪುರ: ಅತಿವೃಷ್ಟಿ, ಪ್ರವಾಹದಿಂದ ತೊಂದರೆಗೀಡಾದವರ ರಕ್ಷಣೆಗೆ ಬಂದಿದ್ದ ಯೋಧರೇ ಸಂತ್ರಸ್ತರಾಗಿ ಊಟಕ್ಕಾಗಿ ಮೂರು ದಿನ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.

ಊಟ ನೀಡದೆ ಜಿಲ್ಲಾ ಆಡಳಿತ ಅಮಾನವೀಯತೆ ಮೆರೆದರೆ, ಮಾನವೀಯತೆ ಇರುವವರು ಅವರಿಗೆ ಮೂರು ದಿನ ಊಟಕೊಟ್ಟು ಜಿಲ್ಲೆಯ ಮಾನ ಕಾಪಾಡಿದ್ದಾರೆ.

ವಿಜಾಪುರ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದ ಅಪಾರ ಸಾವು-ನೋವು ಸಂಭವಿಸಿತು. ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯ ಸರಕಾರ ಸೇನೆಯ ಮೊರೆಹೊಕ್ಕಿತು. ‘ಭಾರತ-ಟಿಬೇಟಿಯನ್ ಸೀಮಾ ಸುರಕ್ಷಾ ದಳ’ದ 36 ಪರಿಣಿತ ಯೋಧರು ಪಂಜಾಬ್‌ದಿಂದ ಬೆಂಗಳೂರು ಮೂಲಕ ವಿಜಾಪುರಕ್ಕೆ ಅ.4ರಂದು ಧಾವಿಸಿದ್ದರು.

ಇವರೊಂದಿಗೆ ಹೈದರಾಬಾದ್, ಬೆಂಗಳೂರಿನಿಂದಲೂ ಸುಮಾರು 100ಕ್ಕೂ ಹೆಚ್ಚು ಜನ ಯೋಧರು ಬಂದಿದ್ದರು. ಇಂಡೋ-ಟಿಬೇಟಿಯನ್ ತಂಡದ ಯೋಧರಿಗೆ ಇಲ್ಲಿಯ ಬಾಗಲಕೋಟೆ ರಸ್ತೆಯಲ್ಲಿರುವ ನಗರಸಭೆ ಸಮುದಾಯ ಭವನದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು.

‘ಇಲ್ಲಿ ಕೆಲಸ ಇಲ್ಲ. ನೀವು ಹೊರಟು ಬಿಡಿ’ ಎಂದು ಜಿಲ್ಲಾಧಿಕಾರಿಗಳು ಈ ತಂಡದ ಯೋಧರನ್ನು ಮರುದಿನವೇ ಸೇವೆಯಿಂದ ಬಿಡುಗಡೆ ಮಾಡಿದರು. ಆದರೆ, ತಮ್ಮ ಸೇನೆಯ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ‘ಇದೇ 9ರವರೆಗೆ ನಿಮ್ಮನ್ನು ವಿಜಾಪುರಕ್ಕೆ ನಿಯೋಜಿಸಲಾಗಿದೆ. ಅಲ್ಲಿಯ ವರೆಗೆ ನೀವು ಅಲ್ಲಿಯೇ ಇರಬೇಕು’ ಎಂಬ ಕಟ್ಟಪ್ಪಣೆ ಬಂತು.

ಇದರಿಂದ ಇಕ್ಕಟ್ಟಿಗೆ ಸಿಲುಕಿದ ಈ ಯೋಧರಿಗೆ ವಾಪಸು ಹೋಗಲಾಗಲಿಲ್ಲ. ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂಬ ಕಾರಣ ನೀಡಿ ಜಿಲ್ಲಾ ಆಡಳಿತ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಿಲ್ಲ. ಹಣ ಇಲ್ಲದೆ ಇದ್ದ ಸ್ಥಿತಿಯಲ್ಲಿಯೇ ಹೊರಟು ಬಂದಿದ್ದ ಯೋಧರು ಸ್ವತಃ ಸಂತ್ರಸ್ತರಾದರು. ಊಟಕ್ಕೂ ಪರದಾಡಿದರು.

ಊಟಕ್ಕಾಗಿ ಪರದಾಡಿದ ಯೋಧರ ಸ್ಥಿತಿ ಕಂಡು ಕೆಲ ಮಾನವೀಯತೆ ಇರುವವರು ಒಂದೆರಡು ದಿನ ಖಾಸಗಿಯಾಗಿ ಊಟದ ವ್ಯವಸ್ಥೆ ಮಾಡಿದರು. ಗುರುವಾರದ ಹೊತ್ತಿಗೆ ಪರಿಸ್ಥಿತಿ ಹದಗೆಟ್ಟಿತು. ಹೋಟೆಲ್ ಎದುರು ನಿಂತಿದ್ದ ಯೋಧರ ಸ್ಥಿತಿ ಕಂಡು ಮರುಗಿದ ನಗರದ ಸಮಾಜ ಕಾರ್ಯಕರ್ತರೊಬ್ಬರು ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿದರು.

ಇತರ ಸುದ್ದಿಗಳು
ಪಾಕ್ ಸೇನಾ ಕೇಂದ್ರ ಮೇಲೆ ಉಗ್ರರ ದಾಳಿ
'ಕಾಬೂಲ್ ದಾಳಿ ಹಿಂದೆ ಐಎಸ್‌ಐ ಕೈವಾಡ'
ಜೈಪುರ ಕಳ್ಳಬಟ್ಟಿ: 7 ಜನರ ಸಾವು
ನಕ್ಸಲ್ ನಿಗ್ರಹಕ್ಕೆ ಸೇನೆ ಇಲ್ಲ: ಸಿಂಗ್
ನೆರವಿಗೆ ಬಂದಾರೆ ಪ್ರಧಾನಿ?
ಕರ್ನಾಟಕಕ್ಕೆ ತಾರತಮ್ಯ ಇಲ್ಲ
ಒಬಾಮಗೆ ಶಾಂತಿ ನೊಬೆಲ್
ಗಾಂಧಿಗೆ ಸಿಗದ ನೊಬೆಲ್ ಅನುಯಾಯಿಗಳಿಗೆ ಲಭ್ಯ!
ಅಪರೂಪದ ಸಾಧಕನಿಗೆ ರಾಷ್ಟ್ರಮಟ್ಟದ ಪುರಸ್ಕಾರ
ನೆರವಿಗೆ ಬಂದ ಯೋಧರಿಗೆ ಊಟಕ್ಕೂ ಪರದಾಟ
ಪ್ರವಾಹ: ಶೇ 10ರಷ್ಟು ತೋಟಗಾರಿಕಾ ಬೆಳೆ ನಾಶ
ಸಾವಿನ ಮನೆಯ ಕದ ತಟ್ಟಿ ಬಂದ ಮಹಿಳೆಯರು..
ಚಂದ್ರನಲ್ಲಿ ನೀರ್ಗಲ್ಲು ಪತ್ತೆಗೆ ನಾಸಾ ಪ್ರಯೋಗ
ಷೇರು ಪೇಟೆ; 200 ಅಂಶಗಳ ಕುಸಿತ
11.34 ಲಕ್ಷ ಹೆಕ್ಟೇರ್ ಬೆಳೆ ಹಾನಿ
ಮೇಘಾಲಯದಲ್ಲಿ ಪ್ರವಾಹ: 4 ಸಾವು
ಶೀಘ್ರ 2,000 ಗ್ರಾಮಗಳ ಸ್ಥಳಾಂತರ
‘ಪರಿಹಾರ ನಿಧಿಗಾಗಿ ಕ್ರಿಕೆಟ್ ಪಂದ್ಯ’
ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದ ಜನಸಾಗರ
ನಗರದಲ್ಲಿ ಇ-ತ್ಯಾಜ್ಯ ಕಸದ ತೊಟ್ಟಿ
ಕ್ರೀಡಾ ಪತ್ರಕರ್ತ ರಾಜನ್ ಬಾಲಾ ನಿಧನ
‘ಭಾರತೀಯ ವಿಜ್ಞಾನಕ್ಕೆ ವೇದ ಮೂಲ’
ಇನ್ಫೊಸಿಸ್: ರೂ 1,540 ಕೋಟಿ ಲಾಭ
ಬ್ಯಾಂಕ್ ಖಾತೆ ವಿವರ ನೀಡಿ
ಪ್ರತ್ಯೇಕ ಅಪಘಾತ : ಮೂವರ ಸಾವು
ಶುಭಾ ಹೊಸ ರಾಷ್ಟ್ರೀಯ ದಾಖಲೆ
ಹೆಣ್ಣು ಶಿಶುಗಳ ಹತ್ಯೆ: ತಾಯಿ, ಅಜ್ಜಿ ಬಂಧನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618