ಇಸ್ಲಾಮಾಬಾದ್: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತೆಂಬ ಆರೋಪಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಯೂನಿಸ್ ಖಾನ್ ರಾಜೀನಾಮೆ ನೀಡಿದ್ದಾರೆ.
ಮಂಗಳವಾರದಂದು ಯೂನಿಸ್ ಖಾನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಏಜಾಸ್ ಬಟ್ ಅವರಿಗೆ ರಾಜೀನಾಮೆ ಸಲ್ಲಿಸದರೆಂದು ಆನ್‍ಲೈನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಸೋತದ್ದು ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಎಂಬ ಪಾಕಿಸ್ತಾನ ಸಂಸತ್ತಿನ ಕ್ರೀಡಾ ಸ್ಥಾಯಿ ಸಮಿತಿಯ ಆರೋಪಗಳಿಂದ ಬೇಸತ್ತು ಯೂನಿಸ್ ಖಾನ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆಂದು ಹೇಳಲಾಗುತ್ತದೆ.
'ಸ್ಥಾಯಿ ಸಮಿತಿಯ ಅಧ್ಯಕ್ಷರು ಸುಳ್ಳು ಆರೋಪಗಳನ್ನು, ವದಂತಿಗಳನ್ನು ಹರಡುತ್ತಿದ್ದಾರೆ. ಈ ಸ್ಥಿತಿಯಲ್ಲಿ ನಾಯಕನಾಗಿ ಮಮುಂದುವರಿಯಲು ನನಗೆ ಕಷ್ಟವಿದೆ. ಇದರಿಂದ ನನಗೆ ನೋವಾಗಿದೆ ಆದರೂ ನಾನು ರಾಷ್ಟ್ರೀಯ ಹಿತವನ್ನು ಗಮನದಲ್ಲಿಟ್ಟುಕೊಂಡು ನಾನು ಆಡಿದೆ' ಎಂದು ಯೂನಿಸ್ ಖಾನ್ ಹೇಳಿದ್ದಾರೆ.