ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣನ ಮಗಳ ಮೇಲೆ ಅತ್ಯಾಚಾರ: ಬಂಧನ

Last Updated 21 ಆಗಸ್ಟ್ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆರ್‌.ಟಿ.ನಗರ ಸಮೀಪದ  ಚಾಮುಂಡಿನಗರದಲ್ಲಿ ಹನ್ನೆ­ರೆಡು ವರ್ಷದ ಬಾಲಕಿ ಮೇಲೆ ಆಕೆಯ ಚಿಕ್ಕಪ್ಪ ಅತ್ಯಾಚಾರ ಎಸಗಿ­ರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮುಂಡಿನಗರ ನಿವಾಸಿ, ಆರೋಪಿ ಅಮ್ಜ­­ದ್‌ನನ್ನು (32) ಪೊಲೀಸರು ಗುರು­­­ವಾರ ಬಂಧಿಸಿ­ದ್ದಾರೆ. ಬಡಗಿ­ಯಾದ ಅಮ್ಜದ್‌ನ ಅಣ್ಣ, ಅತ್ತಿಗೆ 4 ವರ್ಷ­­ಗಳ ಹಿಂದೆ ಸಾವನ್ನ­ಪ್ಪಿ­­ದ್ದರು. ಅಣ್ಣನ ಮಗಳನ್ನು ಈತನೇ ಸಾಕುತ್ತಿದ್ದ. ಅಮ್ಜದ್‌ನ ಪತ್ನಿ ಶನಿವಾರ (ಆ.16) ತವರು ಮನೆಗೆ ಹೋಗಿದ್ದರು. ಆಗ ಆರೋಪಿ ಕೃತ್ಯ ಎಸಗಿದ್ದಾನೆ. ಮನೆಯ­ಲ್ಲಿದ್ದ ಬಾಲಕಿ ಜ್ವರದಿಂದ ಬಳ­­ಲು­ತ್ತಿದ್ದಳು. ಬಾಲಕಿಗೆ ಔಷಧ ಕೊಟ್ಟಿ­ರುವ ಆತ ಆಕೆ ಮಲಗಿದ ಮೇಲೆ ಅತ್ಯಾ­ಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಿದ್ದೆಯಿಂದ ಎಚ್ಚರಗೊಂಡ  ಬಾಲ­ಕಿ ಮೇಲೆ ಬಟ್ಟೆಗಳು ಅಸ್ತವ್ಯಸ್ತ­ವಾ­ಗಿ­ದ್ದವು. ಈ ವಿಷಯವನ್ನು ಆಕೆ ತನ್ನ ಅಜ್ಜಿಗೆ ತಿಳಿಸಿ­ದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯ ಸಂಬಂಧಿ­­ಕರು ನೀಡಿರುವ ದೂರು ಆಧ­ರಿಸಿ ಅಮ್ಜದ್‌­ನನ್ನು ಬಂಧಿಸ­ಲಾ­­­ಗಿದೆ ಎಂದು
ಪೊಲೀ­ಸರು ಹೇಳಿದ್ದಾರೆ.

ಆರೋಪಿ ವಿರುದ್ಧ ಲೈಂಗಿಕ ಅಪ­ರಾ­ಧ­ಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ­ಯಡಿ (ಪೋಕ್ಸೊ) ಪ್ರಕರಣ ದಾಖಲಿ­ಸಿ­ಕೊ­ಳ್ಳಲಾಗಿದೆ ಎಂದು ಆರ್‌.ಟಿ.ನಗರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT