ಮಂಗಳವಾರ , ಸೆಪ್ಟೆಂಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನೀತಿದಂಡ ಎನ್ನುವುದು ರಾಜದಂಡಕ್ಕಿಂತಲೂ ಮಿಗಿಲಾದುದು.
--ಗಾಂಧೀಜಿ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಕ್ರಿಕೆಟ್: ಸ್ಮಿತ್ ಶತಕ ವ್ಯರ್ಥ; ದಕ್ಷಿಣ ಆಫ್ರಿಕಾ ‘ಔಟ್’
ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್
ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 22 ರನ್‌ಗಳಿಂದ ಮಣಿಸಿದ ಇಂಗ್ಲೆಂಡ್ ತಂಡದವರು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.


ಸೆಂಚೂರಿಯನ್: ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಭಾನವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 323 ರನ್ ಪೇರಿಸಿತು. ಒವೇಸ್ ಶಾ (98), ಪಾಲ್ ಕಾಲಿಂಗ್‌ವುಡ್ (82) ಮತ್ತು ಇಯೊನ್ ಮಾರ್ಗನ್ (67) ಅವರ ಜವಾಬ್ದಾರಿಯುವ ಬ್ಯಾಟಿಂಗ್ ತಂಡದ ಬೃಹತ್ ಮೊತ್ತಕ್ಕೆ ಕಾರಣ.

ಕೊನೆಯವರೆಗೆ ಹೋರಾಟ ನಡೆಸಿದ ದಕ್ಷಿಣ ಆಫ್ರಿಕಾಕ್ಕೆ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 301 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ನಾಯಕ ಗ್ರೇಮ್ ಸ್ಮಿತ್ (141) ಅವರ ಭರ್ಜರಿ ಶತಕ ವ್ಯರ್ಥವಾಯಿತು. ಇದರೊಂದಿಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲೂ ಸೋಲು ಅನುಭವಿಸಿದ ಆತಿಥೇಯರು ಟೂರ್ನಿಯಿಂದ ಹೊರಬಿದ್ದರು.

ದಕ್ಷಿಣ ಆಫ್ರಿಕಾ 314 ರನ್ ಗಳಿಸಿದ್ದರೆ ರನ್‌ರೇಟ್‌ನಲ್ಲಿ ಶ್ರೀಲಂಕಾ ತಂಡವನ್ನು ಹಿಂದಕ್ಕುತ್ತಿತ್ತು. ಹಾಗಾದಲ್ಲಿ ತಂಡದ ಸೆಮಿಫೈನಲ್ ಪ್ರವೇಶದ ಕನಸು ಜೀವಂತವಾಗಿರುತ್ತಿತ್ತು. ಆದರೆ ಇಂಗ್ಲೆಂಡ್ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಜೇಮ್ಸ್ ಆ್ಯಂಡರ್‌ಸನ್ (42ಕ್ಕೆ 3) ಮತ್ತು ಸ್ಟುವರ್ಟ್ ಬ್ರಾಡ್ (67ಕ್ಕೆ 3) ಇಂಗ್ಲೆಂಡ್ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

click here
ಐಸಿಸಿ ನಡೆಸುವ ಪ್ರಮುಖ ಟೂರ್ನಿಗಳಲ್ಲಿ ನಿರ್ಣಾಯಕ ಹಂತದಲ್ಲಿ ಸೋಲು ಅನುಭವಿಸುವ ದಕ್ಷಿಣ ಆಫ್ರಿಕಾ ತಂಡದ ದುರಂತ ಕತೆ ಮತ್ತೆ ಮುಂದುವರಿಯಿತು. ಒಂದು ಕಡೆಯಿಂದ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಬಳಿ ನೆಲೆಯೂರಿ ನಿಂತ ಸ್ಮಿತ್ ಅದ್ಭುತ ಆಟ ತೋರಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ವಿಫಲರಾದರು.

47ನೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಸ್ಮಿತ್ ಔಟಾಗುವುದರೊಂದಿಗೆ ಆತಿಥೇಯ ತಂಡದ ಗೆಲುವಿನ ಕನಸು ಕೂಡಾ ಅಸ್ತಮಿಸಿತು. 134 ಎಸೆತಗಳನ್ನು ಎದುರಿಸಿದ ಈ ಆರಂಭಿಕ ಬ್ಯಾಟ್ಸ್ ಮನ್ 16 ಬೌಂಡರಿ ಸಿಡಿಸಿದರು. ಅವರಿಗೆ ಮತ್ತೊಂದು ಕಡೆಯಿಂದ ಉತ್ತಮ ಬೆಂಬಲ ಲಭಿಸಲಿಲ್ಲ. ಒಂದೆರಡು ದೊಡ್ಡ ಜೊತೆಯಾಟ ಗಳೂ ಮೂಡಿ ಬರಲಿಲ್ಲ.

ದಕ್ಷಿಣ ಆಫ್ರಿಕಾಕ್ಕೆ ಕೊನೆಯ 10 ಓವರ್‌ಗಳಲ್ಲಿ ಗೆಲುವಿಗೆ 94 ರನ್ ಗಳಿಸಬೇಕಿತ್ತು. ಮಾತ್ರವಲ್ಲ ಆರು ವಿಕೆಟ್‌ಗಳೂ ಕೈಯಲ್ಲಿದ್ದವು. ಆದರೆ ತಂಡ 71 ರನ್ ಗಳಿಸಲಷ್ಟೇ ಶಕ್ತವಾಯಿತು. ಮಾರ್ಕ್ ಬೌಷರ್ (8), ಅಲ್ಬಿ ಮಾರ್ಕೆಲ್ (17) ಮತ್ತು ಜೋಹಾನ್ ಬೋಥಾ (0) ಒತ್ತಡದಲ್ಲಿ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಮುಳುವಾಗಿ ಪರಿಣಮಿಸಿತು.

ಇದಕ್ಕೂ ಮೊದಲು ಒವೇಸ್ ಶಾ ಮತ್ತು ಪಾಲ್ ಕಾಲಿಂಗ್‌ವುಡ್ ಮೂರನೇ ವಿಕೆಟ್‌ಗೆ ಪೇರಿಸಿದ 163 ರನ್‌ಗಳ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್‌ಗೆ ಸವಾಲಿನ ಮೊತ್ತ ಪೇರಿಸಲು ಸಾಧ್ಯ ವಾಯಿತು. 89ಎಸೆತಗಳನ್ನು ಎದುರಿಸಿದ ಶಾ ಐದು ಬೌಂಡರಿ ಹಾಗೂ ಆರು ಸಿಕ್ಸರ್ ಸಿಡಿಸಿದರು. ಆದರೆ ಅವರು ಅರ್ಹ ಶತಕವನ್ನು ಕೇವಲ ಎರಡು ರನ್‌ಗಳಿಂದ ತಪ್ಪಿಸಿಕೊಂಡರು. ಕಾಲಿಂಗ್‌ವುಡ್ 94 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.

ಇತರ ಸುದ್ದಿಗಳು
ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್
ಕ್ರಿಕೆಟ್: ಜೆಸ್ಸಿ ರೈಡರ್‌ಗೆ ದಂಡ
ಕಿವೀಸ್ ತಂಡಕ್ಕೆ ಕೊನೆಯ ಅವಕಾಶ
ಸಾನಿಯಾ ನಿರ್ಗಮನ
ಹ್ಯಾಂಡ್ಬಾಲ್: ಮಮತಾ ನಾಯಕಿ
ಭಾರತದ ಸೆಮಿಫೈನಲ್ ಹಾದಿ ಕಠಿಣ
ರಾಜ್ಯ ಆಯ್ಕೆ ಸಮಿತಿ ಸದಸ್ಯರ ರಾಜೀನಾಮೆ?
‘ದೇಶದಲ್ಲಿ ಕ್ರೀಡೆ ಕಾಟಾಚಾರದ ವಸ್ತು’
ಅರವಿಂದ್‌ಗೆ 20ನೇ ಸ್ಥಾನ
ಶಿಶಿರ್ ಭವಾನಿ ಆಕರ್ಷಕ ಶತಕ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618