ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಲಾಂಟದಿಂದ ಮುಂಬೈವರೆಗೆ...

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಟ್ರಿಗರ್ಸ್ ಡೋಂಟ್ ನೀಡ್ ಪಾಸ್‌ವರ್ಡ್ಸ್’. ಇದು ‘ಮುಂಭಾಯ್ ಕನೆಕ್ಷನ್’ ಹಿಂದಿ ಚಿತ್ರದ ಅಡಿಬರಹ. ಚಿತ್ರದ ಅಡಿಬರಹಕ್ಕೆ ತಕ್ಕಂತೆ ಬುಲೆಟ್‌ಗಳು ಎಗ್ಗಿಲ್ಲದೇ ಹಾರಿವೆ ಎಂಬುದು ಚಿತ್ರದ ಪ್ರೋಮೊದಿಂದಲೇ ಗೊತ್ತಾಗುತ್ತದೆ. ಎರಡು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದ ಅಟ್ಲಾಂಟಾ ನಾಗೇಂದ್ರ ಅವರು ‘...ಕನೆಕ್ಷನ್‌’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರ ಇಂದು (ಆಗಸ್ಟ್ 22) ತೆರೆಗೆ ಬರುತ್ತಿದೆ. ಈ ವಿಚಾರ ಮತ್ತು ಹಾಡಿನ ಲೋಕಾರ್ಪಣೆ ಸಂತಸ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು.

ಚಿತ್ರ ಅಮೆರಿಕದಲ್ಲೇ ನಿರ್ಮಾಣವಾಗಿದೆ. ಐಟಿ, ಮಾಫಿಯಾ ಜಗತ್ತಿಗೆ ಸಂಬಂಧಿಸಿದ ಕಥೆ. ಮಹಾನಗರಗಳ ಜನರನ್ನು ಖಂಡಿತ ತಲುಪುತ್ತದೆ ಎಂಬುದು ನಾಗೇಂದ್ರ ಅವರ ನಂಬಿಕೆ. ಈಗಾಗಲೇ ಹಲವು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಂಸೆಯನ್ನೂ ಗಿಟ್ಟಿಸಿದೆಯಂತೆ.

ಮುಂಬೈನ ರಫೀಕ್ ಬಾದ್‌ಷಾ  ಈ ಚಿತ್ರದ ನಾಯಕ. ‘ಮಾಫಿಯಾಕ್ಕೆ ಸಂಬಂಧಿಸಿದ ಥೀಮ್. ಒಳ್ಳೆಯ ಹಾಸ್ಯವೂ ಇಲ್ಲಿ ಇದೆ’ ಎಂದರು.

‘ಚಿತ್ರದಲ್ಲಿ ಒಂದೇ ಹಾಡಿದ್ದರೂ ಸಾಕಷ್ಟು ಕಾಡಿಸಿದ ನಂತರ ನಿರ್ದೇಶಕರು ಒಳ್ಳೆಯ ಟ್ಯೂನ್ ಆಯ್ಕೆ ಮಾಡಿಕೊಂಡರು’ ಎಂದರು ಸಂಗೀತ ನಿರ್ದೇಶಕ ಸ್ಟೀಫನ್. ಸುನಿಧಿ ಚೌಹಾಣ್ ಕಂಠದಲ್ಲಿ ಹಾಡು ಮೂಡಿದೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ  ಧ್ವನಿಸುರುಳಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT