ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರೊಬ್ಬರು ರಾಷ್ಟ್ರಪತಿಯಾಗಲಿ...

Last Updated 19 ಡಿಸೆಂಬರ್ 2014, 19:48 IST
ಅಕ್ಷರ ಗಾತ್ರ

ಅದು 2006ರ ಆಗಸ್ಟ್‌ 28. ರಾಷ್ಟ್ರಪತಿಯಾಗಿದ್ದ ನನ್ನನ್ನು ಭೇಟಿ ಮಾಡಲು ವಿವಿಧ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಬಂದಿದ್ದರು. ‘ನಿಮ್ಮ ಕನಸೇನು’ ಎಂದೆ. ಅದಕ್ಕೆ ‘ವೈದ್ಯ, ಎಂಜಿನಿಯರ್‌, ರಾಜಕಾರಣಿ ಆಗಬೇಕು’ ಎಂದೆಲ್ಲಾ ನುಡಿದರು. ಒಬ್ಬ ವಿದ್ಯಾರ್ಥಿ ಮಾತ್ರ ‘ನನಗೆ ನಿಮ್ಮನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ನಾನು ಅಂಧ. ರಾಷ್ಟ್ರದ ಮೊದಲ ಅಂಧ ರಾಷ್ಟ್ರಪತಿ ಆಗಬೇಕು ಎಂಬ ಕನಸಿದೆ’ ಎಂದ.

ಆ ವಿದ್ಯಾರ್ಥಿ 10ನೇ ತರಗತಿಯಲ್ಲಿ ಶೇ 90, 11ನೇ ತರಗತಿಯಲ್ಲಿ ಶೇ 94 ಹಾಗೂ 12ನೇ ತರಗತಿಯಲ್ಲಿ ಶೇ 96ರಷ್ಟು ಅಂಕ ಪಡೆದಿದ್ದ. ಎಂಐಟಿಯಲ್ಲಿ ಎಂಜಿನಿಯರಿಂಗ್‌ ಓದಲು ಅರ್ಜಿ ಹಾಕಿದ. ಆದರೆ, ಅಂಧ ಎಂಬ ಕಾರಣಕ್ಕಾಗಿ ಸಂಸ್ಥೆಯ ಅಧ್ಯಕ್ಷರು ಈ ಅರ್ಜಿಯನ್ನು ಪರಿಗಣಿಸಲಿಲ್ಲ. ಆ ವಿದ್ಯಾರ್ಥಿ ಮತ್ತೆ ಅರ್ಜಿ ಹಾಕಿ, ಪರೀಕ್ಷೆ ನಡೆಸಿ ಆಯ್ಕೆ ಮಾಡಿ ಎಂದ. ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಈ ವಿದ್ಯಾರ್ಥಿಗೆ 4ನೇ ರ್‌್್ಯಾಂಕ್‌ ಬಂತು.

ಆತನಿಗೆ ಉದ್ಯೋಗ ನೀಡಲು ಹಲವು ಕಂಪೆನಿಗಳು ಮುಂದಾದವು. ಆದರೆ, ಆತನ ಕನಸು ಮಾತ್ರ ದೇಶದ ಮೊದಲ ಅಂಧ ರಾಷ್ಟ್ರಪತಿ ಆಗಬೇಕು ಎಂಬುದು. ಆತನ ಛಲ ನೋಡಿ ಎಂದು ಕಲಾಂ ಹೇಳಿದರು.

ಪತ್ರ ಬರೆಯಿರಿ,  ಪುಸ್ತಕ ಕೊಡುತ್ತೇನೆ...
‘ಸಮಾಜ ಏಕೆ ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನನಗೆ ಐದಾರು ಸಾಲಿನಲ್ಲಿ ಪತ್ರ ಬರೆಯಿರಿ. ಉತ್ತಮ ಪತ್ರಕ್ಕೆ  ಪುಸ್ತಕ ಕಳುಹಿಸುತ್ತೇನೆ. ನನ್ನ ಇ–ಮೇಲ್‌ ವಿಳಾಸ  apj@abdulkalam. com’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT