ಮಂಗಳವಾರ , ಅಕ್ಟೋಬರ್ 20, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಈ ಜೀವನಕ್ಕೆ ಒಂದು ಅರ್ಥವಿದ್ದರೆ, ಅದು ಮಾನವನ ವಿಚಾರಶೀಲತೆಯ ಪರಿಣಾಮದಿಂದ ಮಾತ್ರ.
--ಗಾಂಧೀಜಿ.
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ವಾಣಿಜ್ಯ ಪುರವಣಿ
ಮೆಟ್ರೊ ಶನಿವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಭೂಮಿಕಾ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಆರೋಗ್ಯ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ
ಅಂಬಾನಿ ಸೋದರರ ಕಲಹ ಸುಪ್ರೀಂಕೋರ್ಟ್‌ಗೆ
ಅನಿಲ ಪೂರೈಕೆ ವಿವಾದ: ಇಂದಿನಿಂದ ವಿಚಾರಣೆ
ಖ್ಯಾತ ಉದ್ಯಮಿಗಳಾದ ಮುಖೇಶ್ ಮತ್ತು ಅನಿಲ್ ಅಂಬಾನಿ ಸೋದರರ ಮಧ್ಯೆ ನೈಸರ್ಗಿಕ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದದ ವಿಚಾರಣೆಗೆ ಈಗ ವೇದಿಕೆ ಸಿದ್ಧಗೊಂಡಿದ್ದು, ಮಂಗಳವಾರದಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.


ನವದೆಹಲಿ (ಪಿಟಿಐ): ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್‌ಗೆ (ಆರ್‌ಎನ್‌ಆರ್‌ಎಲ್), ಪೂರ್ವ ನಿರ್ಧರಿತ ಬೆಲೆಗೆ  ಕೃಷ್ಣಾ - ಗೋದಾವರಿ ನದಿಪಾತ್ರದ ‘ಡಿ6’ ಅನಿಲ ನಿಕ್ಷೇಪಗಳಿಂದ ಮುಖೇಶ್ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್),  ನೈಸರ್ಗಿಕ ಅನಿಲ ಪೂರೈಸಲು ಹಿಂದೇಟು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಕೌಟುಂಬಿಕ ಒಪ್ಪಂದದ ಅನ್ವಯ, ಪ್ರತಿ ದಿನ 28 ದಶಲಕ್ಷ ಯೂನಿಟ್‌ಗಳಷ್ಟು ನೈಸರ್ಗಿಕ ಅನಿಲವನ್ನು ಪ್ರತಿ ಯೂನಿಟ್‌ಗೆ 2.34 ಡಾಲರ್ ಬೆಲೆಯಲ್ಲಿ 17 ವರ್ಷಗಳ ಕಾಲ ಪೂರೈಸಬೇಕು ಎಂದು ಅನಿಲ್ ಬಣ ಪ್ರತಿಪಾದಿಸುತ್ತಿದೆ. ಕೇಂದ್ರ ಸರ್ಕಾರ ಅನುಮೋದಿಸಿರುವ ಪ್ರತಿ ದಶಲಕ್ಷ ಬ್ರಿಟಿಷ್ ಯೂನಿಟ್‌ಗೆ  (ಎಂಎಂಬಿಟಿಯು) 4.20 ಡಾಲರ್ ದರದಲ್ಲಿ ಮಾತ್ರ ಅನಿಲ ಪೂರೈಸುವುದಾಗಿ ಮುಖೇಶ್ ಬಣ ಪಟ್ಟು ಹಿಡಿದಿದೆ.

ಬಾಂಬೆ ಹೈಕೋರ್ಟ್, ಅನಿಲ್  ಬಣದ ವಾದ ಎತ್ತಿ ಹಿಡಿದು ಜೂನ್‌ನಲ್ಲಿ ತೀರ್ಪು ನೀಡಿತ್ತು. ಇದನ್ನು ಮುಖೇಶ್ ಬಣವು  ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಸೋದರರ ಕಲಹದಲ್ಲಿ ತನಗೂ ಪಾತ್ರ ಇದೆ  ಕೇಂದ್ರ ಸರ್ಕಾರವೂ ಹೇಳಿಕೊಂಡಿದೆ. ನೈಸರ್ಗಿಕ ಅನಿಲವು ಸರ್ಕಾರದ ಆಸ್ತಿಯಾಗಿದ್ದು, ಅದರ ಮೇಲಿನ ಸ್ವಾಮಿತ್ವವನ್ನು ಎರಡು ಪ್ರತಿಸ್ಪರ್ಧಿ ಉದ್ಯಮ ಸಂಸ್ಥೆಗಳು ಪ್ರತಿಪಾದಿಸುವಂತಿಲ್ಲ ಎಂಬುದು ಸರ್ಕಾರದ ಧೋರಣೆಯಾಗಿದೆ.

click here
ಬಾಂಬೆ ಹೈಕೋರ್ಟ್ ತೀರ್ಪಿನಿಂದಾಗಿ ತನ್ನ ಕಾನೂನು ಹಕ್ಕುಗಳಿಗೆ ಧಕ್ಕೆ ಒದಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ.

ವಿಫಲ ಕದನ ವಿರಾಮ: ವಿವಾದವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುವ 10 ದಿನಗಳ ಮೊದಲು , ಅನಿಲ್ ಅಂಬಾನಿ, ಅಣ್ಣನ ಜತೆಗಿನ ಸಂಘರ್ಷ ಕೊನೆ ಹಾಡಲು ಬಯಸಿ ಕದನ ವಿರಾಮ ಘೋಷಿಸಿದ್ದರು. ತಮ್ಮಿಬ್ಬರ ಮಧ್ಯೆ ಇರುವ ವಿವಾದ ಬಗೆಹರಿಸಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ. ಅಣ್ಣನ ಜತೆ ಕುಳಿತು ಮಾತನಾಡಲು ತಾವು ಸಿದ್ಧ ಎಂದು ಅನಿಲ್ ಹೇಳಿಕೆ ನೀಡಿದ್ದರು.

ಅನಿಲ ಪೂರೈಕೆ ಮತ್ತು ಅದರ ಬೆಲೆಗೆ ಸಂಬಂಧಿಸಿದ ವಿವಾದ ಕೋರ್ಟ್‌ನಲ್ಲಿಯೇ ಇತ್ಯರ್ಥಗೊಳ್ಳಲಿ ಎಂದು ಮುಖೇಶ್ ಬಣ ಅಭಿಪ್ರಾಯಪಟ್ಟಿದೆ.

ಪ್ರತಿ ದಿನ ವಿಚಾರಣೆ: ಅಕ್ಟೋಬರ್ 20ರಿಂದ ಈ ವಿವಾದದ ವಿಚಾರಣೆಯನ್ನು ಪ್ರತಿ ದಿನ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರ ನೇತೃತ್ವದಲ್ಲಿನ ಪೀಠವು ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ನ್ಯಾಚುರಲ್, ಸರ್ಕಾರ ಮತ್ತು ಇತರ ಪ್ರತಿವಾದಿಗಳ ಅಹವಾಲು ಆಲಿಸಲಿದೆ.

ಆರ್‌ಐಎಲ್ ಪರ ಹರೀಶ್ ಸಾಳ್ವೆ, ಆರ್‌ಎನ್‌ಆರ್‌ಎಲ್ ಪರ ಮುಕುಲ್ ರೋಹ್ಟಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಪರಾಸರನ್ ಅವರು ಸರ್ಕಾರದ ಪರ ವಕೀಲರ ನೇತೃತ್ವವಹಿಸಲಿದ್ದಾರೆ.

ಇತರ ಸುದ್ದಿಗಳು
ಎನ್‌ಟಿಪಿಸಿ ಷೇರು ವಿಕ್ರಯ:ಅನುಮತಿ
ಐಪಿಒ: ‘ಸೆಬಿ’ ಅನುಮತಿಗೆ ಕಾದಿರುವ 60 ಕಂಪೆನಿಗಳು
ಅನಿಲ ಪೂರೈಕೆ; ಆರ್‌ಐಎಲ್‌ನಿಂದಸ್ಪಷ್ಟನೆ ಕೋರಿಕೆ
ಅನಿಲ ಪೂರೈಕೆ ವಿವಾದ: ಇಂದಿನಿಂದ ವಿಚಾರಣೆ
ತಿಂಗಳಿಗೊಮ್ಮೆ ಹಣದುಬ್ಬರ: ಅನುಮೋದನೆ
ನ್ಯಾಯಯುತ ಬೆಲೆಗೆ ಅವಶ್ಯಕ ಸರಕು
ಸ್ಥಳ ನಿಯೋಜನೆ: ಎಸ್‌ಬಿಐ ನಿಯಮ ವಾಪಸ್
‘ಬಿಇಎಂಎಲ್’ಗೆ‘ಸ್ಕೋಪ್’ ಪ್ರಶಸ್ತಿ ಪ್ರದಾನ
ಈರುಳ್ಳಿ: 80 ಲಕ್ಷ ಟನ್ ಉತ್ಪಾದನೆ?
ಮಿತವ್ಯಯಿ ಆಕರಕೋಶ ಬ್ಯಾಂಕಿಂಗ್ ಸೌಲಭ್ಯ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618