ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾತಿ ಬುನಾದಿ ಆಗಲಿ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ಮಹಾನ್‌ ನಾಯಕರು ತ್ಯಾಗ, ಬಲಿ­ದಾನಗಳ ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದರು. ಆದರೆ
‘ಜಾತಿ’ ಎಂಬ ದಾಸ್ಯದಿಂದ ಜನರನ್ನು ಮುಕ್ತ­ಗೊಳಿಸಲು ಈವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ತೊಡಕಾಗಿ­ರುವುದು ಜಾತಿಗಳ ಮಧ್ಯೆ ಹುಟ್ಟಿಕೊಳ್ಳುವ ಸಂಘರ್ಷ. ಇಲ್ಲಿ ವ್ಯಕ್ತಿ ಹಾಗೂ ಕುಟುಂಬಕ್ಕೆ ಮನ್ನಣೆ ಸಿಗುವುದು ಅವರು ಯಾವ ಜಾತಿ­ಯ­ವರು ಎಂಬುದನ್ನು ಆಧರಿಸಿ. ವೈಯಕ್ತಿಕ ಪ್ರತಿಭೆ, ವಿದ್ಯಾರ್ಹತೆ ಮತ್ತು ಅನುಭವಗಳು ಲೆಕ್ಕಕ್ಕೆ ಇಲ್ಲವಾಗಿವೆ.

ರಾಜಕೀಯ ನೇತಾರರು ಕೆಲವರು ಬಳ್ಳಾರಿ ಹಾಗೂ ಗದಗ ತಾಲ್ಲೂಕಿನಲ್ಲಿ ಅನೇಕ ವರ್ಷ­ಗಳಿಂದ ಸಾಮೂಹಿಕ ವಿವಾಹವನ್ನು ವಾರ್ಷಿ­ಕೋತ್ಸವದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅವೆಲ್ಲ ಜಾತಿ ಆಧಾರಿತವಾಗಿವೆ ಹೊರತು ಅಂತರ್ಜಾತಿ ಆಧಾರಿತವಲ್ಲ.

ಅಂತರ್ಜಾತಿ ಆಧಾರಿತ ಸಾಮೂಹಿಕ ವಿವಾಹಗಳು ಹಿಂದೂ ಧರ್ಮದ ಜೀವಂತಿಕೆಗೆ ಆಧಾರ ಆಗಬಲ್ಲವು. ಎಲ್ಲ ವಲಯಗಳ
ನೇತಾ­ರರೂ ಜಾತಿ ಆಧಾರಿತ ರಾಜಕಾರಣ ಬಿಟ್ಟು, ಅರ್ಹತೆ ಮತ್ತು ಕರ್ತವ್ಯ ನಿಷ್ಠೆಗೆ ಮನ್ನಣೆ ನೀಡುವ ರಾಜಕಾರಣಕ್ಕೆ ಮುಂದಾಗಬೇಕು. ಆಗ ಮಾತ್ರ ಭಾರತ ಬಲಿಷ್ಠ ರಾಷ್ಟ್ರ ಆಗಲು ಸಾಧ್ಯ.
–ಕೆ.ಎಚ್‌.ಕೆ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT