ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಮೊಗಕ್ಕೆ ಕಿವಿಯೋಲೆ

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದಿನ ಫ್ಯಾಷನ್‌ ನಾಳೆಗೆ ಓಲ್ಡ್‌ ಎಂಬ ಮಟ್ಟಿಗೆ ಮಾರುಕಟ್ಟೆಯಲ್ಲಿ ನವೀನ ವಿನ್ಯಾ­ಸದ ಬಟ್ಟೆ, ಆಭರಣಗಳು ಲಗ್ಗೆ ಇಡುತ್ತಿವೆ. ಆದರೆ ಮತ್ತೊಂದು ಕಡೆ, ಅಜ್ಜಿ ಕಾಲದ ಹಳೆ ಆಭರಣ­ಗಳು ಅಲ್ಪ ಸ್ವಲ್ಪ ಬದಲಾವಣೆ ಮಾಡಿ­ಕೊಂಡು ಟ್ರೆಂಡ್‌ ಹೆಸರಿನಲ್ಲಿ ಯುವತಿಯ­ರ ಮನ ಗೆಲ್ಲುತ್ತಿವೆ. ಕಿವಿಯೋಲೆಗೂ ಈ ಮಾತು ಅನ್ವಯಿಸುತ್ತದೆ.

ಹೆಣ್ಣು ಅಲಂಕಾರಪ್ರಿಯಳು. ಆಕೆ ಕನ್ನಡಿ ಮುಂದೆ ನಿಂತಾಗ ಉಡುಪಿಗೆ ಒಪ್ಪುವ ಅಂದದ ಕಿವಿಯೋಲೆಯನ್ನು ಧರಿಸಿ­ದಾಗ, ಆಕೆಯ ಅಲಂಕಾರ ಪೂರ್ಣ­ಗೊಂಡಂತೆ. ಧರಿಸುವ ಬಟ್ಟೆ ಅಥವಾ ಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಓಲೆಗಳನ್ನು ಧರಿಸಿದರೆ ಆಕೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ.

ಓಲೆ ಧರಿಸುವಾಗ ದೇಹದ ಬಣ್ಣ, ಆಕಾರ, ಕೂದಲ ವಿನ್ಯಾಸ­ವನ್ನು ಗಮನದಲ್ಲಿಟ್ಟು­ಕೊಳ್ಳಬೇಕು. ಈಗ ಜೂಮರ್‌, ಕ್ವಿಲ್ಗಿಂಗ್‌ ಶೈಲಿ ಕಿವಿಯೋಲೆಗಳ ಟ್ರೆಂಡ್‌. ಕ್ವಿಲ್ಗಿಂಗ್‌ ಓಲೆಗಳನ್ನು ಪೇಪರ್‌ನಿಂದ ಎರಡು ನಿಮಿಷ­ಗಳಲ್ಲಿ ನಾವೇ ಮಾಡಬಹುದಾಗಿದ್ದರಿಂದ ಎಲ್ಲ ಹುಡುಗಿಯರು ಈ ರೀತಿಯ ಓಲೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇನ್ನು ಎಲ್ಲ ಕಾಲಕ್ಕೆ, ಎಲ್ಲರಿಗೂ ಅನ್‌ಕಟ್‌ ಕುಂದನ್‌ ಓಲೆಗಳು ಚೆನ್ನಾಗಿ ಒಪ್ಪುತ್ತವೆ.
ದೀಪಾ ನಾಗೇಶ್‌
ಸೌಂದರ್ಯ ತಜ್ಞೆ

ಕಣ್ಮನ ಸೆಳೆ­ಯುವ, ವಾರ್ಡ್‌ರೋಬಿ­ನಲ್ಲಿ­ರುವ ಪ್ರತಿ ಬಟ್ಟೆಯ ಬಣ್ಣದ ಮ್ಯಾಚಿಂಗ್ ಟ್ರೆಂಡಿ ಕಿವಿಯೋಲೆಗಳು ಎಲ್ಲ ಹೂವು, ಶಂಖ, ತ್ರಿಕೋನ, ಚೌಕ ಆಕಾರದ ಬ್ಲಾಕ್‌ಮೆಟಲ್‌, ಹಿತ್ತಾಳೆ, ಪ್ರಾಸ್ಟಿಕ್‌, ಮರ, ಟೆರಕೋಟಾದ ಓಲೆಗಳು ಮಾರುಕಟ್ಟೆ ದೊರೆಯುತ್ತವೆ.
ಕಳೆದ ಐದಾರು ವರ್ಷಗಳಿಂದ ಹ್ಯಾಂಗಿಂಗ್ಸ್‌ಗೆ ವಿಪರೀತ ಬೇಡಿಕೆ. ಇವು­ ಕಾಲೇಜು ಹುಡುಗಿಯರ ಅಚ್ಚುಮೆಚ್ಚು. ಹೈಸ್ಕೂಲು ದಿನಗಳಲ್ಲಿ ಅಮ್ಮ ತೆಗೆಸಿಕೊಟ್ಟಿದ ಚಿನ್ನದ ಗುಂಡಿನ ಜಾಗದಲ್ಲಿ ಈಗ ಹ್ಯಾಂಗಿಂಗ್ಸ್‌ ಓಲಾಡುತ್ತವೆ. ಇವು ಸೆಲ್ವಾರ್‌, ಟಿ–ಶರ್ಟ್‌ ಎಲ್ಲದಕ್ಕೂ ಒಪ್ಪುತ್ತವೆ. ಜತೆಗೆ ಮುಖಕ್ಕೆ ಸ್ಟೈಲಿಶ್‌ ಲುಕ್‌ ನೀಡುತ್ತವೆ.

ಡಾಂಗಲ್ಸ್‌ (ಚೌಕಾಕಾರದ ಅಥವಾ ವೃತ್ತಕಾರದ ಕಿವಿಯೋಲೆ), ಸ್ಟಡ್ಸ್‌, ಚಾಂದೆನಿ­ಯರ್‌­ (ತೂಗುದೀಪಗಳನ್ನು ಹೋಲುವಂತಹ ಕಿವಿಯೋಲೆ), ಹ್ಯಾಪ್ಸ್‌ (ರಿಂಗ್‌ಗಳು) ಕಾಲೇಜು ಬೆಡಗಿಯರ ನೆಚ್ಚಿನ ಆಯ್ಕೆಗಳು. ಇತ್ತೀಚೆಗೆ ಮುತ್ತು, ಹರಳುಗಳಿಂದ ಮಾರುಕಟ್ಟೆಯಲ್ಲಿ ದೊರಕುವ ದೊಡ್ಡ ದೊಡ್ಡ ಜುಮುಕಿಯನ್ನು ಹೋಲುವಂತಹ ಕಿವಿಯೋಲೆ ಯುವ­ಮನಸ್ಸಿಗೆ ಲಗ್ಗೆ ಇಟ್ಟಿವೆ. ಸಿನಿಮಾ, ಧಾರಾವಾಹಿ­ಗಳಲ್ಲಿ ನಟಿಯರು ಹೆಚ್ಚಾಗಿ ಧರಿಸುತ್ತಿದ್ದ ಈ ಕಿವಿಯೋಲೆಗಳು ಈಗ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲೂ ಧರಿಸುತ್ತಾರೆ. ಇವುಗಳ ಬೆಲೆ ₨ 250ರಿಂದ ಆರಂಭವಾಗಿ ₨ 5 ಸಾವಿರದ ತನಕ ಇದೆ.

ಮುಖಕ್ಕೆ ತಕ್ಕಂಥ ಓಲೆ
ಹೆಚ್ಚಿನ ಮಹಿಳೆಯರು ಕಿವಿಯೋಲೆ ಆಯ್ಕೆಯಲ್ಲಿ ಆಸಕ್ತಿ ವಹಿಸುವುದಿಲ್ಲ. ಶಾಪಿಂಗ್‌ ಹೋದಾಗ ಕಣ್ಣಿಗೆ ಚಂದ ಕಾಣುವುದನ್ನು ಖರೀದಿ ಮಾಡುವವರೇ ಹೆಚ್ಚು. ಓಲೆ ಆಯ್ಕೆ ಮಾಡು­ವಾಗ ಸ್ವಲ್ಪ ಆಸಡ್ಡೆ ವಹಿಸಿದರೂ, ಮುಖದ ಕಳೆ ಹಾಳಾಗ­ಬಹುದು. ಓಲೆ ತೆಗೆದುಕೊಳ್ಳುವಾಗ ಮುಖಕ್ಕೆ ಹೇಗೆ ಒಪ್ಪುತ್ತದೆ ಎಂದು ಕಿವಿಗೆ ಹಾಕಿಕೊಂಡು ಕನ್ನಡಿ­ಯಲ್ಲಿ ಪರೀಕ್ಷಿಸುವುದೊಳಿತು.

ಅಗಲ ಮುಖ ಉಳ್ಳವರು ಚಿಕ್ಕದಾದ  ದುಂಡಾದ ಓಲೆ ಹಾಕಿಕೊಳ್ಳಬಾರದು. ಅಂತಹ ಓಲೆಗಳು ಅವರ ಮುಖದಲ್ಲಿ ಕಾಣುವುದಿಲ್ಲವಾದ್ದರಿಂದ ಅಗಲ, ನಾಣ್ಯದ ಆಕಾರದ ಓಲೆ ಒಳ್ಳೆಯದು. ಚಿಕ್ಕ ಮುಖದವರು ಸಣ್ಣದಾದ ಓಲೆ ಧರಿಸಿದರೆ ಸುಂದರವಾಗಿ ಕಾಣಿಸುತ್ತಾರೆ. ದಿನನಿತ್ಯದ ಬಳಕೆಗೆ ಇವರಿಗೆ ಹ್ಯಾಂಗಿಂಗ್ಸ್‌ ಸೂಕ್ತ.

ಇನ್ನು ಉದ್ದ ಮುಖದವರು ಮೊಟ್ಟೆ ಆಕಾರದ, ದುಂಡಗಿನ ಓಲೆ ಧರಿಸಬೇಕು. ಉದ್ದದ ಓಲೆ ಧರಿಸುವುದರಿಂದ ಮುಖ ಕೋಲಿನಂತೆ ಕಾಣಿಸುತ್ತದೆ. ಮೊಟ್ಟೆ ಆಕಾರದ ಮುಖದವರು ಯಾವ ವಿನ್ಯಾಸದ ಓಲೆ ಧರಿಸಿದರೂ ಅಂದವಾಗಿ ಕಾಣಿಸುತ್ತಾರೆ. ಕೂದಲು ಸಣ್ಣದಾಗಿದ್ದು, ಮುಖ ಸ್ವಲ್ಪ ಉದ್ದವಿದ್ದರೆ ಹ್ಯಾಂಗಿಂಗ್ಸ್‌ ಬೇಡವೇ ಬೇಡ.

ಉಡುಗೆಗೆ ತಕ್ಕ ಓಲೆ
ಆಧುನಿಕ ಉಡುಪುಗಳಿಗೆ ಲೈಟ್‌ವೇಟ್‌, ಹ್ಯಾಂಗಿಂಗ್ಸ್‌, ಸ್ಟಡ್ಸ್‌ ಚೆನ್ನಾಗಿ ಕಾಣುತ್ತದೆ. ರೇಷ್ಮೆ  ಸೀರೆಗಳಿಗೆ ಕಿವಿಯೋಲೆ ದೊಡ್ಡದಾಗಿ ಗ್ರ್ಯಾಂಡಾಗಿ ಇರಬೇಕು. ಇನ್ನು ಹೇರ್‌ ಸ್ಟೈಲ್‌ಗೆ ತಕ್ಕಂತೆ, ಉದ್ದ ಕೂದಲು ಹೊಂದಿದವರು ಉದ್ದ ಹ್ಯಾಂಗಿಂಗ್ಸ್‌, ಗಿಡ್ಡ ಕೂದಲು ಹೊಂದಿದವರು ಸಣ್ಣ ಓಲೆ ಧರಿಸುವುದು ಒ­ಳಿತು. ಇನ್ನು ಗ್ರ್ಯಾಂಡ್‌ ಸಲ್ವಾರ್‌ ಹಾಕಿ­ಕೊಂಡಾಗ ಕುತ್ತಿಗೆಗೆ ಸಣ್ಣ ಪೆಂಡೆಂಟ್‌ ಸರ, ಕಿವಿಗೆ ಗ್ರ್ಯಾಂಡ್‌ ಓಲೆ ಹಾಕಿದಾಗ ಉಡುಗೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಉದ್ಯೋಗಸ್ಥ ಮಹಿಳೆಯರು ಸರಳವಾದ ಸ್ಟಡ್ಸ್‌, ಚಿನ್ನದ ಓಲೆ ಧರಿಸಿದರೆ ಅಂದವಾಗಿ ಕಾಣುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT