ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ವೆಬ್‌ಸೈಟ್‌ಗೆ ಕನ್ನ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರ ಅಧಿಕೃತ ಅಂತರ್ಜಾಲ ತಾಣಕ್ಕೆ ಸೋಮ­ವಾರ ಕನ್ನ (ಹ್ಯಾಕ್‌) ಹಾಕಲಾ­ಗಿದ್ದು, ಪಾಕಿಸ್ತಾನದ ಪ್ರಜೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.

ಹ್ಯಾಕರ್‌ ತನ್ನನ್ನು ಮೊಹಮ್ಮದ್‌ ಬಿಲಾಲ್‌ ಎಂದು ಹೇಳಿಕೊಂಡಿದ್ದು, ‘ಪಾಕಿ­ಸ್ತಾನ ಜಿಂದಾಬಾದ್‌’ (ಪಾಕಿ­ಸ್ತಾನಕ್ಕೆ ಜಯವಾಗಲಿ), ‘ಮುಕ್ತ ಕಾಶ್ಮೀರ’ (ಫ್ರೀ ಕಾಶ್ಮೀರ) ಎಂದು ಅಂತರ್ಜಾಲ ತಾಣದಲ್ಲಿ ಬರೆದು­ಕೊಂಡಿ­ದ್ದಾನೆ. ಕಾಶ್ಮೀರದಲ್ಲಿ ಸೇನೆ ಆಡಳಿತ ಕೊನೆಗೊಳಿಸಬೇಕೆಂದೂ ಹೇಳಿದ್ದಾನೆ.

ಸ್ವತಂತ್ರ ಕಾಶ್ಮೀರವೇ ಮುಖ್ಯ ಉದ್ದೇಶ ಎಂದೂ ಪೋಸ್ಟ್‌ ಮಾಡಲಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಬಳಿ ಇಬ್ಬರು ಸಂಧಾ­ನ­ಕಾರರನ್ನು ಕಳುಹಿಸಿದ್ದರು ಎಂದು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್‌ ಅಲಿ ಷಾಹ ಗಿಲಾನಿ ಅವರು ಹೇಳಿಕೊಂಡ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಚುನಾವಣಾ ಪ್ರಚಾರಕ್ಕಾಗಿ ತಮಿಳು­ನಾಡು ಪ್ರವಾಸದಲ್ಲಿರುವ ಅಡ್ವಾಣಿ ಅವರಿಗೆ ಈ ವಿಷಯ ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT