ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಬೆಯ ಉಪಯೋಗ

Last Updated 14 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಅಣಬೆ ಸಸ್ಯಹಾರವೋ, ಮಾಂಸಹಾರವೋ ಎಂಬ ಬಗ್ಗೆ ಒಬ್ಬೊಬ್ಬರು ತಮ್ಮ ತಿಳಿವಳಿಕೆಗೆ ಅನುಗುಣವಾಗಿ ಒಂದೊಂದು ತೆರನಾಗಿ ಮಾತನಾಡುತ್ತಾರೆ.
ತಿನ್ನಲು ಯೋಗ್ಯವಾಗಿರುವ ಅಣಬೆ ಪ್ರಭೇದಗಳಲ್ಲಿ 100 ಪ್ರಬೇಧಗಳನ್ನು ಪ್ರಾಯೋಗಿಕವಾಗಿ, 50 ಪ್ರಭೇದಗಳನ್ನು ಖರ್ಚು ವೆಚ್ಚವಿಲ್ಲದೆ, 30 ಪ್ರಭೇದಗಳನ್ನು ವಾಣಿಜ್ಯೋದ್ಯಮ ಉದ್ದೇಶದಿಂದ ಮತ್ತು ಕೇವಲ 6 ಪ್ರಭೇದಗಳನ್ನು ಮಾತ್ರ ಹಲವಾರು ದೇಶಗಳಲ್ಲಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗಾಗಿ ಬೆಳೆಯಲಾಗುತ್ತದೆ.

ಬಟನ್, ಓಯಿಸ್ಟರ್, ಮಿಲ್ಕಿ, ಸೀಟೆಕ್, ಪ್ಯಾಡಿ ಸ್ಟ್ರೇವ್, ಜ್ವೆಸ್ ಇಯರ್, ಸಿಲ್ವರ್ ಇಯರ್, ಮೈಟೆಕ್, ಟರ್ಕಿ ಟೈಲ್, ರೀಶಿ ಇವು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ಪ್ರಮುಖ ಅಣಬೆ ಪ್ರಭೇದಗಳು.

ಇನ್ನೂ 1800 ಅಣಬೆ ಪ್ರಭೇದಗಳು ಔಷಧಿಯ ಗುಣ ಹೊಂದಿವೆ. ಒಟ್ಟು ಸಂಖ್ಯೆಯ ಅಣಬೆ ಪ್ರಭೇದಗಳನ್ನು ಗಣನೆಗೆ ತೆಗೆದುಕೊಂಡರೆ ವಿಷಕಾರಿ ಅಣಬೆ ಪ್ರಭೇದಗಳ ಸಂಖ್ಯೆ ತುಂಬಾ ಕಡಿಮೆ. ಒಟ್ಟು ಪ್ರಮಾಣದ ಶೇಕಡಾ 10 ರಷ್ಟು ಮಾತ್ರ.  ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕ. ಇದರಿಂದ ಹಲವಾರು ಪ್ರಯೋಜನಗಳು ಇರುವ ಕಾರಣ ಆಯುರ್ವೇದದಲ್ಲಿಯೂ ಇದಕ್ಕೆ ತನ್ನದೇ ಆದ ವಿಶೇಷತೆ ಇದೆ.

ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಬನ್ನಿ
*ಅಣಬೆಯು ಕಡಿಮೆ ಶರ್ಕರ ಪಿಷ್ಟ, ಕಡಿಮೆ ಕೊಬ್ಬಿನ ಅಂಶ, ಹೆಚ್ಚು ಪ್ರೊಟೀನ್, ವಿಟಮಿನ್ ಬಿ-1, ಬಿ-2 , ಕಬ್ಬಿಣಾಂಶ, ಪೊಟ್ಯಾಶಿಯಂ,  ಸೋಡಿಯಂ ಹಾಗೂ ಅಮೈನೋ ಆಮ್ಲಗಳು, ಆ್ಯಂಟಿಬಯೋಟಿಕ್ ಕಿಣ್ವಗಳು, ಆ್ಯಂಟಿ ಆಕ್ಸಿಡೆಂಟ್‌ಗಳ ಜತೆಗೆ ಶೇಕಡಾ 80-90 ನೀರಿನಂಶ, ಶೇಕಡಾ 8-10ರಷ್ಟು ನಾರಿನಂಶ ಹೊಂದಿದೆ. ಒಣಗಿದ ಅಣಬೆಯಲ್ಲಿ ವಿಶೇಷವಾಗಿ ವಿಟಾಮಿನ್ ಬಿ1,ಬಿ2, ಬಿ5, ಬಿ6, ಮತ್ತು ಬಿ7 ಅಂಶ ಹೆಚ್ಚಾಗಿ ಇರುತ್ತದೆ.
*ಅಣಬೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇದೆ. ಆದ್ದರಿಂದ ಇದನ್ನು ಸೇವಿಸುತ್ತಾ ಇದ್ದರೆ ಆರೋಗ್ಯದಲ್ಲಿ ಉಂಟಾಗುವ ಚಿಕ್ಕಪುಟ್ಟ ಸಮಸ್ಯೆಗಳಿಂದ ದೂರ ಇರಬಹುದು.
* ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದೆ. ಪ್ರೋಸ್ಟೇಟ್ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಅಪಾಯದಿ೦ದ ತಪ್ಪಿಸಿಕೊಳ್ಳಲು ಮಹಿಳೆಯರು ಇದನ್ನು ಸೇವಿಸಿದರೆ ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ.

* ಕೆಲವರಿಗೆ ಮೇಲಿಂದ ಮೇಲೆ ಜ್ವರ, ಶೀತ, ನೆಗಡಿಯಂತಹ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿರುವುದು. ಆದ್ದರಿಂದ ಇಂಥ ಸಮಸ್ಯೆಗಳಿಂದ ಬಳಲುತ್ತಿರುವರಿಗೆ ಅಣಬೆ ರಾಮಬಾಣದಂತೆ ಕೆಲಸ ಮಾಡುತ್ತದೆ.

* ಸೂರ್ಯನ ಬಿಸಿಲಿಗೆ ಒಡ್ಡಿದರೆ ಮಶ್ರೂಮ್ ವಿಟಮಿನ್ ಡಿ ಯನ್ನು ಉತ್ಪಾದಿಸುತ್ತದೆ. ಹಾಗಾಗಿ ಒಣ ಮಶ್ರೂಮ್ ತಿನ್ನುವುದರಿ೦ದ ನಿಮ್ಮ ದೇಹ ವಿಟಮಿನ್ ಡಿ2 ಮತ್ತು ಡಿ3 ಯನ್ನು ಪಡೆಯುತ್ತದೆ.

* ಮಧುಮೇಹಿಗಳಿಗೆ ಅಣಬೆ ಉತ್ತಮ ಆಹಾರ. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇಲ್ಲ.  ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಮತ್ತು ಎಂಜೈಮುಗಳು ಸೇವಿಸಿದ ಆಹಾರದಲ್ಲಿನ ಸಕ್ಕರೆ ಮತ್ತು ಸ್ಟಾರ್ಚ್ ಅಂಶವನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಅಣಬೆಯಲ್ಲಿ ಕಾರ್ಬೋಹೈಡ್ರೇಟ್ಸ್ ಮಟ್ಟವು ತುಂಬಾ ಕಡಿಮೆಯಾಗಿರುವ ಕಾರಣ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧ್ಯಯನಗಳ ಪ್ರಕಾರ ಅಣಬೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

* ಅಣಬೆಯಲ್ಲಿ ಮಿಟಮಿನ್‌ ಡಿ ಅಂಶ ಹೇರಳವಾಗಿದೆ. ವಿಟಮಿನ್‌ ಡಿ ನಮ್ಮ ದೇಹದ ಎಲುಬಿಗೆ ಅವಶ್ಯ ಇರುವ ಪ್ರೊಟೋನ್‌ನಲ್ಲಿ ಒದಗಿಸುತ್ತದೆ. ಇದಕ್ಕೆ ಕಾರಣ, ಅಣಬೆಗಳು ಸೂರ್ಯನ ಬೆಳಕಿನಿಂದ ನೈಸರ್ಗಿಕವಾಗಿ ವಿಟಮಿನ್ ‘ಡಿ’ ಯನ್ನು ಪಡೆಯುತ್ತದೆ. ದೇಹಕ್ಕೆ ಒಂದು ದಿನಕ್ಕೆ ಬೇಕಾಗಿರುವ ಶೇ.20ರಷ್ಟು ವಿಟಮಿನ್ ಡಿ ಅಣಬೆಯಲ್ಲಿದೆ.

* ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನೆಲ್ಲಾ ಸರ್ಕಸ್‌ ಮಾಡುವವರು ಹಲವರು. ಅಂಥವರಿಗೆ ವರದಾನ ಅಣಬೆ. ಇದರಲ್ಲಿ ಮೊದಲೇ ಹೇಳಿದಂತೆ  ಕೊಲೆಸ್ಟ್ರಾಲ್ ಅಂಶ ಇಲ್ಲ. ಇದು ಕೊಬ್ಬು ರಹಿತವಾಗಿರುವುದರಿಂದ ಇದು ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಅಣಬೆಯು ಹಸಿವಿಗೆ ತೃಪ್ತಿಯಾಗುವಂತೆ ಮಾಡಿ ಕಡಿಮೆ ತಿನ್ನುವಂತೆ ಮಾಡುತ್ತದೆ.

* ನಾವು ತಿನ್ನುವ ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ಅತ್ಯಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇದೆ. ಆದ್ದರಿಂದ ಇದರ ಸೇವನೆಯಿಂದ ಆರೋಗ್ಯದಾಯಕ ಕಾಯ ಹೊಂದಬಹುದು.

* ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ವಿಟಮಿನ್‌ ಡಿ ಅತ್ಯವಶ್ಯಕ. ಇದನ್ನು ಅಣಬೆ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT