ಶನಿವಾರ, ಅಕ್ಟೋಬರ್ 17, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನ್ಯಾಯ ಪ್ರಾಮಾಣಿಕರಿಗೆ ಸಿಕ್ಕೇ ಸಿಗುತ್ತದೆ. ಆದರೆ ತಡವಾಗಿ.
--ಶೆಲ್ಲಿ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಚಾಂಪಿಯನ್ಸ್ ಲೀಗ್: ಆತಿಥೇಯರ ಮುಂದೆ ಭಾರಿ ಸವಾಲು
ಚಾಲೆಂಜರ್ಸ್ -ಡೇರ್‌ಡೆವಿಲ್ಸ್ ಹಣಾಹಣಿ
ಪ್ರಜಾವಾಣಿ ವಾರ್ತೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ್ದು ಮತ್ತದೇ ಸಂಕಷ್ಟದ ಪರಿಸ್ಥಿತಿ. ಆದರೆ ಈ ಬಾರಿ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಏಕೆಂದರೆ...


ಬೆಂಗಳೂರು:  ಗೆದ್ದರಷ್ಟೇ ಸಾಲದು, ಭಾರಿ ಅಂತರದಿಂದ ಜಯಿಸಬೇಕು. ಆದರೂ ಉಳಿದ ತಂಡಗಳ ಫಲಿತಾಂಶದ ಮೇಲೆ ಚಾಲೆಂಜರ್ಸ್ ಭವಿಷ್ಯ ಅವಲಂಬಿತವಾಗಿದೆ.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ದೆಹಲಿ ಡೇರ್‌ಡೆವಿಲ್ಸ್ ಎದುರು ಆಡಲು ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಳಿಯಲಿರುವ ಬೆಂಗಳೂರು ತಂಡದ ಮುಂದೆ ದೊಡ್ಡ ಸವಾಲುಗಳೇ ಇವೆ.

ಸೂಪರ್ ಎಂಟರ ‘ಬಿ’ ಗುಂಪಿನಲ್ಲಿ ಈಗಾಗಲೇ ಚಾಲೆಂಜರ್ಸ್ ಎದುರು ಜಯಿಸಿರುವ ವಿಕ್ಟೋರಿಯಾ ಬುಶ್‌ರೇಂಜರ್ಸ್ ನಾಲ್ಕು ಪಾಯಿಂಟ್ ಹೊಂದಿದೆ. ಜೊತೆಗೆ ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ. ಅನಿಲ್ ಕುಂಬ್ಳೆ ಪಡೆ ನಾಲ್ಕರ ಘಟ್ಟ ಪ್ರವೇಶಿಸಬೇಕಾದರೆ ವಿಕ್ಟೋರಿಯಾ ತಂಡ ಕೇಪ್ ಕೋಬ್ರಾಸ್ ಎದುರು ಗೆಲ್ಲಬೇಕು. ಕೋಬ್ರಾಸ್ ತಂಡ ದೆಹಲಿ ವಿರುದ್ಧ ಸೋಲಬೇಕು. ಮುಖ್ಯವಾಗಿ ದೆಹಲಿ ವಿರುದ್ಧ ಅನಿಲ್ ಕುಂಬ್ಳೆ ಪಡೆ ಭಾರಿ ಅಂತರದಿಂದ ಗೆಲ್ಲಬೇಕು.

ಹಾಗಾಗಿ ಬೆಂಗಳೂರು ತಂಡ ಈಗ ಒತ್ತಡಕ್ಕೆ ಸಿಲುಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಈ ತಂಡದ ಅನುಭವಿ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಾಗಿದೆ. ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ತಿಲಕ್‌ರತ್ನೆ ದಿಲ್ಶಾನ್ ಅವರಂತಹ ಆಟಗಾರರನ್ನು ಹೊಂದಿರುವ ದೆಹಲಿ ಗೆಲುವಿನ ವಿಶ್ವಾಸದಲ್ಲಿದೆ.

ಶನಿವಾರ ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ವಿಕ್ಟೋರಿಯಾ ಹಾಗೂ ಕೋಬ್ರಾಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದರೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸೆಮಿಫೈನಲ್ ತಲುಪುವುದು ಖಚಿತವಾಗಲಿದೆ.

ತಂಡಗಳು ಇಂತಿವೆ: ರಾಯಲ್ ಚಾಲೆಂಜರ್ಸ್: ಅನಿಲ್ ಕುಂಬ್ಳೆ (ನಾಯಕ), ಜಾಕ್ ಕಾಲಿಸ್, ರಾಬಿನ್ ಉತ್ತಪ್ಪ, ರಾಹುಲ್ ದ್ರಾವಿಡ್, ರಾಸ್ ಟೇಲರ್, ಮಾರ್ಕ್ ಬೌಷರ್, ಬಿ.ಅಖಿಲ್, ವಿರಾಟ್ ಕೊಹ್ಲಿ, ಆರ್.ವಿನಯ್ ಕುಮಾರ್, ಪ್ರವೀಣ್ ಕುಮಾರ್, ವಾನ್ ಡರ್ ಮೆರ್ವ್, ಡೇಲ್ ಸ್ಟೇಯ್ನಿ, ಭುವನೇಶ್ವರ್ ಕುಮಾರ್, ಮನೀಷ್ ಪಾಂಡೆ ಹಾಗೂ ರಾಜೇಶ್ ಬಿಷ್ಣೋಯಿ.

ದೆಹಲಿ ಡೇರ್‌ಡೆವಿಲ್ಸ್: ಗೌತಮ್ ಗಂಭೀರ್ (ನಾಯಕ), ವೀರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಶಾನ್, ದಿನೇಶ್ ಕಾರ್ತಿಕ್, ಓವಾಯಿಸ್ ಷಾ, ಮನೋಜ್ ತಿವಾರಿ, ರಜತ್ ಭಟಿಯಾ, ಗ್ಲೆನ್ ಮೆಕ್‌ಗ್ರಾ, ಆಶೀಶ್ ನೆಹ್ರಾ, ಡಿರ್ಕ್ ನ್ಯಾನ್ಸ್, ಅಮಿತ್ ಮಿಶ್ರ, ಪ್ರದೀಪ್ ಸಂಗ್ವಾನ್ ಹಾಗೂ ಆವಿಷ್ಕಾರ್ ಸಾಳ್ವಿ.

ಪಂದ್ಯದ ಆರಂಭ: ರಾತ್ರಿ ಎಂಟು ಗಂಟೆಗೆ

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್ (ಇಎಸ್‌ಪಿಎನ್-ಸ್ಟಾರ್ ಸ್ಪೋರ್ಟ್ಸ್)

ಇತರ ಸುದ್ದಿಗಳು
ಸೆಮಿಫೈನಲ್‌ಗೆ ಸಾನಿಯಾ
ಕಾಮನ್‌ವೆಲ್ತ್ ಕೂಟದ ಸಂಘಟನಾ ಸಮಿತಿಗೆ ಸಿಜಿಎಫ್ ತಿರುಗೇಟು
ಚಾಲೆಂಜರ್ಸ್ -ಡೇರ್‌ಡೆವಿಲ್ಸ್ ಹಣಾಹಣಿ
ಸ್ಕ್ವಾಷ್: ಘೋಷಲ್, ದೀಪಿಕಾಗೆ ಸೋಲು
ಪಿಸಿಬಿ ಸಭೆಗೆ ಹಾಜರಾಗದ ಯೂನಿಸ್
ಕ್ರಿಕೆಟ್: ಟ್ರಿನಿಡಾಡ್‌ಗೆ ಜಯ ತಂದಿತ್ತ ಕೀರನ್ ಪೊಲಾರ್ಡ್
ಕ್ರಿಕೆಟ್: ಬಿಷಪ್ ಕಾಟನ್, ಪ್ರೆಸಿಡೆನ್ಸಿಗೆ ಪ್ರಶಸ್ತಿ
ಕ್ರಿಕೆಟ್: ನಿಶಾಂತ್ ಶತಕ
ಈಗಲ್ಸ್ ಜಯಭೇರಿ
ಹಿರಿಯರ ಅಥ್ಲೆಟಿಕ್ಸ್: ಮಾರಪ್ಪಗೆ ಸ್ವರ್ಣ ‘ಡಬಲ್’ ಸಂಭ್ರಮ
ಆರ್ಚರಿ ಆಯ್ಕೆ ಟ್ರಯಲ್ಸ್
ಟೆನಿಸ್: ಭಾರತದ ಸವಾಲು ಅಂತ್ಯ
‘ಪುಟಿದೇಳುತ್ತದೆ ಟೀಮ್ ಇಂಡಿಯಾ’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618