ಮಂಗಳವಾರ , ಸೆಪ್ಟೆಂಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನೀತಿದಂಡ ಎನ್ನುವುದು ರಾಜದಂಡಕ್ಕಿಂತಲೂ ಮಿಗಿಲಾದುದು.
--ಗಾಂಧೀಜಿ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
10 ಸಾವಿರ ಭಕ್ತರು ದತ್ತಪೀಠಕ್ಕೆ: ಶೋಭಾಯಾತ್ರೆ ಅ. 4ಕ್ಕೆ


ಲವ್ ಜಿಹಾದ್‌ನಿಂದ ರಾಷ್ಟ್ರ ರಕ್ಷಿಸಿ’

ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಅಪಹರಿಸಿ, ಇಲ್ಲವೇ ಪ್ರೇಮದ ನಾಟಕವಾಡಿ ಮದುವೆಯಾಗಿ ಬಳಿಕ ‘ಲವ್ ಜಿಹಾದ್’ ಹೆಸರಲ್ಲಿ  ಅವರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ದೇಶದಲ್ಲಿ ಹೆಚ್ಚುತ್ತಿದೆ ಎಂದು ಆರೋಪಿಸಿದ ಪ್ರಮೋದ್ ಮುತಾಲಿಕ್, ಈ ಬಗ್ಗೆ ರಾಷ್ಟ್ರೀಯ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.
ಮದುವೆ ಆಸೆ ಹುಟ್ಟುಹಾಕಿ ಬಳಿಕ ಹಿಂದೂ ಹುಡುಗಿಯರನ್ನು ವಿದೇಶಕ್ಕೆ ಮಾರಲಾಗುತ್ತಿದೆ. ಡ್ರಗ್ಸ್ ಪೂರೈಕೆ, ಕೋಟಾನೋಟು ಚಲಾವಣೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಕೇರಳದಲ್ಲಿ 920 ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಮದುವೆಯಾಗಿದ್ದಾರೆ. ಅವರಲ್ಲಿ ಇಬ್ಬರು ಯುವತಿಯರು ಪೊಲೀಸರಿಗೆ ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ. ‘ವರ್ಷವಿಡೀ ನಮಗೆ ಭಾರತದ ಮೇಲೆ ದಾಳಿ ಮಾಡುವ ತಂತ್ರಗಳ ಬಗ್ಗೆ ಸಿಡಿ ತೋರಿಸುವುದು, ಬಾಂಬ್ ತಯಾರಿ, ಹಿಂದೂಗಳ ಮೇಲೆ ದಾಳಿ ಮಾಡುವ ಬಗ್ಗೆ ತರಬೇತಿ ನೀಡುತ್ತಿದ್ದರು’ ಎಂದು ಆ ಯುವತಿಯರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಕೂಡಲೇ ರಾಷ್ಟ್ರೀಯ ಜಾಗೃತಿ ಮೂಡಿಸಬೇಕಿದೆ ಎಂದು ಮುತಾಲಿಕ್ ಹೇಳಿದರು.
ಉಡುಪಿ: ಈಗಾಗಲೇ ದತ್ತಮಾಲಾಧಾರಣೆ ಆರಂಭವಾಗಿದ್ದು, ಅ. 4ರಂದು ದತ್ತಪೀಠದಲ್ಲಿ 10 ಸಾವಿರ ಭಕ್ತರು ಸೇರಿ ಬೃಹತ್ ಸಮಾರೋಪ ಕೈಗೊಳ್ಳುತ್ತಿರುವುದಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಮುಖಂಡ ಪ್ರಮೋದ್ ಮುತಾಲಿಕ್ ಇಲ್ಲಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ದತ್ತಪೀಠ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಶೋಭಾಯಾತ್ರೆ, ಪಾದುಕೆ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳಿಗೆ ದತ್ತಪೀಠದಲ್ಲಿ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಕೋರಿರುವುದಾಗಿ ತಿಳಿಸಿದರು. 

ದತ್ತಪೀಠದ ಛಾವಣಿ ದುರಸ್ತಿ ಕಾರ್‍ಯವನ್ನು ಸರ್ಕಾರ ಕೈಗೊಂಡಿರುವುದು ಸ್ವಾಗತಾರ್ಹ. ಒಂದು ವೇಳೆ ಅಲ್ಲಿ ಅಲ್ಪ ಬದಲಾವಣೆ ಮಾಡಿದರೂ ತಪ್ಪೇನಿಲ್ಲ. ಏಕೆಂದರೆ ಅದು ಬಾಬಾ ಬುಡನ್‌ಗಿರಿ ಅಲ್ಲ, ದತ್ತಪೀಠ. ಅದಕ್ಕೆ ಸ್ಪಷ್ಟ ಆಧಾರವಿದೆ. ‘ಇನಾಮ್ ದತ್ತಾತ್ರೇಯಪೀಠ’ ಎಂದೇ ದಾಖಲೆಯಲ್ಲಿ ಇದೆಯೇ ಹೊರತು ‘ಬಾಬಾಬುಡನ್‌ಗಿರಿ’ ಎಂದು ಎಲ್ಲಿಯೂ ಹೆಸರಿಲ್ಲ ಎಂದು ವಾದಿಸಿದರು.

ಸೌಹಾರ್ದ ಪರಿಹಾರ ಅಗತ್ಯ: ಸರ್ಕಾರ ದತ್ತಪೀಠ ವಿಚಾರವನ್ನು ರಾಜಕೀಯಗೊಳಿಬಾರದು. ಮಾತುಕತೆ ಮೂಲಕ ಶಾಶ್ವತ ಪರಿಹಾರದತ್ತ ಮನಸ್ಸು ಮಾಡಬೇಕು. ದತ್ತಪೀಠದ ಬಗ್ಗೆ ವಿರೋಧ ಮಾಡುವವರು ಮುಸ್ಲಿಂ ಮುಖಂಡರ ಜತೆಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡು ಹಿಡಿಯಲಿ. ದತ್ತಪೀಠ ಹೋರಾಟದಿಂದ ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಲಾಭವಾಗಿದೆ. ಅದರಿಂದಾಗಿ ಹಲವು ಶಾಸಕರನ್ನು ಸಂಸದರನ್ನು ಗೆದ್ದಿದೆ. ಈಗಲಾದರೂ ಸೌಹಾರ್ದ ರೀತಿ ಸಮಸ್ಯೆ ಬಗೆಹರಿಸಲಿ ಎಂದರು.

ದೆಹಲಿ ಸಭೆ ಪ್ರಮುಖ ನಿರ್ಣಯ: ಸೆ. 19 ಮತ್ತು 20ರಂದು ಶ್ರೀರಾಮ ಸೇನೆ ಹಾಗೂ ಅದರ ಸಮಾನ ಮನಸ್ಕ ಸಂಘಟನೆಗಳು ಸೇರಿದಂತೆ 12 ರಾಜ್ಯಗಳಿಂದ 18 ಸಂಘ ಸಂಸ್ಥೆಗಳು ದೆಹಲಿಯಲ್ಲಿ ಎರಡು ದಿನ ಸಭೆ ಸೇರಿ ಸುಧೀರ್ಘ ಚರ್ಚೆ ನಡೆಸಿ ‘ಲವ್ ಜಿಹಾದ್’ಗೆ ವಿರೋಧ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿವೆ.
ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವಂತೆ ‘ಸಾಚಾರ್ ಸಮಿತಿ’ ವರದಿ ನೀಡಿದೆ. ಅದನ್ನು ಕೂಡಲೇ ರದ್ದು ಮಾಡಬೇಕು. ಅಲ್ಪಸಂಖ್ಯಾತರಿಗೆ ಸರ್ಕಾರ ಈಗ ನೀಡುತ್ತಿರುವ ಸವಲತ್ತುಗಳನ್ನೇ ಮುಂದುವರಿಸಬೇಕು ಎಂದರು.

ಆಸ್ಟ್ರೇಲಿಯ, ಶ್ರೀಲಂಕಾ, ಮಲೇಷಿಯ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ದುರ್ಗಾಸೇನೆ ಮುಖಂಡರಾದ ಸವಿತಾ ರಂಗನಾಥ್, ರಾಜ್ಯಸಹ ಸಂಚಾಲಕ ಜಿತೇಶ್ ಕುಮಾರ್, ಸೇನೆಯ ಜಿಲ್ಲಾ ಸಂಚಾಲಕ ರಾಜೇಶ್ ಎರ್ಮಾಳ್, ಮಧುಕರ ಮುದ್ರಾಡಿ ಇದ್ದರು.

ಇತರ ಸುದ್ದಿಗಳು
ದಸರಾದಲ್ಲಿ ದಶಮಂಪಟಗಳ ಶೋಭಾಯಾತ್ರೆ
ಶಿಕಾರಿಪುರ ಜಿಲ್ಲೆ: ಆಸ್ಪತ್ರೆ ಮೇಲ್ದರ್ಜೆಗೆ
ಸರ್ಕಾರದ ಬೆದರಿಕೆಗೆ ಜಗ್ಗೆವು: ನಿರ್ಧಾರದಿಂದ ಹಿಂದೆ ಸರಿಯೆವು
‘ಕುರಿಗಾಹಿಗಳ ಬದುಕಿಗೆ ಆದ್ಯತೆ ಕೊಡಿ’
ಶಂಕಿತ ನಕ್ಸಲ್ ಮನೆಯಲ್ಲಿ ತೀವ್ರ ಶೋಧ
ಬನ್ನೀ ತಗೊಂಡು, ಬಂಗಾರದ್ಹಾಂಗ ಇರೋಣ
ಚಹಾ ಕುಡಿದು ಐವರು ಮಕ್ಕಳು, ಅಜ್ಜಿ ಅಸ್ವಸ್ಥ
ಹಂಪಿಯಲ್ಲಿ ಅಕ್ಷರಧಾಮ ಮಾದರಿ: ರೆಡ್ಡಿ
ನೂರರ ಶಾಲೆಗೆ ವಿಶೇಷ ಸೌಲಭ್ಯ
ಗೀತಾ ಜ್ಞಾನ ಯಜ್ಞ: ತೇಜೋಮಯಾನಂದರ ಪ್ರವಚನ 1ರಿಂದ
ಪ್ರವಾಸಿ ತಾಣ ಅಧ್ಯಯನಕ್ಕೆ ಸಲಹೆ
ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ 400 ಕೋಟಿ
ರಾಯಣ್ಣನ ಸಮಾಧಿ ನಿರ್ಲಕ್ಷ್ಯ: ಖಂಡನೆ
ಬೈಲಹೊಂಗಲದಲ್ಲಿ ರಸ್ತೆ ತಡೆ
‘ಹೃದ್ರೋಗ: ದೈಹಿಕ ಶ್ರಮ ಅವಶ್ಯ’
ಮನರಂಜಿಸಿದ ರಾವಣ ದಹನ
ಸಂಭ್ರಮದ ವೆಂಕಟೇಶ್ವರ ರಥೋತ್ಸವ
ವೈಭವದ ಚಿತ್ರಲಿಂಗೇಶ್ವರ ಅಂಬಿನೋತ್ಸವ
4ರಿಂದ ನೀನಾಸಂನಲ್ಲಿ ಸಂಸ್ಕೃತಿ ಶಿಬಿರ
ಸಾಗರ; ದೇಗುಲ ವೀಕ್ಷಣೆಗೆ ರಾಹುಲ್ ಗಾಂಧಿ ?
ಮೈನವಿರೇಳಿಸಿದ ರೋಚಕ ಕುಸ್ತಿ ಪಂದ್ಯಾವಳಿ
‘ಲಂಚ ಕೇಳುವ ಅಧಿಕಾರಿ ವಿರುದ್ಧ ಕ್ರಮ’
ಸೌಕರ್ಯಗಳಿಲ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜು
‘ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಇಲ್ಲವೇ ಶಸ್ತ್ರ ಅಗತ್ಯ’
ಶಾರದೆ-ನವದುರ್ಗೆಯರ ನವೋಲ್ಲಾಸ
‘ಗೋ-ಗ್ರಾಮ ಯಾತ್ರೆ’ ಚಾಲನೆ
ಪತ್ನಿ ಶಂಶಾದ್, ವೆಂಕಟೇಶ್ ಬಂಧನ
10 ಸಾವಿರ ಭಕ್ತರು ದತ್ತಪೀಠಕ್ಕೆ: ಶೋಭಾಯಾತ್ರೆ ಅ. 4ಕ್ಕೆ
ಮುಚ್ಚಿ ಹಾಕುವ ಯತ್ನ ಲೋಕಾಯುಕ್ತಕ್ಕೆ ದೂರು
‘ನೀರು ಇಡೀ ಜಗತ್ತಿನ ಮುಂದಿರುವ ಸಮಸ್ಯೆ’
ದುರಂತಗಳ ಸರಮಾಲೆ ಬಿಂಬಿಸಿದ ಸ್ತಬ್ಧ ಚಿತ್ರ
ವ್ಯಾಪಾರಿ ಪುತ್ರ ಸೇರಿದಂತೆ ಇಬ್ಬರ ಹತ್ಯೆ
ಸಾಧನೆ ಮಾಡಿದ ಪ್ರತಿಭೆಗಳಿಗೆ ಪ್ರೋತ್ಸಾಹ
ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರ ಪಾಲು
ಗುಂಪು ಘರ್ಷಣೆ: ಚಿಂತಾಮಣಿ ಉದ್ರಿಕ್ತ
ಮೂಕಾಂಬಿಕೆ ಸನ್ನಿಧಿಯಲ್ಲಿ ‘ವಿದ್ಯಾರಂಭ’
ಇಂದು ಜಿಲ್ಲೆಯ 191 ಸರ್ಕಾರಿ ವೈದ್ಯರ ರಾಜೀನಾಮೆ
ದಸರಾ ಮೆರವಣಿಗೆ, ಶಮಿ ಪೂಜೆ
‘ಸಮಾಜದ ಒಳಿತಿಗಿರಲಿ ಪತ್ರಿಕೆ’
‘ಕ್ರಿಸ್ತೋತ್ಸವ-2009’ ಆಚರಣೆ
ಅಭಿಯಾನಕ್ಕೆ ಚಾಲನೆ
ಸಂಭ್ರಮದ ವಿಜಯದಶಮಿ
ಆರ್‌ಎಸ್‌ಎಸ್ ಆಕ್ಷೇಪ
‘ಕಲ್ಯಾಣ ಮಂಟಪ ಕ್ರಾಂತಿ’
ದೇವಸ್ಥಾನ ಅಭಿವೃದ್ಧಿಗೆ ಹಣ
ಶಕ್ತಿದೇವತೆ ಮೆರವಣಿಗೆ
ನಾಡಹಬ್ಬಕ್ಕೆ ಚಾಲನೆ
ಹಂದಿಜ್ವರ: ಒಂದು ಸಾವು
ಜೀಪ್ ಡಿಕ್ಕಿ: ಬಾಲಕ, 20 ಕುರಿ ಸಾವು
ಮಂಗಳೂರು ಐಜಿಪಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಇನ್ನುಮೇಲೆ ಜನವರಿಯಲ್ಲಿ ಹಂಪಿ ಉತ್ಸವ: ರೆಡ್ಡಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618