ನವದೆಹಲಿ: ವಿಶ್ವದ 32ನೇ ರ್‍ಯಾಂಕಿಂಗ್‌ನ ಆಟಗಾರ ಘೋಷಲ್ 6-11, 4-11, 9-11 ರಲ್ಲಿ ಈಜಿಪ್ಟ್‌ನ ರಾಮಿ ಅಶೌರ್ ಎದುರು ಪರಾಭವಗೊಂಡರು. ರಾಮಿ 27 ನಿಮಿಷಗಳಲ್ಲೇ ಪಂದ್ಯ ತಮ್ಮದಾಗಿಸಿಕೊಂಡರು.
ಮಹಿಳೆಯರ ಡಬ್ಲ್ಯುಐಎಸ್‌ಪಿಎ ಗೋಲ್ಡ್ ಸ್ಕ್ವಾಷ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ದೀಪಿಕಾ 8-11, 11-9, 7-11, 7-11 ರಲ್ಲಿ ಈಜಿಪ್ಟ್‌ನ ರನೀಮ್ ಎಲ್ ವೆಲೀಲಿ ಕೈಯಲ್ಲಿ ನಿರಾಸೆ ಅನುಭವಿಸಿದರು. ಅರ್ಹತಾ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಲ್ಲಿಕಲ್ ಈ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸಿದ ಅತಿಕಿರಿಯ ಆಟಗಾರ್ತಿ ಎನಿಸಿದ್ದರು.