ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ– ಪರಿಹಾರ ಏಕಗವಾಕ್ಷಿ ಪದ್ಧತಿ ಜಾರಿಗೆ ನಿರ್ದೇಶನ

Last Updated 19 ಸೆಪ್ಟೆಂಬರ್ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು:‘ಅತ್ಯಾಚಾರಕ್ಕೆ ಒಳಾಗದ ಮಹಿಳೆಯರು ಮತ್ತು ಮಕ್ಕಳಿಗೆ ಸರ್ಕಾರದ ವತಿಯಿಂದ ನೀಡುವ ಪರಿಹಾರವನ್ನು ಏಕಗವಾಕ್ಷಿ ಮೂಲಕ ವಿತರಿಸಲು ಸೂಕ್ತ ಮಾರ್ಗೋಪಾಯ-ಗಳನ್ನು ಹುಡುಕಿ’ ಎಂದು ಹೈಕೋರ್ಟ್‌ ನಿರ್ದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.-ವಘೇಲಾ ಹಾಗೂ ಅಶೋಕ ಬಿ.ಹಿಂಚಿ-ಗೇರಿ ಅವರಿದ್ದ ಪೀಠವು ಶುಕ್ರವಾರ ಈ ಕುರಿತು ಅರ್ಜಿದಾರರಿಗೆ ಸೂಚಿಸಿತು.

‘ರಾಜ್ಯ ಸರ್ಕಾರ ಈ ದಿಸೆಯಲ್ಲಿ ಅರ್ಜಿದಾರರ ಜೊತೆ ಸಹಕರಿಸಬೇಕು’ ಎಂದೂ ಪೀಠವು ಸರ್ಕಾರಿ ವಕೀಲರಿಗೆ ನಿರ್ದೇಶಿಸಿತು.
ಇದೇ ವೇಳೆ ಅರ್ಜಿದಾರರು, ‘ಶೀಘ್ರ ಪರಿಹಾರ ವಿತರಣೆಗಾಗಿ ಕಾನೂನು ಸೇವಾ ಪ್ರಾಧಿಕಾರವನ್ನು ನೋಡಲ್‌ ಸಂಸ್ಥೆಯಾಗಿ ನೇಮಿಸಬೇಕು’ ಎಂದು ಪೀಠಕ್ಕೆ ಮನವಿ ಮಾಡಿದರು.

‘ಅತ್ಯಾಚಾರಕ್ಕೆ ಒಳಗಾದ ಮಹಿಳೆ-ಯರು ಮತ್ತು ಮಕ್ಕಳಿಗೆ ನೀಡುವ ಸರ್ಕಾರದ ಪರಿಹಾರಗಳು ವಿವಿಧ ಇಲಾಖೆಗಳಲ್ಲಿ ಹಂಚಿ ಹೋಗಿವೆ. ಇವುಗಳನ್ನು ಏಕಗವಾಕ್ಷಿ ಮೂಲಕ ನೀಡುವ ವ್ಯವಸ್ಥೆಯಾಗಬೇಕು’ ಎಂದು ಅನು ಚೆಂಗಪ್ಪ ಸೇರಿದಂತೆ 50 ಮಹಿಳಾ ವಕೀಲರು  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

‘ಬೇಡಿಕೆಗೆ ತಕ್ಕಂತೆ ಔಷಧ ಪೂರೈಕೆ’
‘ಔಷಧಗಳನ್ನು ಇ–ಸಂಗ್ರಹ (ಇ ಪ್ರೊಕ್ಯೂರ್‌ಮಂಟ್‌) ಮೂಲಕವೇ ವಿತರಿಸಲಾಗುತ್ತಿದ್ದು ಎಲ್ಲೂ ಅಸಮರ್ಪಕ ಸಂಗ್ರಹ ಮಾಡಿಲ್ಲ ಹಾಗೂ ಆಸ್ಪತ್ರೆಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ’ ಎಂದು ಸರ್ಕಾರವು ಹೈಕೋರ್ಟಿಗೆ ತಿಳಿಸಿದೆ.

ಔಷಧ ನಿಯಂತ್ರಣ ಅಧಿಕಾರಿಗಳು 2013ರ ಫೆಬ್ರುವರಿ 16ಂದು ರಾಜ್ಯದ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಅಲ್ಲಿ ಔಷಧ ಸಂಗ್ರಹದ ಕೊರತೆ ಕಂಡು ಬಂದಿತ್ತು. ಈ ಕುರಿತ ಪತ್ರಿಕಾ ವರದಿ ಆಧರಿಸಿ ಹೈಕೋರ್ಟ್‌ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

ಈ ಅರ್ಜಿಯನ್ನು ಮುಖ್ಯ ನ್ಯಾಯ-ಮೂರ್ತಿ ಡಿ.ಎಚ್‌.ವಘೇಲಾ ಹಾಗೂ ಅಶೋಕ ಬಿ.ಹಿಂಚಿಗೇರಿ ಅವರಿದ್ದ ವಿಭಾ-ಗೀಯ ನ್ಯಾಯಪೀಠವು ವಿಲೇವಾರಿ ಮಾಡಿತು. ಈ ಸಂದರ್ಭದಲ್ಲಿ ಕರ್ನಾ-ಟಕ ಔಷಧ ಉಗ್ರಾಣ ಸೊಸೈಟಿಯು  ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿ-ಸುವ ಮೂಲಕ ‘ಭವಿಷ್ಯದಲ್ಲಿ ಎಲ್ಲೂ ಔಷಧ ಕೊರತೆ ಮರುಕಳಿಸ-ದಂತೆ ನೋಡಿಕೊಳ್ಳುವುದಾಗಿ ’ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT