ಸೋಮವಾರ , ಸೆಪ್ಟೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಆಸೆಯಿಲ್ಲದ ಯಾವ ಕೆಲಸವೂ ಎಲ್ಲಿಯೂ ಇಲ್ಲ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸವೂ ಆಸೆಯಿಂದಲೇ ಪ್ರೇರಿತವಾದುದು.
-- ಹಿತೋಪದೇಶ
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಕ್ರಿಕೆಟ್: ಇಂದು ತ್ರಿಕೋನ ಸರಣಿ ಫೈನಲ್, ವಿಶ್ವಾಸದಲ್ಲಿ ಲಂಕಾ
ಸೇಡು ತೀರಿಸಿಕೊಳ್ಳಲು ಭಾರತ ತವಕ
ಪ್ರಜಾವಾಣಿ ವಾರ್ತೆ
ಏಕದಿನ ಕ್ರಿಕೆಟ್‌ನಲ್ಲಿ ಕೆಲ ದಿನಗಳಿಂದ ಪ್ರಬಲ ತಂಡವಾಗಿ ಹೊರಹೊಮ್ಮಿರುವ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಭಾರತ ಈಗ ಸಿಂಹಳೀಯ ನಾಡಿನಲ್ಲಿ ಏಕೋ ಕುಂಟುತ್ತಾ ಸಾಗುತ್ತಿದೆ. ಶ್ರೀಲಂಕಾ ಎದುರು ಲೀಗ್ ಪಂದ್ಯದಲ್ಲಿ ಶನಿವಾರ ಎದುರಾದ ಹೀನಾಯ ಸೋಲೇ ಇದಕ್ಕೆ ಕಾರಣ. ಆದರೆ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಇನ್ನೂ ಒಂದು ಅವಕಾಶವಿದೆ.


ಕೊಲಂಬೊ: ಆತಿಥೇಯ ಲಂಕಾ ವಿರುದ್ಧ ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್‌ನಲ್ಲಿ ಆಡಲು ಸೋಮವಾರ ಕಣಕ್ಕಿಳಿಯಲಿರುವ ಭಾರತಕ್ಕೆ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.

ಸರಣಿಯ ಮೊದಲ ಪಂದ್ಯದಲ್ಲಿ ತಿಣುಕಾಡುತ್ತಲೇ ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದ ‘ಮೆನ್ ಇನ್ ಬ್ಲೂ’ ಪಡೆ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ ಶ್ರೀಲಂಕಾ ಎದುರಿನ ಸೋಲು ಮತ್ತೆ ಯಥಾಸ್ಥಿತಿಗೆ ಮರಳಿಸಿದೆ. 139 ರನ್‌ಗಳ ಪರಾಭವ ಒಮ್ಮೆಲೇ ಆಘಾತಕ್ಕೆ ಕಾರಣವಾಗಿದೆ. ಬ್ಯಾಟಿಂಗ್ ವೈಫಲ್ಯವೇ ಭಾರತದ ಪರದಾಟಕ್ಕೆ ಪ್ರಮುಖ ಕಾರಣ. ದಿನೇಶ್ ಕಾರ್ತಿಕ್ ಹಾಗೂ ಯುವರಾಜ್ ಸಿಂಗ್ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

ಭಾರತ ಇತ್ತೀಚಿನ ದಿನಗಳಲ್ಲಿ ಲಂಕಾ ನೆಲದಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ತೋರಿದೆ. ಅದಕ್ಕೆ ಸಾಕ್ಷಿ ಈ ಹಿಂದೆ ನಡೆದ
ಎರಡೂ ಸರಣಿಗಳಲ್ಲಿ ಲಭಿಸಿದ ಗೆಲುವು. ಆದರೆ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಹಾಗೂ ವೇಗಿ ಜಹೀರ್ ಖಾನ್ ಅನುಪಸ್ಥಿತಿ ಈಗ ಕಾಡುತ್ತಿದೆ.

ಸಚಿನ್ ತೆಂಡೂಲ್ಕರ್ ಜೊತೆ ಲೀಗ್‌ನ ಎರಡು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ದಿನೇಶ್ ಕಾರ್ತಿಕ್ ‘ಕ್ಲಿಕ್’ ಆಗಲೇ ಇಲ್ಲ. ಜೊತೆಗೆ ಇದು ತೆಂಡೂಲ್ಕರ್ ತಮ್ಮ ಸಹಜ ಆಟವಾಡಲು ಅಡ್ಡಿಯಾಗುತ್ತಿದೆ. ಅವರು ಎರಡೂ ಪಂದ್ಯಗಳಲ್ಲಿ ಉತ್ತಮ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ದಾರೆ. ಮೊದಲ ಪಂದ್ಯದಲ್ಲಿ 46 ರನ್ ಗಳಿಸಿದ್ದ ಮಾಸ್ಟರ್ ಬ್ಲಾಸ್ಟರ್ ಮತ್ತೊಂದರಲ್ಲಿ 27 ರನ್ ಪೇರಿಸಿದ್ದರು. ಕಾರ್ತಿಕ್ ಬದಲಿಗೆ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿದರೆ ಅಚ್ಚರಿಪಡಬೇಕಾಗಿಲ್ಲ.

ಬೌಲಿಂಗ್‌ನಲ್ಲಿ ಮಿಂಚುತ್ತಿರುವ ಯುವರಾಜ್ ಬ್ಯಾಟಿಂಗ್‌ನಲ್ಲಿ ಏಕೋ ಎಡವುತ್ತಿದ್ದಾರೆ. ಕಿವೀಸ್ ಪಡೆ ಎದುರು ಪರಿಣಾಮಕಾರಿಯಾಗಿದ್ದ ಬೌಲಿಂಗ್ ಒಮ್ಮೆಲೆ ಕೈಕೊಟ್ಟಿದೆ. ಇಶಾಂತ್ ಶರ್ಮ ‘ಕ್ಲಿಕ್’ ಆಗುತ್ತಿಲ್ಲ. ಹಾಗಾಗಿ ಅವರ ಬದಲು ಪ್ರವೀಣ್ ಕುಮಾರ್ ಸ್ಥಾನ ಪಡೆಯಬಹುದು ಅಥವಾ ಮೊದಲೆರಡು ಪಂದ್ಯಗಳಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲು ನಾಯಕ ದೋನಿ ಬಯಸಬಹುದು.

ಶ್ರೀಲಂಕಾ ಲೀಗ್‌ನಲ್ಲಿ ಎರಡೂ ಪಂದ್ಯಗಳಲ್ಲಿ ಪ್ರಬುದ್ಧ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಪ್ರಭಾವಿ ಆಟ ತೋರುತ್ತಿದೆ. ಸನತ್ ಜಯಸೂರ್ಯ ಒಮ್ಮೆಲೆ ಫಾರ್ಮ್ ಕಂಡುಕೊಂಡಿರುವುದು ಭಾರತದ ಬೌಲರ್ಗಳ ಆತಂಕಕ್ಕೆ ಕಾರಣವಾಗಿದೆ. ಉಭಯ ತಂಡಗಳ ನಡುವಿನ ಕಳೆದ 7 ಫೈನಲ್‌ಗಳಲ್ಲಿ ಭಾರತ ಗೆದ್ದಿಲ್ಲ. ಹಾಗಾಗಿ ದೋನಿ ಪಡೆಗೆ ಇದೊಂದು ಸವಾಲು.

comment on this article
ಇತರ ಸುದ್ದಿಗಳು
ಸೇಡು ತೀರಿಸಿಕೊಳ್ಳಲು ಭಾರತ ತವಕ
ಡೈಮಂಡ್ಸ್‌ಗೆ ಮೊದಲ ಜಯ
ಗೆಲುವಿನ ದಡದಲ್ಲಿ ಮುಗ್ಗರಿಸಿದ ಮಲ್ನಾಡ್ ಗ್ಲ್ಯಾಡಿಯೇಟರ್ಸ್
‘ಫೈನಲ್‌ನಲ್ಲಿ ಟಾಸ್ ಗೆಲುವು ಮುಖ್ಯ’
ಇಂದಿನಿಂದ ಮೈಸೂರಿನಲ್ಲಿ ಅಖಿಲ ಭಾರತ ಟೆನಿಸ್
ಸೆರೆನಾ ಇದು ಸರಿನಾ?
ಫೈನಲ್‌ಗೆ ಕಿಮ್ ಕ್ಲೈಸ್ಟರ್ಸ್
ಟೆನಿಸ್: ಯೂಕಿ ಸವಾಲು ಅಂತ್ಯ
ಫುಟ್‌ಬಾಲ್: ನವರತ್ನ ತಂಡಕ್ಕೆ ಗೆಲುವು
ವೇಟ್‌ಲಿಫ್ಟಿಂಗ್: ಆಳ್ವಾಸ್‌ಗೆ ಪ್ರಶಸ್ತಿ
ಅಥ್ಲೆಟಿಕ್ಸ್: ಚಿನ್ನ ಗೆದ್ದ ಟೈಸನ್ ಗೇ
ಅಶೋಕ್‌ನಾಥ್ ಚಾಂಪಿಯನ್
ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಮೂರು ಪದಕ
ಗೆದ್ದು ಬೀಗಿದ ಬ್ರಿಗೇಡಿಯರ್ಸ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618