ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಮೊಮ್ಮಕ್ಕಳು ಗೂಂಡಗಳು: ಗಾಯಕ್‌ವಾಡ್‌

Last Updated 30 ಜೂನ್ 2016, 11:18 IST
ಅಕ್ಷರ ಗಾತ್ರ

ಮುಂಬೈ:  ದಾದ್ರದಲ್ಲಿನ ಬಾಬಾ ಸಾಹೇಬ್‌ ಅಂಬೇಡ್ಕರ್‌ ಭವನ ನೆಲಸಮ ಪ್ರಕರಣ ಹೊಸ ತಿರುವು ಪಡೆದಿದ್ದು ಮಹಾರಾಷ್ಟ್ರದ ಮಾಹಿತಿ ಆಯುಕ್ತರಾದ ರತ್ನಾಕರ್‌ ಗಾಯಕ್‌ವಾಡ್‌ ಅವರು ಅಂಬೇಡ್ಕರ್‌ ಅವರ ಸಹೋದರರು ಮತ್ತು ಮೊಮ್ಮಕ್ಕಳು ಗೂಂಡಗಳು ಎಂದು ದೂರಿದ್ದಾರೆ.

ಆನ್‌ಲೈನ್‌ ಸುದ್ದಿ ಜಾಲ ‘ಫಸ್ಟ್‌ಪೋಸ್ಟ್‌’ಗೆ ನೀಡಿರುವ ಸಂದರ್ಶನದಲ್ಲಿ ಗಾಯಕ್‌ವಾಡ್‌ ಅವರು ಅಂಬೇಡ್ಕರ್‌ ಅವರ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?
ಮಹಾರಾಷ್ಟ್ರ ಸರ್ಕಾರ 72 ವರ್ಷ ಹಳೆಯದಾದ ಅಂಬೇಡ್ಕರ್‌ ಭವನವನ್ನು ನೆಲಸಮಗೊಳಿಸಿ 17 ಅಂತಸ್ತಿನ ನೂತನ ಕಟ್ಟಡ ಕಟ್ಟಲು ಉದ್ದೇಶಿಸಿದೆ. ಆದರೆ ಈ ಆಸ್ತಿ ತಮಗೆ ಸೇರಬೇಕು ಎಂಬುದು ಅಂಬೇಡ್ಕರ್‌ ಸಂಬಂಧಿಗಳ ವಾದವಾಗಿದೆ.

ಟ್ರಸ್ಟ್‌ಗೆ ಸೇರಿರುವ ಈ ಆಸ್ತಿಯಲ್ಲಿ  ತಮ್ಮ ಕುಟುಂಬದವರು ಮತ್ತು ಸಂಬಂಧಿಗಳಿಗೆ ಯಾವುದೇ ಪಾಲಿಲ್ಲ ಎಂದು ಅಂಬೇಡ್ಕರ್‌ ಸ್ಪಷ್ಟವಾಗಿ ತಿಳಿಸಿದ್ದರೂ ಅವರ ಸಂಬಂಧಿಗಳು ಗೂಂಡಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗಾಯಕ್‌ವಾಡ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT