ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಂಗ್ರಹಕ್ಕೆ ಕಡಿವಾಣ: ಅನಿತಾ

Last Updated 30 ಜುಲೈ 2014, 9:01 IST
ಅಕ್ಷರ ಗಾತ್ರ

ಲಿಂಗಸುಗೂರು: ಪೊಲೀಸ್‌ ಉಪ ವಿಭಾಗ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ ಅಕ್ರಮ ಮರಳು ಸಂಗ್ರಹಣೆ ಮಾಡಿದ್ದು ಪತ್ತೆಯಾದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಅನಿತಾ ಹದ್ದಣ್ಣವರ ಹೇಳಿದರು.

ಸೋಮವಾರ ಗುರಮ್ಮ ದೇವರಾಜ ನಿವೇಶನದಲ್ಲಿನ 150 ಕ್ಯೂಬಿಕ್‌ ಮೀಟರ್‌ ಅಕ್ರಮ ಮರಳು ವಶಪಡಿಸಿ­ಕೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಹೊಸ ಮರಳು ನೀತಿ ಅನ್ವಯ ಸರ್ಕಾರ ಗುರುತಿಸಿದ ಸ್ಥಳದಿಂದ ಮಾತ್ರ ಅಧಿಕೃತ ಪರವಾನಗಿ ರಸೀದಿ ಪಡೆದು ಮರಳು ಸಾಗಣೆ ಅಥವಾ ಸಂಗ್ರಹಣೆ ಮಾಡುವುದು ಕಡ್ಡಾಯ ಎಂದರು.

ಅಕ್ರಮ ಮರಳು ಸಾಗಣೆ ಮಾಡು­ವವರು ಬಹುತೇಕ ಖಾಲಿ ನಿವೇಶನ­ಗಳಲ್ಲಿ ಅನಧಿಕೃತ ಮರಳು ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿವೆ. ಯಾವುದೇ ಸ್ಥಳದಲ್ಲಿ ದಾಖಲೆ ಹೊಂದಿರದ ಮರಳು ಸಂಗ್ರ­ಹ ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸ­ಲಾಗುವುದು ಎಂದು ವಿವರಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಸುಶೀಲಕುಮಾರ. ಕಂದಾಯ ನಿರೀಕ್ಷಕ ತುಳುಜಾರಾಮಸಿಂಗ್‌. ಲೋಕೋಪ­ಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಶಿವನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT