ಸೋಮವಾರ , ಅಕ್ಟೋಬರ್ 12, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಹೃದಯವಂತಿಕೆ ಇರುವವರನ್ನು ಸುಲಭವಾಗಿ ಹೆದರಿಸುವುದು ಸಾಧ್ಯವಿಲ್ಲ.
--ಸಾಕ್ರೆಟೀಸ್
ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ವಾಣಿಜ್ಯ ಪುರವಣಿ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಮೆಟ್ರೊ ಮಂಗಳವಾರ
ಕೃಷಿ
ಯುವಜನ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ಸಹಕಾರಿ ಕ್ಷೇತ್ರದಲ್ಲಿ ‘ನಂಬಿಕೆ’ ಕುಸಿತ
ಪ್ರಜಾವಾಣಿ ವಾರ್ತೆ
ರೈತರು ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ ಇಲ್ಲಿ ವಿಷಾದಿಸಿದರು.


ಮೈಸೂರು: ರೈತರು ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ ಇಲ್ಲಿ ಭಾನುವಾರ ವಿಷಾದಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತಮ್ಮ ಬ್ಯಾಂಕ್ ಸಿಬ್ಬಂದಿಗೆ ಏರ್ಪಡಿಸಿದ್ದ ‘ಪ್ರೇರಣ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಸಾಲ ಪಡೆದವರೇ ಸಾಲ ಸೌಲಭ್ಯ ಹೊಂದುತ್ತಿದ್ದಾರೆ. ಕೊಟ್ಟವರಿಗೆ ಸಾಲ ಕೊಡಲಾಗುತ್ತಿದೆ. ಹೊಸದಾಗಿ ರೈತರಿಗೆ ಸಾಲ ನೀಡುವ ಪ್ರಯತ್ನ ಮಾಡುತ್ತಿಲ್ಲ. ಬಹುತೇಕರು ಖಾಸಗಿಯಾಗಿ ಶೇ 5-10ರಷ್ಟು ಬಡ್ಡಿ ತೆತ್ತು ಸಾಲ ಪಡೆಯುತ್ತಿದ್ದಾರೆ. ಇಂತಹ ವ್ಯವಸ್ಥೆಯಿಂದಾಗಿ ರೈತರು ಸಹಕಾರಿ ಕ್ಷೇತ್ರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದರು.

ವಾಣಿಜ್ಯ ಬ್ಯಾಂಕುಗಳು ರೈತರಿಗೆ ಸಾಲ ಕೊಡುತ್ತಿಲ್ಲ. ಸಹಕಾರಿ ಸಂಸ್ಥೆಗಳಿಂದಲೂ ಸಾಲ ಸಿಗದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ರೈತರ ಮೇಲೆ ಖಾಸಗಿಯವರ ಹಿಡಿತ ತಪ್ಪಿಸುವ ಸಲುವಾಗಿಯೇ ಸರ್ಕಾರ ಶೇ 3ರ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದೆ. ಅದನ್ನೂ ಸರಿಯಾಗಿ ತಲುಪಿಸದಿದ್ದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಜನರು ಸಹಕಾರಿ ಸಂಸ್ಥೆಗಳಿಂದ ಹೆಚ್ಚು ಸಾಲ ಸೌಲಭ್ಯ ಪಡೆದಿದ್ದಾರೆ. ಇದರಿಂದಾಗಿ ಸಾಲ ಮನ್ನಾ ಸಂದರ್ಭದಲ್ಲಿ ಅಲ್ಲಿನ ಭಾಗಕ್ಕೆ ಒಂದೂವರೆ ಸಾವಿರ ಕೋಟಿಗೂ ಹೆಚ್ಚು ಅನುಕೂಲ ಸಿಕ್ಕಿದೆ. ಸಾಲ ವಸೂಲಿಯಲ್ಲೂ ಶೇ 90ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದಾರೆ. ಈ ಎಲ್ಲದರಿಂದ ಹೆಚ್ಚು ಅವಕಾಶ, ಸೌಲಭ್ಯ ಸಿಕ್ಕುವಂತಾಯಿತು. ಆದರೆ ಈ ಭಾಗದಲ್ಲೂ ಹೆಚ್ಚು ಜನರಿಗೆ ಸಾಲ ಕೊಟ್ಟಿದ್ದರೆ ಅನುಕೂಲ ಆಗು ತಿತ್ತು, ರೈತರು ಮುಂದೆ ಬರಲು ಸಾಧ್ಯವಾಗುತಿತ್ತು. ಜತೆಗೆ ಸಹಕಾರಿ ಸಂಸ್ಥೆಗಳ ಮೇಲೂ ಮತ್ತಷ್ಟು ವಿಶ್ವಾಸ  ಬರುತಿತ್ತು ಎಂದು ವಿವರಿಸಿದರು.

ಅಧಿಕಾರಿಗಳು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಆತ್ಮಾವಲೋಕನ ಮಾಡಿಕೊಂಡು, ಕಾರ್ಯದಕ್ಷತೆ ಬಗ್ಗೆ ಪರಾಮರ್ಶಿಸಿಕೊಳ್ಳಬೇಕಿದೆ. ಯಾವುದೇ ಸಹಕಾರಿ ಸಂಘ, ಸಂಸ್ಥೆ ಮುಚ್ಚಿದರೆ ಅದಕ್ಕೆ ಅಧಿಕಾರಿಗಳೇ ಕಾರಣರಾಗುತ್ತಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ಯಾವುದೇ ಸಂಸ್ಥೆಯೂ ನಷ್ಟ ಹೊಂದುವುದಿಲ್ಲ, ಮುಚ್ಚುವುದಿಲ್ಲ. ಅಂತಹ ಆಗುಹೋಗುಗಳಿಗೆ ಅಧಿಕಾರಿಗಳೇ ಹೊಣೆಗಾರರು. ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಂಡರೆ ರೈತರಿಗೆ ಕಿಂಚಿತ್ತಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಸಿದ್ದೇಗೌಡ, ನಿರ್ದೇಶಕರಾದ ಪಿ.ನಾಗರಾಜ್, ಎಸ್.ರಾಮಕೃಷ್ಣೇಗೌಡ, ಜಿ.ಮಡಿವಾಳಪ್ಪ, ರಾಮೇಗೌಡ, ಕೆ.ಉಮಾಶಂಕರ್, ಆಂಜನೇಯ, ಬಿ.ವಿ.ಶೇಷಾದ್ರಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸಿ.ಯತೀಶ್‌ಕುಮಾರ್, ಜನರಲ್ ಮ್ಯಾನೇಜರ್ ತಿಮ್ಮೇಗೌಡ, ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರಾದ ಉಮೇಶ್, ಬಿ.ನಾಗರಾಜ್ ಇತರರು ಉಪಸ್ಥಿತರಿದ್ದರು.

ಇತರ ಸುದ್ದಿಗಳು
‘ಕೃಷಿ ತೊರೆಯುತ್ತಿರುವ ರೈತರು’
ಬೆಳೆ ಹಾನಿ ತಂದ ಆಘಾತ: ಎದೆಯೊಡೆದು ರೈತರ ಸಾವು
ಸಾಲ ಬಾಧೆ: ರೈತ ಆತ್ಮಹತ್ಯೆ
ಅತಿವೃಷ್ಟಿಗೆ ನಲುಗಿದ ಲಾವಣಿದಾರರು
ರಸಗೊಬ್ಬರ: ರೈತರಿಂದ ಹೆದ್ದಾರಿ ತಡೆ
ಕಳಪೆ ಆಹಾರ: ವಿದ್ಯಾರ್ಥಿಗಳ ಧರಣಿ
ವಾಹನ ಡಿಕ್ಕಿ: ಮೂರು ಬಲಿ
ಗೋಡೆ ಕುಸಿದು ಮಗು ಸಾವು
ನೆರೆ ಸಂತ್ರಸ್ತ ದೇವದಾಸಿಯರಿಗೆ ನೆರವು
ತರೀಕೆರೆ: 2.12 ಲಕ್ಷ ನಿಧಿ ಸಂಗ್ರಹ
ಪರಿಹಾರ ಕಾರ್ಯ ಚುರುಕಿಗೆ ಸಲಹೆ
ಸಂತ್ರಸ್ತರ ಸಂತೈಸಿದ ‘ಕಾವ್ಯ ಕಂಬನಿ’
ಕೋಮುವಾದದಿಂದ ಪ್ರಜಾಪ್ರಭುತ್ವ ದುರ್ಬಲ
‘ಮಾನವ ಹಕ್ಕುಗಳ ಅರಿವು ಅಗತ್ಯ’
ಭಾರತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಹುದ್ದೆ
ಸಂಪನ್ಮೂಲ ಕ್ರೋಡೀಕರಣ: ನಿವೇಶನ ಹರಾಜಿಗೆ ಚಿಂತನೆ
ಸಹಕಾರಿ ಕ್ಷೇತ್ರದಲ್ಲಿ ‘ನಂಬಿಕೆ’ ಕುಸಿತ
ಸಮಾಜವಾದಿ 75: ಅ.25ಕ್ಕೆ ಸಮಾವೇಶ
‘ಕುವೆಂಪು ಸಂದೇಶ ಹಳ್ಳಿ ತಲುಪಲಿ’
ಕಣಕಟ್ಟೆ ಹೋಬಳಿಗೆ ನೀರು: ರೂ. 70 ಕೋಟಿ ಯೋಜನೆ
ಚಿಕ್ಕಮಗಳೂರು ಜಿಲ್ಲೆ
ಕರಾವಳಿ
ಚೆಕ್‌ಪೋಸ್ಟ್ ಸ್ಥಳಾಂತರ: ಗ್ರಾಮಸ್ಥರ ಪ್ರತಿಭಟನೆ
ಹುಬ್ಬಳ್ಳಿ - ಧಾರವಾಡ ಜಿಲ್ಲೆ
ಬೆಳಗಾವಿ ಜಿಲ್ಲೆ
ಬಾಗಲಕೋಟೆ ಜಿಲ್ಲೆ
ಉತ್ತರ ಕನ್ನಡ ಜಿಲ್ಲೆ
ಹಾವೇರಿ ಜಿಲ್ಲೆ
ಗದಗ ಜಿಲ್ಲೆ
ವಿಜಾಪುರ ಜಿಲ್ಲೆ
ಬಳ್ಳಾರಿ ಜಿಲ್ಲೆ
ಬೀದರ್ ಜಿಲ್ಲೆ
ರಾಯಚೂರು ಜಿಲ್ಲೆ
ಕೊಪ್ಪಳ ಜಿಲ್ಲೆ
ಗುಲ್ಬರ್ಗ ಜಿಲ್ಲೆ
ದಾವಣಗೆರೆ ಜಿಲ್ಲೆ
ಶಿವಮೊಗ್ಗ ಜಿಲ್ಲೆ
ಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ ಜಿಲ್ಲಾ ಸುದ್ದಿಗಳು
ಮಂಡ್ಯ ಜಿಲ್ಲೆ ಸುದ್ದಿಗಳು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618