ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ

Last Updated 1 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸರ್ಕಾರಿ ಅನುದಾನದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರು ಕೋಣೆಗಳನ್ನು ಮುದ್ದೇಬಿಹಾಳ ಪಟ್ಟಣದ ಹೊರ ವಲಯದಲ್ಲಿ ಕಟ್ಟಲಾಯಿತು. ಮೂತ್ರಾಲಯ, ಶೌಚಾಲಯ, ಅಡುಗೆ ಕೋಣೆಗಳೂ ನಿರ್ಮಾಣವಾದವು.

ಇನ್ಫೊಸಿಸ್ ಸಂಸ್ಥೆಯವರು ಉಚಿತವಾಗಿ 3 ಹೊಸ ಕಂಪ್ಯೂಟರ್‌ಗಳನ್ನು ನೀಡಿದ್ದಾರೆ. ಇವುಗಳನ್ನು ಉಪಯೋಗಿಸಲಾಗದೆ, ಮುಖ್ಯ ಅಧ್ಯಾಪಕರು ಅವುಗಳನ್ನು ತಮ್ಮ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದಾರೆ. ಯಾಕೆಂದರೆ, ಶಾಲೆಗೆ ವಿದ್ಯುತ್‌ ಸಂಪರ್ಕವಿಲ್ಲ ಹಾಗೂ ರಾತ್ರಿಯ ಹೊತ್ತು ಕಳ್ಳರು ಕೀಲಿ ಮುರಿದು ಕದಿಯುವ ಹೆದರಿಕೆ ಇದೆ.

ಚಾಲಯಗಳಿವೆ, ನೀರಿನ ಪೂರೈಕೆ ಇಲ್ಲ. ಇವುಗಳನ್ನು ಬಳಸುವಂತಿಲ್ಲ! ಬಿಸಿಯೂಟ ತಯಾರಿಸುವ ಕೋಣೆಯಲ್ಲಿ ರಾತ್ರಿ ಗ್ಯಾಸ್‌ ಸಿಲಿಂಡರು ಇಡುವಂತಿಲ್ಲ. ಸಂಜೆಯಾಗುತ್ತಿದ್ದಂತೆ, ಸಿಲಿಂಡರನ್ನು ಒಯ್ದು ಹತ್ತಿರದ ಸಂಸಾರಸ್ಥರ ಮನೆಯಲ್ಲಿಡಬೇಕು. ಮರುದಿನ ಮತ್ತೆ ತರಬೇಕು. ಶಾಲೆ ಇದೆ. ಇಲ್ಲಿ ಯಾವುದಕ್ಕೂ ರಕ್ಷಣೆ ಇಲ್ಲ. ಸರ್ಕಾರಿ ಶಾಲೆಗಳ ಅತಂತ್ರ ಸ್ಥಿತಿ ಹೇಳತೀರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT