ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಗುರುತು ಚೀಟಿ: ಕರಡು ವರದಿ ಸಿದ್ಧ

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂಗವಿಕಲರಿಗೆ ನ್ಯೂ­ನತೆಯ ಪೂರ್ಣ ವಿವರ­ವನ್ನು ಒಳ­ಗೊಂಡ ವಿಶಿಷ್ಟ ಸಂಖ್ಯೆಯ ಗುರುತಿನ ಚೀಟಿ (ಯುಡಿಐಸಿ) ನೀಡುವ ಮಹ­ತ್ವಾ­ಕಾಂಕ್ಷೆಯ ಯೋಜನೆ­­­­­ಯೊಂದನ್ನು  ಜಾರಿ­­ಗೊಳಿಸುವ ಸಂಬಂಧ ಅಂಗ­­ವಿ­ಕ­ಲರ ಕಲ್ಯಾಣ ಇಲಾಖೆ ಕರಡು ವರದಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ, ಸಬಲೀಕರಣ ಇಲಾಖೆ ಸಹಯೋಗ­ದಲ್ಲಿ ಅಂಗವಿ­ಕ­ಲ­ರಿ­ಗೆ ಸ್ಮಾರ್ಟ್‌ ಕಾರ್ಡ್‌ ನೀಡಲು    ಚಿಂತನೆ ನಡೆ­ಸ­ಲಾ­ಗಿದ್ದು, ಅಂಗವಿಕಲ ಪ್ರಮಾಣ ಪತ್ರ ಪಡೆ­ಯಲು ಅಂಗ­ವಿಕ­ಲರು ಅನುಭವಿ­ಸುತ್ತಿದ್ದ ನಾನಾ ತೊಂದ­ರೆ­­­ಯನ್ನು ತಪ್ಪಿ­ಸಲು ಈ ಯೋಜನೆ ಜಾರಿಗೆ ತರ­ಲಾ­ಗುತ್ತಿದೆ ಎನ್ನಲಾಗಿದೆ.

ಅಂಗವೈಕಲ್ಯದ ಶೇಕಡಾವಾರು ಪ್ರಮಾಣ, ವೈಯಕ್ತಿಕ ವಿವರ, ಗುರು­­ತಿನ ಚಹರೆ, ಉದ್ಯೋಗ, ಶಿಕ್ಷಣ ಹಾಗೂ ಬ್ಯಾಂಕ್‌ ಖಾತೆ ಸಂಖ್ಯೆ ಮತ್ತಿ­ತರ ವಿವರಗಳನ್ನು ಈ ಸ್ಮಾರ್ಟ್‌ ಕಾರ್ಡ್‌ ಒಳಗೊಂಡಿರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಅಂಗ­ವಿ­ಕಲ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಸಮ­­ರ್ಪ­ಕವಾಗಿಲ್ಲ.

ಪ್ರಮಾಣ ಪತ್ರ ಪಡೆ­­ಯಲು ಜನರು ಹರಸಾಹಸ ಪಡು­ತ್ತಿದ್ದು, ಈವರೆಗೆ ದೇಶದಾದ್ಯಂತ ಶೇ 20 ರಿಂದ 30 ಮಂದಿ ಮಾತ್ರ ­ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ ಎಂದು  ಯೋಜನೆಯ ಕರಡು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT