ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಹಕ್ಕು ಸ್ಥಾಪನೆ: ಭಾರತದ ಖಂಡನೆ

ಗಿಲ್ಗಿಟ್‌– ಬಾಲ್ಟಿಸ್ತಾನ ಚುನಾವಣೆ
Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಾಕ್‌ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌ ಹಾಗೂ ಬಾಲ್ಟಿಸ್ತಾನಗಳಲ್ಲಿ ಪಾಕಿಸ್ತಾನವು ಚುನಾವಣೆ ನಡೆಸಲು ಹೊರಟಿರುವುದಕ್ಕೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಗಿಲ್ಗಿಟ್‌ ಹಾಗೂ ಬಾಲ್ಟಿಸ್ತಾನ್‌ ಸಬಲೀಕರಣ ಮತ್ತು ಸ್ವಯಂ ಆಡಳಿತ ಆದೇಶ’ದ ಅಡಿ ಜೂನ್‌ 8ರಂದು ಈ ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.

‘ಪಾಕಿಸ್ತಾನವು ಆ ಭಾಗದ ಜನರಿಗೆ ರಾಜಕೀಯ ಹಕ್ಕುಗಳನ್ನು ನಿರಾಕರಿಸುತ್ತ ಬಂದಿದೆ. ಅಲ್ಲದೇ ಆ ಪ್ರದೇಶಗಳನ್ನು ಒಳ ಹಾಕಿಕೊಳ್ಳಲು ಯತ್ನಿಸುತ್ತಿದೆ. ಗಿಲ್ಗಿಟ್‌ ಹಾಗೂ ಬಾಲ್ಟಿಸ್ತಾನ್‌ಗಳಲ್ಲಿ  ತಾನು ಅಕ್ರಮವಾಗಿ ಹಕ್ಕು ಸ್ಥಾಪಿಸಿರುವುದನ್ನು ಚುನಾವಣೆ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದೆ’ ಎಂದು  ಭಾರತ ಆರೋಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌, ‘ಈ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಗಿಲ್ಗಿಟ್‌ ಹಾಗೂ ಬಾಲ್ಟಿಸ್ತಾನ್‌ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದರು.

‘ಪಾಕಿಸ್ತಾನ ಈ ಪ್ರದೇಶಗಳನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಲೇ ಇದೆ. ಪಾಕ್‌ ಸಚಿವರೊಬ್ಬರು ಗಿಲ್ಗಿಟ್‌, ಬಾಲ್ಟಿಸ್ತಾನದ ಗವರ್ನರ್‌ ಆಗಿರುವುದೇ ಇದಕ್ಕೆ ಸಾಕ್ಷಿ.  ‘ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದ ಜನ ಜನಾಂಗೀಯ ಹಿಂಸೆ, ಭಯೋತ್ಪಾದನೆಯಿಂದ ನಲುಗಿದ್ದಾರೆ. ಪಾಕಿಸ್ತಾನದ ಆಕ್ರಮಣಕಾರಿ ನೀತಿಯಿಂದಾಗಿ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ’ ಎಂದೂ ವಿಕಾಸ್‌ ಸ್ವರೂಪ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT