ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಮಳೆ: ಈರುಳ್ಳಿ ಬೆಳೆಗೆ ಸಂಚಕಾರ

Last Updated 19 ಸೆಪ್ಟೆಂಬರ್ 2014, 7:11 IST
ಅಕ್ಷರ ಗಾತ್ರ

ಗಜೇಂದ್ರಗಡ: ಮಳೆಯ ಅನಿಶ್ವಿತತೆ ಮಧ್ಯೆಯೂ ಕೃಷಿಕ ಸಮೂಹದ ಅದೃಷ್ಟದ ಬೆಳೆ ಎಂದೇ ಪರಿಗಣಿಸಲ್ಪಟ್ಟಿ ರುವ ‘ಈರುಳ್ಳಿ’ ಬಿತ್ತನೆಗೆ ಮುಂದಾಗಿ ತೇವಾಂಶದ ಕೊರತೆಯ ಮಧ್ಯೆಯೂ ಅದೃಷ್ಟ ಪರೀಕ್ಷೆಗೆ ಇಳಿದ್ದ ಈರುಳ್ಳಿ ಬೆಳೆಗಾರ ಸಮೂಹಕ್ಕೆ ಇದೀಗ ಅತಿಯಾದ ತೇವಾಂಶ ಮರ್ಮಾಘಾತ ನೀಡಿದೆ.

ಕೃಷಿ ಇಲಾಖೆ ಪ್ರಕಾರ ಪ್ರಸಕ್ತ ವರ್ಷ ತಾಲ್ಲೂ ಕಿನಲ್ಲಿ 692 ಮಿ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಜೂನ್‌ ತಿಂಗಳಲ್ಲಿ 132 ಮಿ.ಮೀ ಮಳೆ ಸುರಿದರೆ, ಜುಲೈ ತಿಂಗಳಲ್ಲಿ 169.10 ಮಿ.ಮೀ ಮಳೆ ಸುರಿದಿದೆ. ಆಗಸ್ಟ್‌್ ತಿಂಗಳಲ್ಲಿ 98 ಮಿಲಿ ಮೀಟರ್‌ ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು.

ಆದರೆ, ನಿರಂತರ ಬೆಂಬಿಡದೆ ಸುರಿದ ಮಳೆಯಿಂದಾಗಿ 195 ಮಿಲಿ ಮೀಟರ್‌ ಸುರಿದಿದೆ. ಅಲ್ಲದೆ, ಸೆಪ್ಟಂಬರ್‌ ತಿಂಗಳಲ್ಲಿಯೂ ಮೋಡ ಕವಿದ ವಾತಾವರಣ ಹಾಗೂ ನಿರಂತರ ಮಳೆ ಮುಂದುವರಿದ ಪರಿಣಾಮ ಈರುಳ್ಳಿಗೆ ಅಗತ್ಯಕ್ಕಿಂತ ಹತ್ತು ಪಟ್ಟು ತೇವಾಂಶ ಹೆಚ್ಚಿದೆ. ಈರುಳ್ಳಿ ಗಡ್ಡಿ ಕೊಳೆಯುತ್ತಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಸಿದ್ಧೇಶ ಕೋಡಳ್ಳಿ.

ಈರುಳ್ಳಿ 120 ದಿನಗಳ ಬೆಳೆ. ಎಕರೆ ಈರುಳ್ಳಿ ಬಿತ್ತಲು ಬೀಜ, ಗೊಬ್ಬರ, ಗಳೆ ಸೇರಿ ರೂ. 6 ರಿಂದ 7 ಸಾವಿರ ಖರ್ಚಾ ಗುತ್ತದೆ. ಬಿತ್ತನೆ ಮಾಡಿದ 25 ದಿನಕ್ಕೆ ಬೆಳೆಯಲ್ಲಿನ ಕಳೆ (ಕಸ) ನಿರ್ವಹಣೆ ಕಾರ್ಯವನ್ನು ಆರಂಭಿಸಬೇಕು. ಈರುಳ್ಳಿ ಫಸಲು ಕೈಸೇರೋ ವರೆಗೂ ಕನಿಷ್ಠ ನಾಲ್ಕು ಬಾರಿ ಕಳೆ ನಿರ್ವಹಣೆಗೆ ಮುಂದಾಗಬೇಕು. ಕಳೆ ನಿರ್ವಹಣೆಗೆ ಕನಿಷ್ಠ ರೂ. 8 ರಿಂದ 10 ಸಾವಿರ ವೆಚ್ಚ ವಾಗುತ್ತದೆ. ನಿರಂತರ ಮಳೆಯಿಂದ ಬೆಳೆ ಕೊಳೆ ರೋಗಕ್ಕೆ ಸಿಲುಕಿರುವುದು ಒಂದೆಡೆಯಾದರೆ, ನಿರಂತರ ಮಳೆ ಯಿಂದ ಬೆಳೆಯನ್ನು ಕಸ ಆವರಿಸಿ ಕೊಂಡಿದೆ. ಇದರಿಂದಾಗಿ ಬೆಳೆಯಿಂದ ಲಾಭವಿರಲಿ, ಬೆಳೆಗೆ ಮಾಡಿದ ಖರ್ಚೂ ಕೈಸೇರದಂತಾಗಿದೆ ಎನ್ನುತ್ತಾರೆ ಬೆಳೆಗಾರರಾದ ಮಹಾಂತೇಶ ಬೊಮ್ಮನಕಟ್ಟಿ. ಗವಿಸಿದ್ದ ಅರಸಿನಾಳ.

ಕ್ಷೀಣಿಸದ ಈರುಳ್ಳಿ ಕ್ಷೇತ್ರ: ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ 2011ರಲ್ಲಿ 58, 486 ಹೆಕ್ಟೇರ್‌ ಬಿತ್ತನೆ ಗುರಿ ಹೊಂದ ಲಾಗಿತ್ತು. ಆದರೆ, 52,268 ಹೆಕ್ಟೇರ್‌ ಬಿತ್ತನೆಯಾಗಿತ್ತು. 2012 ರಲ್ಲಿ 56,846 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 46,684 ಹೆಕ್ಟೇರ್‌ ಬಿತ್ತನೆಯಾಗಿತ್ತು. 2013 ರಲ್ಲಿ 44,246 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 33,524 ಹೆಕ್ಟೇರ್‌ ಬಿತ್ತನೆಯಾಗಿತ್ತು. ಪ್ರಸಕ್ತ ವರ್ಷ 40,486 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ,38,284 ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್‌.ಎ.ಸೂಡಿಶೆಟ್ಟರ್‌ ‘ಪ್ರಜಾವಾಣಿ’ಗೆ ಮಾಃಇತಿ ನೀಡಿದರು.

ಈ ಹಿಂದಿನ ಮೂರು ವರ್ಷಗಳಲ್ಲಿನ ಮಳೆಯ ಅನಿಶ್ಚಿತತೆಯಿಂದ ಈರುಳ್ಳಿ ಬಿತ್ತನೆ ಕ್ಷೀಣಿಸಿತ್ತು.
ಆದರೆ, ಇದೀಗ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಈರುಳ್ಳಿಯಿಂದ ಇನ್ಮುಂದೆ ಈರುಳ್ಳಿ ಸಹವಾಸವೇ ಬೇಡ ಎನ್ನುವಂತಾಗಿದೆ ಎನ್ನುತ್ತಾರೆ ಬೆಳೆಗಾರರಾದ ಭೀಮಪ್ಪ ತಳವಾರ. ಈರಪ್ಪ ಯರಗೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT