ಸೋಮವಾರ , ಅಕ್ಟೋಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನವು ಹೋರಾಟದ ಕಣ. ಹೋರಾಟದ ಮೂಲಕವೇ ನಾವು ಮುಂದಕ್ಕೆ ಸಾಗಬೇಕಾಗಿದೆ.
--ಸ್ವಾಮಿ ವಿವೇಕಾನಂದ
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಭೂಮಿಕಾ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಆರೋಗ್ಯ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ರಾಯಚೂರು ಜಿಲ್ಲಾ ಸುದ್ದಿಗಳು
ಪ್ರಜಾವಾಣಿ ವಾರ್ತೆ


ಬೆಳಗದ ಹಬ್ಬ... ಬಯಲೇ ಆಲಯ...
ಮಸ್ಕಿ: ಪ್ರತಿವರ್ಷ ದೀಪಾವಳಿ ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ. ಪ್ರತಿ ಮನೆ ಮನೆಯಲ್ಲೂ ದೀಪಗಳ ಬೆಳಕು. ಅಂಗಡಿ ಮುಂಗಟ್ಟುಗಳಿಗೆ ಭರ್ಜರಿ ವ್ಯಾಪಾರ. ಅದರೆ ಈ ವರ್ಷ ಹಬ್ಬದ ಅಬ್ಬರವೂ ಇಲ್ಲ. ಜನರಿಗೆ ಸಡಗರವೂ ಇಲ್ಲ. ಎಲ್ಲ ನೆರೆ ಹಾವಳಿಯಲ್ಲಿ ಕೊಚ್ಚಿಕೊಂಡು ಹೋಗಿವೆ.

ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳ ಜನರಿಗೆ ದೀಪಾವಳಿ ಸಂತೋಷ ತರುವುದಕ್ಕಿಂತ ಕತ್ತಲೆಯ ಕಷ್ಟವನ್ನೆ ತಂದಿಟ್ಟಿದೆ. ಹಬ್ಬದ ಸಂತೋಷದ ಭಾವನೆಗಿಂತ ಮುಂದಿನ ದಿನ ಹೇಗೆ ಎಂಬ ಚಿಂತೆ  ಎಲ್ಲೆಡೆ ಮನೆಮಾಡಿದೆ. ಒಂದೆಡೆ ಮನೆ-ಮಠ ಕಳೆದುಕೊಂಡು ಜನ ಬೀದಿಗೆ ಬಂದಿದ್ದಾರೆ. ಭೂಮಿಯಲ್ಲಿ ಹಾಕಿದ ಬೀಜ ಫಸಲು ಬರುವ ಮುನ್ನವೆ ಭೂಮಿಯೆ ನಾಶವಾಗಿ ರೈತರು ದಿಕ್ಕು ತೊಚದಂತಾಗಿ ಅಕ್ಷರಶಃ ಅನಾಥರಾಗಿದ್ದಾರೆ.

ಸರ್ಕಾರ ದಿನ ದಿನವೂ ಪರಿಹಾರದ ಹಣ ಕಾಗದದಲ್ಲಿ ಘೋಷಣೆಯಾಗುತ್ತದೆ. ಆದರೆ ನೈಜ ನಿರಾಶ್ರಿತರಿಗೆ ತಲುಪುತ್ತಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳಿಗೆ, ಅಧಿಕಾರಿಗಳಿಗೆ ರಾಜಕೀಯ ಹಿಂಬಾಲಕರ ಒತ್ತಡ, ಮನೆ ಬೀಳದಿದ್ದರೂ ಮನೆ ಬಿದ್ದಿದೆ ಎಂಬ ವರದಿ ಕೊಡಿ ಎಂಬ ಅಘೋಷಿತ ಆಜ್ಞೆ. ಗ್ರಾಮಲೆಕ್ಕಾಧಿಕಾರಿಗಳಿಗೆ ಪ್ರತಿನಿಧಿ ಮಾತು ಮೀರುವಂತಿಲ್ಲ. ಸುಳ್ಳು ಬರೆದರೆ ನೌಕರಿ ಕಳೆದುಕೊಳ್ಳುವ ಭಯ. ಉಭಯ ಸಂಕಟದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ.

ಆಡಳಿತ ಪಕ್ಷದವರು, ವಿರೋಧ ಪಕ್ಷದವರು ನೆರೆಯಲ್ಲೂ ತಮ್ಮ ವೋಟ್ ಬ್ಯಾಂಕಿನ ಲೆಕ್ಕಚಾರ. ಸಂತ್ರಸ್ತರ ನೆರವಿಗೆ ಧಾವಿಸುವುದು ಬಿಟ್ಟು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಿದ್ದಾರೆ. ಅದನ್ನೆಲ್ಲಾ ಪಕ್ಕಕಿಟ್ಟು ಮೂರಾಬಟ್ಟೆಯಾದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು, ಬಿದ್ದ ಮನೆಗಳಲ್ಲಿ ಬೆಳಕಿನ ದೀಪ ಹಚ್ಚುವ ಕೆಲಸದಲ್ಲಿ ತೊಡಗಬೇಕಾಗಿದೆ.

 ಬಡವರು ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ನೆರೆ ಎಲ್ಲರಿಗೂ ತನ್ನ ರುಚಿ ತೋರಿಸಿದೆ. ಈಗಲಾದರು ಅಧಿಕಾರಿಗಳು, ಜನಪ್ರತಿನಿಧಿಗಳು ಮಾನವೀಯತೆ ಮೆರೆದು ಸಮಾನತೆ ಹಣತೆ ಬೆಳಗಲಿ ಎಂಬುದೇ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ  ನಿರಾಶ್ರಿತರ ಆಶಯ.

ಸರ್ಕಾರ ವಿಫಲ: ಕೆ.ನೀಲಾ
ಜಾಲಹಳ್ಳಿ: ಮಳೆಯಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಕೇವಲ ಭೇಟಿ ನೀಡುವುದು ಮುಖ್ಯಮಂತ್ರಿಗಳ ಪ್ರಚಾರ ಗಿಟ್ಟಿಸಿಕೊಳ್ಳುವ ನಾಟಕವಾಗಿದ್ದು, ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಸರಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಮಖಂಡರಾದ ಕೆ.ನೀಲಾ ಆರೋಪಿಸಿದರು.

ಭಾನುವಾರ ದೇವದುರ್ಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ವೀರಗೋಟ ಗ್ರಾಮದಲ್ಲಿ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೂಲಿ ಹಣ ವಿತರಣೆ ಮಾಡದ ಈ ಸರ್ಕಾರ ಪ್ರವಾಹಕ್ಕೆ ತುತ್ತಾದ ಜನರಿಗೆ ಸಹಾಯ ಮಾಡುವುದು ಯಾವಾಗ ಎಂದು ಅವರು ಆರೋಪಿಸಿದರು. ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯದ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಬಿಜೆಪಿ ಕಾರ್ಯಕರ್ತರಿಗೆ ಪ್ರವಾಹದ ಕಾಮಗಾರಿ ಕೆಲಸ ನೀಡುವುದರಲ್ಲಿ ಸ್ಥಳೀಯ ಸಚಿವರು ಮಗ್ನರಾಗಿದ್ದು ಪರಿಹಾರ ವಿತರಣೆಯಲ್ಲೂ ಕೂಡ ತಾರತಮ್ಯ ಅನುಸರಿಸುವುದು ಸರಿಯಲ್ಲ ಎಂದರು. ಪಕ್ಷದ ಮುಖಂಡರಾದ ತಿಪ್ಪಯ್ಯ ನಾಯಕ, ಶಿವಾನಂದ ಹಟ್ಟಿ, ಸರಸ್ವತಿ ಹಟ್ಟಿ ಇದ್ದರು.

ನಿಮ್ ಜಿಲ್ಲೆಗೆ ನಾನೇ ಉಸ್ತುವಾರಿ... ಸಂತೋಷಾನಾ...!
ರಾಯಚೂರು: ಈ ರಾಯಚೂರು ಜಿಲ್ಲೆ ಉಸ್ತುವಾರಿ ನಾನೇ... ಸಂತ್ರಸ್ತರ ಕಷ್ಟ ಕೇಳ್ಲಿಕ್ಕೆ ಬಂದಿದ್ದೇನೆ... ಉಸ್ತುವಾರಿ ಸಚಿವರು ಇದ್ದರೇನು... ಇಲ್ಲದಿದ್ದರೇನು... ನಾನೇ ನಿಮ್  ಜಿಲ್ಲೆ ಉಸ್ತುವಾರಿ... ಸಂತೋಷಾನಾ?

ಇದು ಶನಿವಾರ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಹೇಳಿದ ಮಾತು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ ಉದಾಸಿಯವರೂ ಇಂಥ ಸಂದರ್ಭದಲ್ಲಿ ಸರಿಯಾಗಿ ಭೇಟಿ ಸಂತ್ರಸ್ತರ ಕಷ್ಟ ಕೇಳುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಸಿದ್ದು ಹೀಗೆ.

ಅವರ್‍ಯಾಕೆ. ನಾನೇ ನಿಮ್ ಜಿಲ್ಲೆ ಉಸ್ತುವಾರಿ ಅಂಥ ತಿಳ್ಕೋಳ್ಳಿ. ಎಲ್ಲ ಜಿಲ್ಲೆಗೂ ಭೇಟಿ ಕೊಡುತ್ತಿದ್ದೇನೆ. ನಾನೇ ಸಂತ್ರಸ್ತರ ಕಷ್ಟ ಕೇಳ್ತಾ ಇದ್ದೇನಲ್ಲ. ನಿಮ್ ಜಿಲ್ಲೆಗೂ ಪ್ರತಿವಾರ ಬಂದು ಸಂತ್ರಸ್ತ ಕುಟುಂಬಗಳ ಏನೇನೂ ಪರಿಹಾರ ಕಾರ್ಯ ಕೈಗೊಳ್ಳಬೇಕು ಅವುಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಚಟಾಕಿ ಹಾರಿಸಿದರು.

ಮನೆ ನಿರ್ಮಾಣಕ್ಕೆ 50 ಸಾವಿರ: ಸಿಎಂ
ರಾಯಚೂರು:  ಪ್ರವಾಹ ಪರಿಸ್ಥಿತಿಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರ ಒಟ್ಟು 50 ಸಾವಿರ ರೂ  ದೊರಕಿಸುತ್ತಿದೆ. ಪ್ರಥಮ ಹಂತವಾಗಿ 35 ಸಾವಿರ ದೊರಕಿಸಲಾಗುವುದು. ನಂತರ 15 ಸಾವಿರ ರೂಗಳನ್ನು ಎರಡನೇ ಹಂತದಲ್ಲಿ ದೊರಕಿಸಲಾಗುವುದು. ಈ ಹಣದಲ್ಲಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಳ್ಳಬೇಕು. ಅಲ್ಲದೇ ಸಂತ್ರಸ್ತರಿಗೆ ಬಟ್ಟೆಗಾಗಿ 1 ಸಾವಿರ, ಪಾತ್ರೆ ಪಡಗಕ್ಕೆ 1 ಸಾವಿರ ರೂಗಳನ್ನು ದೊರಕಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಪ್ರವಾಹಪೀಡಿತ ಜಿಲ್ಲೆಯ ಗಡಿ ಗ್ರಾಮವಾದ ಚಿಕ್ಕಮಂಚಾಲಿ ಗ್ರಾಮಕ್ಕೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಗ್ರಾಮದ ಈರಮ್ಮ ಎಂಬುವವರಿಗೆ 35 ಸಾವಿರ ರೂಗಳ ಚೆಕ್‌ನ್ನು ಮನೆ ನಿರ್ಮಾಣಕ್ಕೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ, ತೊಂದರೆಯಲ್ಲಿರುವವರಿಗೆ ಸರ್ಕಾರ ನೆರವು ದೊರಕಿಸುತ್ತಿದೆ. ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಅಥವಾ ಇನ್ಯಾವುದೇ ರೀತಿ ಪರಿಹಾರದ ಚೆಕ್ ಪಡೆಯುವಾಗ ಅಧಿಕಾರಿಗಳಿಗಾಗಲಿ, ಪುಢಾರಿಗಳಿಗಾಗಲಿ ಲಂಚ ಕೊಡಬಾರದು. ಅಧಿಕಾರಿಗಳೂ ಸಹ ಸಂತ್ರಸ್ತರಿಗೆ ತುರ್ತು ಪರಿಹಾರದ ಚೆಕ್ ವಿತರಿಸಬೇಕು. ಇದರಲ್ಲಿ ಯಾರೇ ಜನಪ್ರತಿನಿಧಿಗಳ ಅನವಶ್ಯಕ ಕಿರಿ ಕಿರಿಗೆ ಕಿವಿಗೊಡಬಾರದು ಎಂದು ಸೂಚಿಸಿರುವುದಾಗಿ ಹೇಳಿದರು.

ಸಂತ್ರಸ್ತರಿಗೆ ಈಗ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿದೆ. ಒಂದು ತಿಂಗಳವರೆಗೆ ಆಹಾರ ಧಾನ್ಯ ವಿತರಿಸುತ್ತಿದೆ. ಪರಿಹಾರ ಕಾಮಗಾರಿಯಲ್ಲಿ ಕೆಲಸ ಮಾಡುವವರಿಗೆ ದಿನಕ್ಕೆ 100 ರೂಗಳನ್ನು ದೊರಕಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

200 ಗ್ರಾಮ ಸ್ಥಳಾಂತರ: ಅನೇಕ ವರ್ಷಗಳಿಂದ ಪ್ರವಾಹ ಭೀತಿ ಎದುರಿಸುತ್ತಿರುವ ರಾಜ್ಯದ ಸುಮಾರು 200 ಗ್ರಾಮಗಳಲ್ಲಿ ಎತ್ತರ ಸ್ಥಳಕ್ಕೆ ಸ್ಥಳಾಂತರಿಸಿ ನವ ಗ್ರಾಮ ನಿರ್ಮಿಸುವ ಯೋಜನೆ ಇದೆ. ಈ ನವಗ್ರಾಮದಲ್ಲಿ 1 ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಲಾಗುವುದು. ಈ ನವಗ್ರಾಮ ನಿರ್ಮಾಣಕ್ಕೆ ಬೇಕಾದ ಅಗತ್ಯ ಭೂಮಿ ದೊರಕಿಸುವ ರೈತರಾಗಲಿ ಅಥವಾ ಇನ್ಯಾರೇ ಆಗಲಿ ಅವರಿಗೆ ಸೂಕ್ತ ಪರಿಹಾರ ಧನ ನೀಡಲಾಗುವುದು. ಅಲ್ಲದೇ ಈ ನವಗ್ರಾಮದಲ್ಲಿಯೇ ಅವರಿಗೆ ಒಂದು ಮನೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ರಸ್ತೆ, ಉದ್ಯಾನವನ, ಶಾಲೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ದೊರಕಿಸಲಾಗುವುದು ಎಂದು ಹೇಳಿದ ಅವರು, ಪ್ರವಾಹ ಪೀಡಿತ ಪ್ರದೇಶದಲ್ಲಿ 500 ಪ್ರಾಥಮಿಕ ಮತ್ತು 500 ಪ್ರೌಢ ಶಾಲೆಗಳನ್ನು ನಿರ್ಮಿಸಲಾಗುವುದು. ಈಗ ಶಾಲೆ ಆರಂಭಗೊಳ್ಳುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ದೊರಕಿಸಲಾಗುವುದು ಎಂದು ಹೇಳಿದರು.

ರೈತರ ಸಾಲ ಮನ್ನಾಗೆ ಒತ್ತಾಯ: ರಾಜ್ಯದಲ್ಲಿ ಸುಮಾರು 800 ಕೋಟಿಗೂ ಅಧಿಕ ರೈತರ ಸಾಲವಿದೆ. ಈ ಸಾಲ ಮನ್ನಾ ಮಾಡಲು ಕೇಂದ್ರಕ್ಕೆ ಮನವಿ ಮಾಡಲಾಗುವುದು. ಪರಿಹಾರ ಮೊತ್ತ ದ್ವಿಗುಣಗೊಳಿಸಲು ಕೋರಲಾಗುವುದು. ಕೇಂದ್ರ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದಲ್ಲಿ ಮತ್ತೆ ಜನತೆಯ ಬಳಿ ಜೋಳಿಗೆ ಹಿಡಿದು ರೈತರ ನೆರವಿಗೆ ಧಾವಿಸುತ್ತೇನೆ. ರೈತರು ಆತಂಕ ಪಡಬೇಕಿಲ್ಲ ಎಂದರು.

ಆತ್ಮಹತ್ಯೆ ದಾರಿ ಅಲ್ಲ: ಪ್ರವಾಹ ಬಂತು, ಹಾಳಾಯಿತು ಎಂದು ರೈತರು ಧೃತಿಗೆಡಬೇಕಿಲ್ಲ. ಅನ್ನ ಕೊಡುವ ರೈತ ಕಣ್ನೀರು ಹಾಕಬಾರದು. ಆತ್ಮಹತ್ಯೆಯಂಥ ಪ್ರಯತ್ನ ಮಾಡಲೇಬಾರದು. ಸರ್ಕಾರ ಸೂಕ್ತ ರೀತಿಯಲ್ಲಿ ನೆರವಿಗೆ ಧಾವಿಸುತ್ತಿವೆ ಎಂದು ಯಡಿಯೂರಪ್ಪ ಹೇಳಿದರು.

ಇತರ ಸುದ್ದಿಗಳು
ಅತಿವೃಷ್ಟಿ: ಪರಿಹಾರ ಕಾಮಗಾರಿಯೂ ಕಳಪೆ
ಖೋಟಾ ನೋಟು ಚಲಾವಣೆ: ಮೂರು ಆರೋಪಿಗಳ ಬಂಧನ
ದೇವೀರಮ್ಮಬೆಟ್ಟ: ಯುವತಿ ಸಾವು
ಕೊಂಗವಾಡ ಸ್ಥಳಾಂತರಕ್ಕೆ ಸಿಎಂ ಇಂದು ಚಾಲನೆ
3 ಹುಲಿ ಮರಿಗಳ ಜನನ
ಅಪಹೃತ ಕೊಡಗು ಉದ್ಯಮಿ, ಪುತ್ರ ಪತ್ತೆ
ದಾವಣಗೆರೆ ಜಿಲ್ಲಾ ಸುದ್ದಿಗಳು
ಶಿವಮೊಗ್ಗ ಜಿಲ್ಲಾ ಸುದ್ದಿಗಳು
ಚಿತ್ರದುರ್ಗ ಜಿಲ್ಲಾ ಸುದ್ದಿಗಳು
ಗುಲ್ಬರ್ಗ ಜಿಲ್ಲಾ ಸುದ್ದಿಗಳು
ಕೊಪ್ಪಳ ಜಿಲ್ಲಾ ಸುದ್ದಿಗಳು
ರಾಯಚೂರು ಜಿಲ್ಲಾ ಸುದ್ದಿಗಳು
ಬೀದರ್ ಜಿಲ್ಲಾ ಸುದ್ದಿಗಳು
ತುಮಕೂರು ಜಿಲ್ಲಾ ಸುದ್ದಿಗಳು
ವಿಜಾಪುರ ಜಿಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲಾ ಸುದ್ದಿಗಳು
ಗಾಂಧೀ ಮಾರ್ಗದ ಹೋರಾಟ’
ಕೋಲಾರ ಜಿಲ್ಲಾ ಸುದ್ದಿಗಳು
ಗದಗ ಜಿಲ್ಲಾ ಸುದ್ದಿಗಳು
ಹಾವೇರಿ ಜಿಲ್ಲಾ ಸುದ್ದಿಗಳು
ಕೊಡಗು ಜಿಲ್ಲಾ ಸುದ್ದಿಗಳು
ಉತ್ತರ ಕನ್ನಡ ಜಿಲ್ಲಾ ಸುದ್ದಿಗಳು
ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳು
ಬಾಗಲಕೋಟೆ ಜಿಲ್ಲಾ ಸುದ್ದಿಗಳು
ಮೈಸೂರು ಜಿಲ್ಲಾ ಸುದ್ದಿಗಳು
ಹಾಸನ ಜಿಲ್ಲಾ ಸುದ್ದಿಗಳು
ಕರಾವಳಿ
ಬೆಳಗಾವಿ ಜಿಲ್ಲಾ ಸುದ್ದಿಗಳು
ಮಂಡ್ಯ ಜಿಲ್ಲಾ ಸುದ್ದಿಗಳು
ಹುಬ್ಬಳ್ಳಿ - ಧಾರವಾಡ ಜಿಲ್ಲಾ ಸುದ್ದಿಗಳು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618