ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ತಯಾರಿಕೆಗೆ ನೆರವಾಗುವ ಆ್ಯಪ್‌ಗಳು

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಇಂದಿನ ದಿನಗಳಲ್ಲಿ ಬಗೆಬಗೆಯ ಖಾದ್ಯಗಳ ಪಾಕ ವಿಧಾನಗಳಿಗಾಗಿ ನೀವು ಅಡುಗೆ ಪುಸ್ತಕಗಳನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ವಿಶ್ವದಾದ್ಯಂತದ ರುಚಿ ಸೊಗಡಿನೊಂದಿಗೆ ಲಕ್ಷಾಂತರ ಪಾಕ ವಿಧಾನಗಳು ಮೊಬೈಲ್‌ ಆ್ಯಪ್‌ಗಳಲ್ಲಿ ಲಭ್ಯವಿವೆ.

ದಿನವಿಡೀ ಕಚೇರಿ ಕೆಲಸ ಮಾಡಿಯೋ ಅಥವಾ ಪಾರ್ಟಿಯ ಹೆಸರಿನಲ್ಲಿ ಒಟ್ಟಾಗುವ ಒಂದು ಡಜನ್ ಅತಿಥಿಗಳಿಗೆ ಉಣಬಡಿಸಲು ಬೇರೆ ಬೇರೆ ರೀತಿಯ ಖಾದ್ಯ ತಯಾರಿಸಲು ನಿಮಗೆ ಉತ್ತಮ ಮಾರ್ಗದರ್ಶಕನಾಗಿ ಈ ಆ್ಯಪ್‌ಗಳು ನೆರವಾಗುತ್ತವೆ.

ಸೈಡ್‌ಸೆಫ್ (SideChef) ನನ್ನ ಮೆಚ್ಚಿನ ಅಡುಗೆ ಆ್ಯಪ್. ಏಕೆಂದರೆ ಅದು ಆಕರ್ಷಕ ಮತ್ತು ಸರಳವಾದ ಗುಣಲಕ್ಷಣವನ್ನು ಹೊಂದಿದೆ. ಇದರಲ್ಲಿ ನೀವು ಅಡುಗೆ ಮಾಡುತ್ತಲೇ ಬೆರಳುಗಳಿಂದ ನಿಮ್ಮ  ಮೊಬೈಲ್ ಪರದೆಯನ್ನು ಪದೇ ಪದೇ ಮುಟ್ಟಿ–ತಟ್ಟಿ ಮಾಡಬೇಕಾಗಿಲ್ಲ.

ಇದರ ಆರಂಭಿಕ ಪುಟವು ಸಾವಿರಾರು ಪಾಕವಿಧಾನಗಳೊಂದಿಗೆ ಹೊಳಪಿನ, ಫೋಟೊಗಳಿಂದ  ಸಮೃದ್ಧವಾದ ನಿಯತಕಾಲಿಕೆಯಂತೆ ಇದೆ. ನೀವು ಖಾದ್ಯ ಒಂದನ್ನು ಅದರ ಹೆಸರಿನಿಂದ ಅಥವಾ ನಿರ್ದಿಷ್ಟವಾದ ಸಾಮಗ್ರಿಯಿಂದ ಅಥವಾ ‘ಡೆಸರ್ಟ್ಸ್’ ಇಲ್ಲವೇ ‘ಹಾಲಿಡೇ’ ಮುಂತಾದ ವರ್ಗಗಳಿಂದ ಹುಡುಕಬಹುದು.

ನಿಮಗೇನು ಬೇಕು ಎಂಬುದನ್ನು ನೀವು ಕಂಡುಕೊಂಡಾಗ, ಈ ಆ್ಯಪ್ ಬೇಕಿರುವ ಸಾಮಗ್ರಿಗಳ ಪಟ್ಟಿಯೊಂದಿಗೆ ಹಂತ-ಹಂತವಾದ ಸೂಚನೆಗಳೊಂದಿಗೆ ಪಾಕವಿಧಾನವನ್ನು ಪ್ರಸ್ತುತ ಪಡಿಸುತ್ತದೆ.

ನೀವು ದೊಡ್ಡ ‘ಕುಕ್’  ಬಟನ್ ಒತ್ತಿದಾಗ  ಸೈಡ್‌ಸೆಫ್‌ ಆ್ಯಾಪ್‌ನ ನಿಜವಾದ ಮಾಯಾಜಾಲ ಆರಂಭಗೊಳ್ಳುತ್ತದೆ. ಈಗ ಆ್ಯಪ್ ಒಂದು ಟೈಮರ್‌ನ್ನು ಪ್ರಾರಂಭಿಸುತ್ತದೆ ಮತ್ತು ಪರದೆಯು ಒಂದು ಸೂಚನೆಯನ್ನು ಫೋಟೋದೊಂದಿಗೆ ತೋರಿಸುತ್ತದೆ. ಒಂದು ಇಲೆಕ್ಟ್ರಾನಿಕ್ ಧ್ವನಿಯು ಸೂಚನೆಗಳನ್ನು ದೊಡ್ಡಧ್ವನಿಯಲ್ಲಿ ಓದುತ್ತ ಹೋಗುತ್ತದೆ, ಹಾಗಾಗಿ ನೀವು ಪರದೆಯನ್ನು ನೋಡದೆಯೇ ಕತ್ತರಿಸುವುದರಲ್ಲಿ ಅಥವಾ ಬೇಯಿಸುವುದರಲ್ಲಿ ನಿಮ್ಮ ಗಮನ ಕೇಂದ್ರೀಕರಿಸಬಹುದು.

ನೀವು ಮುಂದಿನ ಹಂತಕ್ಕೆ ಹೋಗುವ ಸಮಯದಲ್ಲಿ, ನೀವು ‘ಮುಂದೆ’(next) ಬಟನ್ ಒತ್ತಬೇಕು ಅಥವಾ ನೀವು ಸಿದ್ಧರಾಗಿದ್ದೀರೆಂದು ತಿಳಿಸಲು ಆ್ಯಪ್ ಜತೆಗೆ ಮಾತಾಡಬೇಕು. ಇದು ಬಹುತೇಕ ನೀವು ನಿಮ್ಮ ಅಡುಗೆ ಮನೆಯಲ್ಲಿ ನಿಮ್ಮೊಂದಿಗೆ ಒಬ್ಬ ಬಾಣಸಿಗನನ್ನು ಹೊಂದಿರುವಂತೆ ನೆರವಾಗುತ್ತದೆ.

ಸೈಡ್‌ಸೆಫ್ ಇತರ ಕೆಲವು ಅಡುಗೆ ಆ್ಯಪ್ ಗಳಂತೆ ಹಲವು ಪಾಕವಿಧಾನಗಳನ್ನು ಹೊಂದಿರಲಿಕ್ಕಿಲ್ಲ, ಆದರೆ ಇದು ಉಚಿತವಾಗಿದ್ದು ಐಒಎಸ್ ಹಾಗೂ ಆಂಡ್ರಾಯ್ಡ್‌ಗಳೆರಡರಲ್ಲೂ ಲಭ್ಯ.

ಹೆಚ್ಚಿನ ಸಾಂಪ್ರದಾಯಿಕ ವಿನ್ಯಾಸದ, ಒಂದು ಅಡುಗೆ ಆ್ಯಪ್‌ಗೆ ಆಲ್‌ ರೆಸಿಪೀಸ್ (Allrecipes) ಪ್ರಯತ್ನಿಸಿ. ಅಡುಗೆ ಪುಸ್ತಕದಂತೆ ಹೆಚ್ಚಾಗಿ ಭಾಸವಾಗುವ, ಒಂದು ಅಡುಗೆ ಆ್ಯಪ್ ಇದಾಗಿದೆ. ಇದು ಪಾಕವಿಧಾನಗಳನ್ನು ಹುಡುಕಬಲ್ಲ ಒಂದು ಅನುಕ್ರಮಣಿಕೆಯನ್ನು ಹೊಂದಿದೆ ಮತ್ತು ಪ್ರತಿಯೊಂದಕ್ಕೂ ಅಡುಗೆ ಮಾಡುವ ರೀತಿಯನ್ನು ಹೇಳುವ ಒಂದು ಸರಳ ಕ್ರಮವನ್ನು ಹೊಂದಿದೆ.

ನಿಮಗೆ ಇಷ್ಟವಾದ ಖಾದ್ಯದ ಪಾಕವಿಧಾನವನ್ನು ಹೆಸರು, ಅಥವಾ ಸಾಮಗ್ರಿ ಇಲ್ಲವೇ ಅಡುಗೆ ಮಾಡಲು ಬೇಕಿರುವ ಸಮಯದ ಮೂಲಕ ಹುಡುಕಬಹುದು. ಖಾದ್ಯ ತಯಾರಿಸುವಾಗ ಒಂದು ನಿರ್ದಿಷ್ಟವಾದ ಸಾಮಗ್ರಿ ಇಲ್ಲದಿದ್ದರೆ, ಯಾವುದಾದರೂ ಸಾಮಗ್ರಿ ಅಲರ್ಜಿ ಆಗಿದ್ದರೆ ಅದನ್ನು ಕೈಬಿಡಬಹುದು ಎಂದು ಆ್ಯಪ್‌ಗೆ ಕೇಳಬಹುದು.

ಈ ಆ್ಯಪ್‌ನಲ್ಲಿ ಪಾಕವಿಧಾನದ ಸೂಚನೆಗಳು ಸ್ಪಷ್ಟವಾಗಿದ್ದು ಅನುಸರಿಸಲು ಸುಲಭವಾಗಿವೆ. ಕೆಲವು ಖಾದ್ಯಗಳ ತಯಾರಿಕೆಯ ಹಂತ-ಹಂತವಾದ ವಿಡಿಯೊ ಚಿತ್ರಣವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT