ಗುರುವಾರ, ಸೆಪ್ಟೆಂಬರ್ 17, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ-ವಿಚಾರ ಮಾತ್ರ.
--ಸ್ವಾಮಿ ವಿವೇಕಾನಂದ
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಭೂಮಿಕಾ
ತಂತ್ರಜ್ಞಾನ
ಯುವಜನ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ವಾಣಿಜ್ಯ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ಕಳಚಿದ ಅಷ್ಟ ಮಠಗಳ ಕೊಂಡಿ
ಶಿಕ್ಷಣ ಸಂಸ್ಥೆಗಳ ಜನಕ, ದಿಟ್ಟ ನಿಲುವಿನ ಅದಮಾರು ಶ್ರೀ
ರಾಮಕೃಷ್ಣ ಸಿದ್ರಪಾಲ / ಪ್ರಜಾವಾಣಿ ವಾರ್ತೆ
ಧಾರ್ಮಿಕ ಪರಂಪರೆಯ ಕೇಂದ್ರವಾದ ಉಡುಪಿಯಲ್ಲಿ ಆಧುನಿಕ ಶಿಕ್ಷಣದ ಕನಸು ಕಂಡ ಸ್ವಾಮೀಜಿ ಎಂಬುದಾಗಿ ಮಂಗಳವಾರ ವೃಂದಾವನಸ್ಥರಾದ ಅದಮಾರು ಮಠದ ವಿಬುಧೇಶತೀರ್ಥ ಸ್ವಾಮೀಜಿಯವರನ್ನು ಬಲ್ಲವರು ಗುರುತಿಸುತ್ತಾರೆ.


ಉಡುಪಿ: ಧಾರ್ಮಿಕ ಪರಂಪರೆಯ ಕೇಂದ್ರವಾದ ಉಡುಪಿಯಲ್ಲಿ ಆಧುನಿಕ ಶಿಕ್ಷಣದ ಕನಸು ಕಂಡ ಸ್ವಾಮೀಜಿ ಎಂಬುದಾಗಿ ಮಂಗಳವಾರ ವೃಂದಾವನಸ್ಥರಾದ ಅದಮಾರು ಮಠದ ವಿಬುಧೇಶತೀರ್ಥ ಸ್ವಾಮೀಜಿಯವರನ್ನು ಬಲ್ಲವರು ಗುರುತಿಸುತ್ತಾರೆ.

ಸ್ವಾಮೀಜಿ ನಿಧನದೊಂದಿಗೆ ಅಷ್ಟಮಠಗಳ ಹಿರಿಯ ಕೊಂಡಿಯೊಂದು ಕಳಚಿದೆ. ಧಾರ್ಮಿಕ ಕೆಲಸ ಕಾರ್ಯಗಳೊಂದಿಗೆ ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಸ್ವಾಮೀಜಿ ತಾವು ಕಟ್ಟಿಬೆಳೆಸಿದ ಎಲ್ಲ ವಿದ್ಯಾಸಂಸ್ಥೆಗಳಿಗೆ ‘ಪೂರ್ಣಪ್ರಜ್ಞ’ ವಿದ್ಯಾಸಂಸ್ಥೆಗಳೆಂದೇ ನಾಮಕರಣ ಮಾಡಿದ್ದರು. ಉಡುಪಿಯನ್ನು ದಾಟಿ ರಾಜ್ಯದಾದ್ಯಂತ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆಗೆ ವಿವಿಧ ಶಾಲೆ-ಕಾಲೇಜು ಸ್ಥಾಪಿಸಿದ್ದರು. ದೇಶದಾದ್ಯಂತ ಅವರ ಸುಮಾರು 27 ವಿದ್ಯಾಸಂಸ್ಥೆಗಳಿವೆ.

ಪೂರ್ವಾಶ್ರಮದ ಹೆಸರು ರಮೇಶ್: ದ.ಕ. ಜಿಲ್ಲೆಯ ಮೂಲ್ಕಿಯ ಪಾವಂಜೆ ಗ್ರಾಮದಲ್ಲಿ ಜನಿಸಿದ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ರಮೇಶ್. ತಂದೆ ಬೋಜರಾಜಯ್ಯ ತಾಯಿ ನಾಗವೇಣಮ್ಮ. ‘ಕ್ವಿಟ್ ಇಂಡಿಯಾ ಚಳವಳಿ’ ಸಂದರ್ಭದಲ್ಲಿ ಸಾರ್ವಜನಿಕ ಭಾಷಣ ನಡೆಯುತ್ತಿದ್ದ ಸಂದರ್ಭದಲ್ಲಿ ಥಟ್ಟನೆ ವೇದಿಕೆಯೇರಿ ಬ್ರಿಟಿಷರ ವಿರುದ್ಧ ಭಾಷಣ ಮಾಡಿದ್ದು ಈ ‘ರಮೇಶ್’ನ ಹೆಗ್ಗಳಿಕೆ.

ಆಗಿನ ಕಾಲದಲ್ಲಿ ಉಡುಪಿಗೆ ಬಂದು ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಓದಿ್ದದರು. ಆ ಸಂದರ್ಭದಲ್ಲಿ ವಿಬುಧಮಾನ್ಯ ತೀರ್ಥರು ನಿಧನರಾದ ಕಾರಣ, ಪಲಿಮಾರು ಮಠದ ಸ್ವಾಮೀಜಿಗಳು ಈ ಪೀಠದ ಉತ್ತರಾಧಿಕಾರಿ ಶೋಧನೆ ನಡೆಸಿದಾಗ ಈ ಚುರುಕು ಬಾಲಕನ ವ್ಯಕಿತ್ವದಿಂದ ಆಕರ್ಷಿತರಾದರು. ಹೀಗಾಗಿ ತಮ್ಮ 17ನೇ ವಯಸ್ಸಿನಲ್ಲಿ ಸನ್ಯಾಸದೀಕ್ಷೆ ಪಡೆದು, ‘ವಿಬುಧೇಶತೀರ್ಥ’ ಎಂಬ ಹೆಸರಿನಿಂದ ನರಸಿಂಹ ತೀರ್ಥ ಸಂಸ್ಥಾನದ 31ನೇ ಪೀಠಾಧಿಪತಿಗಳಾಗಿ ನೇಮಕಗೊಂಡರು.

ವಿದೇಶ ಪ್ರಯಾಣ ಮಾಡಿದ್ದ ಸ್ವಾಮೀಜಿ, ತಮ್ಮ ಮೂರನೆಯ ಪರ್ಯಾಯದಲ್ಲಿ ತಮ್ಮ ಶಿಷ್ಯನಿಗೆ ಕೃಷ್ಣನ ಪೂಜೆಯನ್ನು  ಮಾಡುವ ಅವಕಾಶ ನೀಡಿದ್ದರು. ನೇರ, ಗಡಸು ಮಾತಿನ ಸ್ವಾಮೀಜಿ ದಿಟ್ಟ ನಿಲುವಿನವರು ಎಂದು ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಪರ್ಯಾಯ ಸ್ವಾಮೀಜಿಗಳಾದ ವಿಬುಧೇಶ ತೀರ್ಥರು ತಮ್ಮ ಮೊದಲ ಪರ್ಯಾಯ ಕಾಲ 1956ರಲ್ಲಿ ವೇದಪಾಠ ಶಾಲೆಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ ತಮ್ಮ ಪರ್ಯಾಯ ಕಾಲದಲ್ಲಿ ರಥಬೀದಿಗೆ ಕಾಂಕ್ರೀಟ್ ಹಾಕಿಸಿದ್ದರು. ಬೆಳ್ಳಿಯ ರಥದಲ್ಲಿ ಕೃಷ್ಣನ ಉತ್ಸವ ಪ್ರಾರಂಭಿಸಿದ್ದರು.

ಉಡುಪಿ ಕೃಷ್ಣಮಠದಲ್ಲಿ ಸುಸಜ್ಜಿತ ಭೋಜನ ಶಾಲೆ, ಅದಮಾರು ಗೆಸ್ಟ್‌ಹೌಸ್, ರಥಬೀದಿಯ ಶೌಚಾಲಯ ನಿರ್ಮಾಣ ಸೇರಿದಂತೆ ಕೃಷ್ಣಮಠಕ್ಕಾಗಿ ಅಪಾರ ಸೇವೆ ಸಲ್ಲಿಸಿ್ದದರು ಎಂದು ಅಷ್ಟಮಠಗಳ ಸ್ವಾಮೀಜಿಗಳು ಸ್ಮರಿಸಿಕೊಳ್ಳುತ್ತಾರೆ. ಅಲ್ಲದೇ ಬೆಂಗಳೂರು ಸಮೀಪ ಬಡತನ ಹಾಗೂ ಸೌಲಭ್ಯವಂಚಿತ ಬರಪೀಡಿತ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ 52 ಮನೆಗಳನ್ನು ಕಟ್ಟಿಸಿಕೊಟ್ಟಿದ್ದು ಕೂಡ ಸ್ವಾಮೀಜಿಯವರ ಸಾಧನೆ ಎಂದು ಹೇಳಲಾಗುತ್ತಿದೆ.

ಶಿಕ್ಷಣ ಸಂಸ್ಥೆಗಳ ಜನಕ, ವಿಜ್ಞಾನ ಪ್ರಿಯ:
ರಾಜ್ಯದ ಒಳಗೆ ಮತ್ತು ಹೊರಗೆ ಅದಮಾರು ಮಠ ಎಜ್ಯುಕೇಷನಲ್ ಕೌನ್ಸಿಲ್ ವತಿಯಿಂದ ಹಲವು ವಿದ್ಯಾಸಂಸ್ಥೆಗಳನ್ನು ಕಟ್ಟಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಿ್ದದಾರೆ. ಅವರಿಗೆ ಇಂಗ್ಲಿಷ್ ಹಾಗೂ ವಿಜ್ಞಾನದ ಮೇಲೆ ಅಪಾರ ಆಸಕ್ತಿ. ಹೀಗಾಗಿ ಬೆಂಗಳೂರಿನಲ್ಲಿ ದೇವನಹಳ್ಳಿ ಸಮೀಪ ಬಿದಲೂರಿನಲ್ಲಿ ‘ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಿದ್ದರು. ಅಷ್ಟಮಠಗಳಲ್ಲಿ ಇಂಗ್ಲಿಷ್ ಬಲ್ಲ, ಮಾತನಾಡಬಲ್ಲ ಪ್ರಥಮ ಪೀಠಾಧಿಪತಿಯಾಗಿದ್ದ ಇವರನ್ನು ಇತರಸ್ವಾಮೀಜಿಗಳು ತಮಾಷೆಗಾಗಿ ‘ವಿಬುಧೇಶತೀರ್ಥ ಶ್ರೀ ಫಾದರ್’ ಎಂದು ಕರೆಯುತ್ತಿದ್ದರಂತೆ !!

ಅವರ ರಾಜಕೀಯ ನಿಲುವುಗಳು ವಿವಾದಕ್ಕೆ ಕಾರಣವಾಗಿದ್ದವು. ಕೆಲ ವರ್ಷಗಳ ಹಿಂದೆ  ಸೋನಿಯಾಗಾಂಧಿ ಪ್ರಧಾನಿಯಾಗುವ ಗಾಳಿಸುದ್ದಿ ಹಬ್ಬಿದಾಗ, ವಿದೇಶಿ ಮೂಲದ ಬಗ್ಗೆ ಬಹಳ ಚರ್ಚೆಯಾಗುತ್ತಿದ್ದ ವೇಳೆ, ಸ್ವಾಮೀಜಿ ಕೂಡ ಒಂದು ಹೇಳಿಕೆ ನೀಡಿ, ‘ಸೋನಿಯಾ ವಿದೇಶಿ ಮಹಿಳೆ. ಆಕೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ’ ಎನ್ನುವ ಮಾತು ಹೇಳಿ ಎಲ್ಲರ ಗಮನ ಸೆಳೆದಿದ್ದರು. ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ 50ರಷ್ಟು ಮೀಸಲಾತಿ ಬೇಕು ಎನ್ನುವುದು ಅವರ ಪ್ರಗತಿಪರ ನಿಲುವಾಗಿತ್ತು.

ಅಭಿನಂದನಾ ಗ್ರಂಥ ಸಮರ್ಪಣೆ:
ಸಮಾಜ, ಶಿಕ್ಷಣ ಸೇವೆ, ಧಾರ್ಮಿಕ ಕೆಲಸಗಳೊಂದಿಗೆ  ಗುರುತಿಸಿಕೊಡಿದ್ದ ವಿಬುಧೇಶ ತೀರ್ಥರಿಗೆ ಕಳೆದ ತಿಂಗಳು ಉಡುಪಿಯಲ್ಲಿ ಅವರ ಅಭಿಮಾನಿಗಳು, ಶಿಷ್ಯರು, ಭಕ್ತರು ‘ಅಭಿನಂದನಾ ಗ್ರಂಥ’  ಸಮರ್ಪಿಸಿದ್ದರು.

ಇತರ ಸುದ್ದಿಗಳು
ವಿದ್ಯುತ್ ತಂತಿ ತಗುಲಿ ನಾಲ್ವರ ಸಾವು
ಮೈಸೂರಿಗೆ ವಿಶೇಷ ಪ್ಯಾಕೇಜ್ ಪ್ರವಾಸ
ಕಡಲ ತೀರದ ನಾಗರಿಕರಿಗೆ ಶೀಘ್ರವೇ ಗುರುತು ಚೀಟಿ
ದೌರ್ಜನ್ಯ: ಇಂದು ‘ಗುಲ್ಬರ್ಗ ಬಂದ್’
ಚಿರತೆಗಳ ಚಲನವಲನದಿಂದ ಭಯಭೀತರಾಗಿರುವ ಜನತೆ
ಕನಕಪುರ:ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿಗೆ ಚಾಲನೆ
ಭಾಗಮಂಡಲದಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ಅನ್ನಛತ್ರ
ಮೈತ್ರಿಕೂಟದ ಅಭ್ಯರ್ಥಿ ಬಿ.ಕೆ.ಚಂದ್ರುಗೆ ಗೆಲುವು
ಗ್ರಾಮೀಣ ದಸರಾಕ್ಕೆ ಐಂದ್ರಿತ ರೇ, ಗಣೇಶ
ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
ಗ್ರಾಮಸ್ಥರಿಂದ ರಸ್ತೆ ತಡೆ
ದಲಿತರಿಗೆ ಅಧಿಕಾರ ಮರೀಚಿಕೆ: ದ್ವಾರಕನಾಥ್ ವಿಷಾದ
ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಕೋಣ ವಶ
ವಿವಿಧ ಸಂಘಟನೆಗಳಿಂದ ಸರಣಿ ಪ್ರತಿಭಟನೆ
ಇಲ್ಲದ ಪರವಾನಗಿ: ಹೋಟೆಲ್‌ಗೆ ಬೀಗ
ಅಹೋರಾತ್ರಿ ಮಹಿಳೆಯರ ಪ್ರತಿಭಟನೆ
ಕೊಡಗಿನ ಕಿತ್ತಳೆ ತಳಿ ವಿತರಿಸಲು ಆಗ್ರಹ
ಕೋಟೆ ಭೂಮಿಯಲ್ಲಿ ಕೇರಳಿಗರ ಕೃಷಿ
ತೆರೆದ ಕೊಳವೆ ಬಾವಿ ಅಪಾಯಕ್ಕೆ ಆಹ್ವಾನ
ಆನೆಗಳ ಹಾವಳಿ ತಡೆಗೆ ಆಗ್ರಹ: ರೈತರ ಮುತ್ತಿಗೆ
ದಸರಾ ದರ್ಶನಕ್ಕೆ ಬಂದವರಿಗೆ ಇಸ್ಕಾನ್ ಊಟ!
ಪೊಲೀಸರ ‘ದೌರ್ಜನ್ಯ’ ವಿರುದ್ಧ ಪ್ರತಿಭಟನೆ
ಮಳೆ ಕೊರತೆ: ಮತ್ತಷ್ಟು ಒಣಗಿದ ಕೆರೆ-ಕಟ್ಟೆ
ಜೀವ ಅಪಾಯದಿಂದ ಚಿರತೆ ಪಾರು
11 ಮಂದಿಗೆ ಗಾಯ, ವಾಹನ ಜಖಂ
ರಸ್ತೆ ಕೆಸರುಗದ್ದೆ: ಪಾದಚಾರಿಗಳ ಪರದಾಟ
ಸಾಗರ ಎಪಿಎಂಸಿ ಅಧ್ಯಕ್ಷರಾಗಿ ರುದ್ರಗೌಡ
‘ಖಾತ್ರಿ’ ಅವ್ಯವಹಾರ; ಗ್ರಾ.ಪಂ.ಗೆ ಮುತ್ತಿಗೆ
ಆತಂಕ ಸೃಷ್ಟಿಸಿದ ಕ್ವಾರಿ ದುರಂತ ಕಥೆ...
‘ಭೂಶಕ್ತಿ ವೃದ್ಧಿಸಲು ಕೃಷಿ ಉಪಕರಣ ಬಳಸಿ’
ಜನಪ್ರತಿನಿಧಿ ಬದಲಿಸುವ ವ್ಯವಸ್ಥೆ ಬರಲಿ
ಭತ್ತಕ್ಕೆ ರೋಗ: ಆತಂಕದಲ್ಲಿ ರೈತ ಸಮೂಹ
‘ಪ್ರಾಮಾಣಿಕತೆ ಇದ್ದರೆ ಪ್ರಶಸ್ತಿಗೆ ಬರವಿಲ್ಲ’
ಉತ್ತರೆ ಮಳೆ ಅಂಬಿನೋತ್ಸವ
ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚನೆ
ಸಾಧನೆಗೆ ಮತ್ತೊಂದು ಹೆಸರು ವಿಶ್ವೇಶ್ವರಯ್ಯ
ದಾವಣಗೆರೆ ಜಿಲ್ಲೆಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸೌಲಭ್ಯ
ಕೊಳೆಗೇರಿಗೆ ನುಗ್ಗಿದ ನೀರು
ಅಡಿಕೆಗೆ ಕೊಳೆರೋಗ: ನಿಯಂತ್ರಣಕ್ಕೆ ಸಲಹೆ
ಕೆಲಸವಿಲ್ಲದೇ ಕಂಗಾಲಾದ ನೇಕಾರರಿಂದ ಧರಣಿ
ರೋಗ ನಿಯಂತ್ರಣಕ್ಕೆ ‘ಯೋಗ’ ರಾಮಬಾಣ
ಮುಖ್ಯಮಂತ್ರಿ ಪ್ರತಿಕೃತಿ ದಹನ
ಹೈ-ಕ ವಿಮೋಚನಾ ದಿನ ಬಿಡದ ವಿವಾದ
ಒರಿಸ್ಸಾದಲ್ಲಿ ಅಪಹೃತ ಗುಲ್ಬರ್ಗದಲ್ಲಿ ಪತ್ತೆ
ನಗರದಲ್ಲಿ ಗ್ರಾಮೀಣ ಅಂಚೆ ನೌಕರರ ಧರಣಿ
ಪೊಲೀಸ್ ದೌರ್ಜನ್ಯ ತಡೆಗೆ ಆಗ್ರಹ
ಶಿಕ್ಷಣ ಸಂಸ್ಥೆಗಳ ಜನಕ, ದಿಟ್ಟ ನಿಲುವಿನ ಅದಮಾರು ಶ್ರೀ
ಜನತಾದಳ(ಎಸ್) ತೆಕ್ಕೆಗೆ
4 ಮಣ್ಣುಮುಕ್ಕ ಹಾವು, 2 ಆಮೆ ವಶ; ಆರೋಪಿಗಳ ಬಂಧನ
‘ಪಟ್ಟಭದ್ರ ಹಿತಾಸಕ್ತಿಗಳಿದ ಪೀಠ ತ್ಯಾಗ’
ಶಾಲಾ ಕೊಠಡಿ ಶಿಥಿಲ ಬಯಲಿನಲ್ಲಿ ಪಾಠ
‘ಕಾನೂನು ವ್ಯವಸ್ಥೆ ಹದಗೆಡಲು ಸಚಿವರೆ ಕಾರಣ’
‘ಶರಣ, ಸಂತರ ಸಾಹಿತ್ಯ ಸನ್ಮಾರ್ಗಕ್ಕೆ ದಾರಿ’
ತುಂಗಾ ಮೇಲ್ದಂಡೆ ಸಂತ್ರಸ್ತರ ಗೋಳು...
ಮೊದಲು ರಂಗಭೂಮಿಗೆ ಬನ್ನಿ: ಉಮಾಶ್ರೀ ಕರೆ
ವಿದ್ಯುತ್ ಸ್ಪರ್ಶ: ತಾತ ವೆಾಮ್ಮಗ ಸಾವು
ಯಶವಂತಪುರ- ಅಹ್ಮದಾಬಾದ್ ವಿಶೇಷ ರೈಲು
ಗುತ್ತಿಗೆ ವೈದ್ಯರ ನೇಮಕಕ್ಕೆ ಸೂಚನೆ
‘ಸ್ಫರ್ಧಾ ಮನೋಭಾವ ಬೆಳೆಸಿಕೊಳ್ಳಿ’
ಮಹಿಳಾ ಕಾನೂನು ಜಾಗೃತಿಗೆ ಸಲಹೆ
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಿ’
‘ಶಿಕ್ಷಣದಲ್ಲಿ ವ್ಯಕ್ತಿತ್ವ ಚಿಂತನೆಗೆ ಆದ್ಯತೆ ಅಗತ್ಯ’
ತಾಲ್ಲೂಕು ಕಚೇರಿಗೆ ಸಿಐಟಿಯು ಮುತ್ತಿಗೆ
ಗೋ ಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹ
ಜಾನಪದ ಕಲೆಗಳ ಉಳಿವಿಗೆ ಪ್ರೋತ್ಸಾಹ ಅಗತ್ಯ
ಅಭಿವೃದ್ಧಿ ಬಗ್ಗೆ ನಿರ್ಲಕ್ಷ ವಿರೋಧಿಸಿ ಇಂದು ಪ್ರತಿಭಟನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618