ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ–4 ಕ್ಷಿಪಣಿ ಪ್ರಯೋಗ ಯಶಸ್ವಿ

Last Updated 2 ಡಿಸೆಂಬರ್ 2014, 10:46 IST
ಅಕ್ಷರ ಗಾತ್ರ

ಬಾಲಸೋರ್, ಒಡಿಶಾ (ಪಿಟಿಐ): ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಅಗ್ನಿ–4ರ ಪ್ರಯೋಗಾರ್ಥ ಪರೀಕ್ಷೆಯನ್ನು ಒಡಿಶಾ ಕಡಲ ತೀರದಲ್ಲಿ ಭಾರತವು ಮಂಗಳವಾರ ಯಶ್ವಸಿಯಾಗಿ ನಡೆಸಿತು.

ಸುಮಾರು 4 ಸಾವಿರ ಕಿ.ಮೀ ದೂರಕ್ಕೆ ನೆಗೆಯಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ–4 ಕ್ಷಿಪಣಿಗೆ ಇದು ನಾಲ್ಕನೇ ಪರೀಕ್ಷಾರ್ಥ ಪ್ರಯೋಗ. ಈ ವರ್ಷದ ಜನವರಿ 20ರಂದು ಕಳೆದ ಬಾರಿ ಇದರ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿತ್ತು.

ಇಲ್ಲಿನ ಸಂಚಾರಿ ದ್ವೀಪದಲ್ಲಿರುವ ಸಮಗ್ರ ಪರೀಕ್ಷಾ ವಲಯದ ನಾಲ್ಕನೇ  ಸಂಕೀರ್ಣದಿಂದ ಕ್ಷಿಪಣಿಯನ್ನು ಬೆಳಿಗ್ಗೆ 10.20ಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಡಿಆರ್‌ಡಿಒ ಸಾರ್ವಜನಿಕ ನಿರ್ದೇಶನಾಲಯದ ನಿರ್ದೇಶಕ ರವಿ ಕುಮಾರ್ ಗುಪ್ತ ಅವರು ತಿಳಿಸಿದ್ದಾರೆ.

‘ಅತ್ಯಾಧುನಿಕ ಖಂಡಾಂತರ ಕ್ಷಿಪಣಿಯು  ಆಧುನಿಕ ಏವಿಯಾನಿಕ್ಸ್‌ ಸೌಲಭ್ಯ ಹೊಂದಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT