ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ತೆಕ್ಕೆಗೆ ಯುಪಿಸಿಎಲ್‌ ಘಟಕ

ಖರೀದಿ ಒಪ್ಪಂದಕ್ಕೆ ಸ್ಪರ್ಧಾತ್ಮಕ ಆಯೋಗ ಒಪ್ಪಿಗೆ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):   ಉಡುಪಿ ಬಳಿ ಲ್ಯಾಂಕೊ ಇನ್ಫ್ರಾಟೆಕ್ ಕಂಪೆನಿ ಸ್ಥಾಪಿಸಿದ್ದ  1,200 ಮೆಗಾವಾಟ್‌ ಶಾಖೋತ್ಪನ್ನ ವಿದ್ಯುತ್‌ ಘಟಕ ಅದಾನಿ ಪವರ್‍ಸ್‌ ಸಂಸ್ಥೆಯ ತೆಕ್ಕೆಗೆ ಸೇರಿದೆ.

ಲ್ಯಾಂಕೊ ಇನ್ಫ್ರಾಟೆಕ್ ಕಂಪೆನಿ­ಯಿಂದ ಆರು ಸಾವಿರ ಕೋಟಿ ರೂಪಾಯಿಗೆ ಅದಾನಿ ಪವರ್‍ಸ್‌ ಈ ವಿದ್ಯುತ್‌ ಘಟಕವನ್ನು ಖರೀದಿಸಿದ್ದು, ಈ  ಒಪ್ಪಂದಕ್ಕೆ  ಭಾರತೀಯ ಸ್ಮರ್ಧಾತ್ಮಕ ಆಯೋಗ ಒಪ್ಪಿಗೆ ನೀಡಿದೆ. ಉಡುಪಿ ಶಾಖೋತ್ಪನ್ನ ವಿದ್ಯುತ್‌ ಘಟಕದ ವ್ಯವಹಾರಕ್ಕೆ ಸಂಬಂಧಿಸಿದಂತೆ   ಯಾವುದೇ ಆಕ್ಷೇಪಣೆ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಇದೇ ಆಗಸ್ಟ್‌ನಲ್ಲಿ ಅದಾನಿ ಪವರ್‍್ಸ್‌ ಮತ್ತು ಲ್ಯಾಂಕೊ ಇನ್ಫ್ರಾಟೆಕ್ ನಡುವೆ ಈ ಕುರಿತು ಒಪ್ಪಂದವಾಗಿತ್ತು. ಈ  ಒಪ್ಪಂದ ದೇಶದ ವಿದ್ಯುತ್ ಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡ ಮೊತ್ತದ ವಹಿವಾಟು ಎಂದು ದಾಖಲಾಗಿದೆ.

ಅದಾನಿ ಪವರ್‍್ಸ್‌ ಕಂಪೆನಿ, ಉಡುಪಿ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌­ನಲ್ಲಿ ಲ್ಯಾಂಕೊ ಇನ್ಫ್ರಾಟೆಕ್‌ ಹೂಡಿಕೆ ಮಾಡಿರುವ ಷೇರುಗಳ ಜತೆ, ಇನ್ನಿತರ ಚಿಕ್ಕಪುಟ್ಟ ಸಂಸ್ಥೆಗಳು ಹೂಡಿರುವ ಷೇರುಗಳನ್ನು ಸಹ ಖರೀದಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT