ಮಂಗಳವಾರ , ಸೆಪ್ಟೆಂಬರ್ 22, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಚಿಂತಿಸಿದಂತೆ ಅದನ್ನು ಕಾರ್ಯಗತಗೊಳಿಸಲು ಹಿಂದೆ ಬೀಳಬೇಡಿ.
--ವಿಲಿಯಂ ಶೇಕ್ಸ್‌ಪಿಯರ್.
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಕೆಪಿಎಲ್: ನಿಧೀಶ್ ಶ್ರಮ ವ್ಯರ್ಥ; ಬ್ರಿಗೇಡಿಯರ್ಸ್‌ಗೆ ಸುಲಭ ಜಯ
ರಾಬಿನ್ ‘ರೋಚಕ’ ಆಟ
ಪ್ರಜಾವಾಣಿ ವಾರ್ತೆ
ಅನುಭವದ ಖಣಿಯಾದ ಕೊಡಗಿನ ಕುವರ ರಾಬಿನ್ ಉತ್ತಪ್ಪ ಅವರು ಕ್ರೀಡಾಂಗಣದ ಎಲ್ಲಾ ಮೂಲೆಗಳಿಗೂ ಚೆಂಡನ್ನು ಅಟ್ಟಿ ತಮ್ಮ ಭುಜ ಬಲದ ಪರಾಕ್ರಮ ತೋರಿದರು. ಅಷ್ಟೇ ಅಲ್ಲ ...


ಬೆಂಗಳೂರು: 4,2,6,6,4,4 ಇದು ರಾಬಿನ್ ಉತ್ತಪ್ಪ ಅವರು ಪಂದ್ಯದ ಹನ್ನೊಂದನೇ ಓವರ್‌ನಲ್ಲಿ ಶಾಮನೂರು ದಾವಣಗೆರೆ ಡೈಮಂಡ್ಸ್ ತಂಡದ ಬೌಲರ್ ಎಸ್.ಟಿ. ಶರತ್ ಅವರನ್ನು ದಂಡಿಸಿದ ರೀತಿ. ಅನುಭವದ ಖಣಿಯಾದ ಕೊಡಗಿನ ಕುವರ ರಾಬಿನ್ ಉತ್ತಪ್ಪ ಅವರು ಕ್ರೀಡಾಂಗಣದ ಎಲ್ಲಾ ಮೂಲೆಗಳಿಗೂ ಚೆಂಡನ್ನು ಅಟ್ಟಿ ತಮ್ಮ ಭುಜ ಬಲದ ಪರಾಕ್ರಮ ತೋರಿದರು. ಅಷ್ಟೇ ಅಲ್ಲ ಬೆಂಗಳೂರು ಬ್ರಿಗೇಡಿಯರ್ಸ್ ತಂಡಕ್ಕೆ ಎಂಟು ವಿಕೆಟ್ ಗೆಲುವು ತಂದುಕೊಟ್ಟರು.

ಇದರೊಂದಿಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ-20 ಟೂರ್ನಿಯ ಲೀಗ್ ಹಂತದಲ್ಲಿ ತನ್ನ ಖಾತೆಯಲ್ಲಿ 12 ಪಾಯಿಂಟ್ ಹೊಂದಿದ ಬ್ರಿಗೇಡಿಯರ್ಸ್ ಸೆಮಿಫೈನಲ್ ಪ್ರವೇಶಿಸಿತು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಾಮನೂರು ದಾವಣಗೆರೆ ಡೈಮಂಡ್ಸ್ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್‌ಗಳಿಸಿತು.

ಇದಕ್ಕೆ ಉತ್ತರವಾಗಿ ಬೆಂಗಳೂರು ಬ್ರಿಗೇಡಿಯರ್ಸ್ ಎರಡು ವಿಕೆಟ್  ನಷ್ಟಕ್ಕೆ 121 ರನ್ ಗಳಿಸಿತು. ಅದೂ ಕೇವಲ 13.4 ಓವರುಗಳಲ್ಲಿ.

click here
ರಾಬಿನ್ (ಔಟಾಗದೇ 69; 43 ನಿ., 32 ಎ., 6 ಬೌಂಡರಿ, 4 ಸಿಕ್ಸರ್) ಅಬ್ಬರದ ಎದುರು ದಾವಣಗೆರೆ ಕಳೆಗುಂದಿತು. ದೀಪಕ್ ಚೌಗುಲೆ (ಔಟಾಗದೇ 9; 21 ನಿ., 14 ಎ.,) ಹೆಚ್ಚು ರನ್ ಗಳಿಸದಿದ್ದರೂ, ಮತ್ತೊಂದು ತುದಿಯಲ್ಲಿದ್ದ ಉತ್ತಪ್ಪಗೆ ಉತ್ತಮ ಸಾಥ್ ನೀಡಿದರು. 

ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಶಾಮನೂರು ದಾವಣಗೆರೆ ಡೈಮಂಡ್ಸ್ ತಂಡಕ್ಕೆ ಆರಂಭ ಆಟಗಾರರಾದ ಮಯಾಂಕ್ ಅಗರ್ವಾಲ್ (7) ಹಾಗೂ ಕೆ.ಬಿಪಿನ್ (19) ಭದ್ರ ಬುನಾದಿ ಹಾಕುವ ಪ್ರಯತ್ನದಲ್ಲಿ ವಿಫಲರಾದರು. ಇವರು ಭಾರಿ ಮೊತ್ತ ಕಲೆ ಹಾಕುವ ಸೂಚನೆ ನೀಡಿತ್ತಾದರೂ, ಡೇವಿಡ್ ಮಥಾಯಿಸ್ ಬೌಲಿಂಗ್‌ನಲ್ಲಿ ಮಯಾಂಕ್ ಅವರು ರಾಬಿನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಮಯಾಂಕ್ ಜೊತೆಗೂಡಿದ ನಿಧೀಶ್ ರನ್ ವೇಗವನ್ನು ಹೆಚ್ಚಿಸುವ ಸಾಹಸ ಮಾಡಿದರು.

ನಿಧೀಶ್ (54; 74 ನಿ., 45 ಎ., 1 ಬೌಂಡರಿ, 3 ಸಿಕ್ಸರ್) ಹಾಗೂ ಪವನ್ ದೇಶಪಾಂಡೆ (20; 31 ನಿ., 24 ಎ.,) ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಕಲೆಹಾಕಿದರು. ಡೈಮಂಡ್ಸ್ ತಂಡವನ್ನು ನೂರರ ಗಡಿಯತ್ತ ತಂದು ನಿಲ್ಲಿಸಿದರು.

ಪವನ್ ತಮ್ಮ ವೈಯಕ್ತಿಕ ಮೊತ್ತ 16 ರನ್ ಆಗಿದ್ದಾಗ ಸ್ಟೀವ್ ಲಾಜರಸ್ ದಾಳಿಯಲ್ಲಿ ನಿಶಾಂತ್ ಚೆಂಡನ್ನು ಕೈಚೆಲ್ಲಿ ಪ್ರಮಾದ ಮಾಡಿದರು. ಆಗ ತಂಡದ ಮೊತ್ತ 85 ರನ್‌ಗಳಾಗಿತ್ತು. ಆದರೆ ಇದರಿಂದ ದಾವಣಗೆರೆ ತಂಡಕ್ಕೆ ಹೆಚ್ಚಿನ ಲಾಭವೇನು ಆಗಲಿಲ್ಲ. ನಾಯಕ ಸುನೀಲ್ ಜೋಶಿ ಜೊತೆಗೂಡಿದ ನಿಧೀಶ್ ಚುರುಕು ತೋರಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 28 ರನ್ ಸೇರಿಸಿದರು.

ಸ್ಕೋರು ವಿವರ
ಶಾಮನೂರು ದಾವಣಗೆರೆ ಡೈಮಂಡ್ಸ್
20 ಓವರುಗಳಲ್ಲಿ
5 ವಿಕೆಟ್ ನಷ್ಟಕ್ಕೆ 118
ಮಯಾಂಕ್ ಸಿ ಉತ್ತಪ್ಪ ಬಿ ಮಥಾಯಸ್  07
ಕೆ. ಬಿಪಿನ್ ಸಿ ಮಥಾಯಸ್ ಬಿ ವಿನೂ ಪ್ರಸಾದ್  19
ಎಂ. ನಿಧೀಶ್ ಔಟಾಗದೇ  54
ಸಿ. ಎಂ. ಗೌತಮ್ ಸಿ ಶೇಖಾವತ್ ಬಿ ಮಥಾಯಸ್  00
ಸುನಿಲ್ ರಾಜು ರನ್ ಔಟ್ (ಸ್ಟೀವ್ ಲಾಜರಸ್)  04
ಪವನ್ ದೇಶಪಾಂಡೆ ಸಿ ಚೌಗುಲೆ ಬಿ ಲಾಜರಸ್  20
ಸುನಿಲ್ ಜೋಶಿ ಔಟಾಗದೇ  06
ಇತರೆ: (ಲೆಗ್ ಬೈ-2, ನೋಬಾಲ್-1, ವೈಡ್-5)  08
ವಿಕೆಟ್ ಪತನ: 1-20 (3.1, ಮಯಾಂಕ್ ಅಗರ್ವಾಲ್); 2-29(5.5, ಕೆ. ಬಿಪಿನ್); 3-31(6.4, ಸಿ.ಎಂ. ಗೌತಮ್); 4-40 (9.3, ಸುನಿಲ್. ಎನ್.ರಾಜು); 5-90(16.4, ಪವನ್ ದೇಶಪಾಂಡೆ).
ಬೌಲಿಂಗ್: ರಾಜೇಶ್.ಬಿ. ಸಿಂಗ್ 4-0-24-0 (ವೈಡ್-1); ಡೇವಿಡ್ ಮಥಾಯಸ್ 4-0-25-2 (ನೋಬಾಲ್-1, ವೈಡ್-1); ವಿನೂ ಪ್ರಸಾದ್ ನಾರಾಯಣನ್ 4-1-12-1; ರಾಬಿನ್ ಉತ್ತಪ್ಪ 3-0-14-0; ದೀಪಕ್ ಚೌಗುಲೆ 2-0-12-0 (ವೈಡ್-1); ಸ್ಟೀವ್ ಲಾಜರಸ್ 2-0-13-1 (ವೈಡ್-1); ದಿಲೀಪ್.ಎನ್. ಸಾಗರ್ 1-0-16-0 (ವೈಡ್-1).
ಬೆಂಗಳೂರು ಬ್ರಿಗೇಡಿಯರ್ಸ್
13.4 ಓವರುಗಳಲ್ಲಿ
2 ವಿಕೆಟ್ ನಷ್ಟಕ್ಕೆ 121
ಸಿ.ಬಿ. ಕಾರ್ತಿಕ್ ಬಿ ಎಸ್.ಟಿ. ಶರತ್  07
ನಿಶಾಂತ್ ಶೇಖಾವತ್ ಸಿ ಮಗಿಳೇಂದನ್ ಬಿ ಶರತ್  28
ರಾಬಿನ್ ಉತ್ತಪ್ಪ ಔಟಾಗದೇ  69
ದೀಪಕ್ ಚೌಗುಲೆ ಔಟಾಗದೇ  09
ಇತರೆ: (ಲೆಗ್ ಬೈ-1, ವೈಡ್-7)  08
ವಿಕೆಟ್ ಪತನ: 1-23(4.1, ಸಿ.ಬಿ. ಕಾರ್ತಿಕ್); 2-68(9, ನಿಶಾಂತ್ ಶೇಖಾವತ್).
ಬೌಲಿಂಗ್: ಮಗಿಳೇಂದನ್ 2-0-13-0(ವೈಡ್-1); ಅಜಯ್ ಸಿಂಗ್ ಚೌಹಾಣ್ 3.4-0-32-0 (ವೈಡ್-5); ಎಸ್.ಟಿ. ಶರತ್ 4-0-52-2 (ವೈಡ್-1); ಸುನೀಲ್.ಬಿ.ಜೋಶಿ 3-0-13-0; ಪ್ರಸನ್ನ ಪಾಟೀಲ್ 1-0-10-0.

ಇತರ ಸುದ್ದಿಗಳು
ರಾಬಿನ್ ‘ರೋಚಕ’ ಆಟ
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ದಕ್ಷಿಣ ಆಫ್ರಿಕಾ-ಶ್ರೀಲಂಕಾ ಹಣಾಹಣಿ
ಡೇವಿಸ್ ಕಪ್: ಭಾರತ ತಂಡಕ್ಕೆ ಗಿಲ್ ಅಭಿನಂದನೆ
ಬ್ಯಾಸ್ಕೆಟ್‌ಬಾಲ್: ಭಾರತಕ್ಕೆ ಮತ್ತೆ ನಿರಾಸೆ
ಟೀಕೆ ಸಮರ್ಥಿಸಿಕೊಂಡ ಮಾಂಜ್ರೇಕರ್!
ಮಹಾರಾಜಾಸ್ ಮೀರಿನಿಂತ ಪ್ರಾವಿಡೆಂಟ್
‘ಚೊಚ್ಚಲ ಟೆಸ್ಟ್ ಶತಕವೇ ಸ್ಮರಣೀಯ’
ಕರ್ನಾಟಕ ತಂಡಕ್ಕೆ ರಾಬಿನ್ ನಾಯಕ
ನಾವು ಕೂಡ ಫೇವರಿಟ್!
ಐಸಿಸಿ ಚಾಂಪಿಯನ್ಸ್ ಟ್ರೋಫಿ 2009 - ವೇಳಾಪಟ್ಟಿ
ಎಡವಿದ ದೋನಿ ಪಡೆ
ಕ್ರಿಕೆಟ್: ಇಂಗ್ಲೆಂಡ್‌ಗೆ ಸಮಾಧಾನದ ಜಯ
ಪೋರ್ಟಬಲ್ ಲೈಟ್ಸ್‌ನಲ್ಲಿ ಕೆಪಿಎಲ್: ಬ್ರಿಜೇಜ್ ಪಟೇಲ್
ವಿಶ್ವ ಕುಸ್ತಿಗೆ ಭಾರತ ತಂಡ
ಟಿಟಿ: ಶ್ರೇಯಾಲ್‌ಗೆ ಪ್ರಶಸ್ತಿ
ಸೈಕ್ಲಿಂಗ್: ಶ್ರೀಧರ, ನೀಲಮ್ಮಗೆ ಯಶ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618