ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿಗಳನ್ನು ತೆರವುಗೊಳಿಸಿ

ಕುಂದು ಕೊರತೆ
Last Updated 12 ಫೆಬ್ರುವರಿ 2016, 9:41 IST
ಅಕ್ಷರ ಗಾತ್ರ

ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಬೆನ್ನಿಗಾನಹಳ್ಳಿಗೆ ಹೋಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗವಿದ್ದರೂ ಅದು ಪಾದಚಾರಿಗಳ ಬಳಕೆಗೆ ಸಿಗುತ್ತಿಲ್ಲ. ಕಾರಣ ಪಾದಚಾರಿ ಮಾರ್ಗದಲ್ಲಿ ಬಿದುರಿನ ವಸ್ತುಗಳು, ಗಾಜಿನ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ವಾಹನಗಳು ಸಂಚರಿಸುವಾಗ ಅವುಗಳ ಜೊತೆಯಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೆಟ್ರೊ ಬಳಸುವ ಪ್ರತಿಯೊಬ್ಬರೂ ಈ ರಸ್ತೆಯ ಮೂಲಕವೇ ಬೆನ್ನಿಗಾನಹಳ್ಳಿ ಕಡೆ ಸಂಚರಿಸಬೇಕು. ಅಲ್ಲದೆ ಐಟಿ ಕಂಪನಿಗಳ ಕಚೇರಿಗಳೂ ಬೆನ್ನಿಗಾನಹಳ್ಳಿಯಲ್ಲೇ ಇರುವುದರಿಂದ ಕೆಲಸ ಮುಗಿಸಿ ಮನೆಗೆ ತೆರಳಲು ಸಾಕಷ್ಟು ಮಂದಿ ಮೆಟ್ರೊ ಬಳಸುತ್ತಾರೆ.

ಇಷ್ಟೇ ಅಲ್ಲದೆ ಈ ರಸ್ತೆಯಲ್ಲಿ ಮಾಲ್‌ ಹಾಗೂ ಬಿಗ್‌ಬಜಾರ್ ಇರುವ ಕಾರಣ ವಾರಾಂತ್ಯದಲ್ಲಿ ಇಲ್ಲಿ  ಜನರ ಓಡಾಟ ಹೆಚ್ಚಾಗಿರುತ್ತದೆ.  ಮೆಟ್ರೊ ನಿಲ್ದಾಣದಿಂದ ಕೇವಲ 200 ಮೀಟರ್‌ ದೂರದಲ್ಲಿ ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆ ಇದೆ.

ಸಾಲದಕ್ಕೆ ಪೊಲೀಸ್‌ ಠಾಣೆ ಎದುರು ಇರುವ ಟ್ರಾಫಿಕ್‌ ಸಿಗ್ನಲ್‌ ಬಳಿ ನಿತ್ಯ ಸಂಚಾರ ಪೊಲೀಸರೂ ಇರುತ್ತಾರೆ. ಇಷ್ಟೆಲ್ಲ ಇದ್ದರೂ ಪಾದಚಾರಿಗಳು ರಸ್ತೆ ಮೇಲೆ ಒದ್ದಾಡಿಕೊಂಡು ಓಡಾಡುತ್ತಿದ್ದರೂ ಪದಾಚಾರಿ ಮಾರ್ಗವನ್ನು ಪಾದಚಾರಿಗಳಿಗೆ ಬಿಡಿಸಿಕೊಡುವ ಕುರಿತು ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಸಹರಿಸಬೇಕಾಗಿ ವಿನಿಂತಿ.
– ವಿಜಯಕುಮಾರ್‌,
ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT