ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿತಿ ಆರ್ಯ ಭಾರತ ಸುಂದರಿ

Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರತಿಷ್ಠಿತ 2015ರ ಎಫ್‌ಬಿಬಿ ಫೆಮಿನಾ ಭಾರತ ಸುಂದರಿ ಆಗಿ ದೆಹಲಿ ಮೂಲದ ಯುವತಿ ಆದಿತಿ ಆರ್ಯ ಅವರು ಆಯ್ಕೆಯಾಗಿದ್ದಾರೆ.

ಮುಂಬೈನ ಯಶ್‌ರಾಜ್‌ ಸ್ಟುಡಿಯೊದಲ್ಲಿ ನಡೆದ ಸಮಾರಂಭದಲ್ಲಿ ಆದಿತಿ ಅವರಿಗೆ ಫೆಮಿನಾ ಭಾರತ ಸುಂದರಿ ಕಿರೀಟವನ್ನು ಪ್ರದಾನ ಮಾಡಲಾಯಿತು.

ಭಾನುವಾರ ರಾತ್ರಿ ನಡೆದ 52ನೇ ವರ್ಷದ ಎಫ್‌ಬಿಬಿ ಫೆಮಿನಾ ಮಿಸ್‌ ಇಂಡಿಯಾ ಸಮಾರಂಭದಲ್ಲಿ ಅಲ್ಫ್ರೀನ್‌ ರಾಚೆಲ್‌ ಅವರು ಮೊದಲ ರನ್ನರ್‌ ಅಪ್‌  ಹಾಗೂ ವಾರ್ತಿಕಾ ಸಿಂಗ್‌ ಎರಡನೇ ರನ್ನರ್‌ ಅಪ್‌ ಆಗಿ ಆಯ್ಕೆಯಾದರು.

ಆದಿತಿ ಅವರು ವಿಶ್ವಸುಂದರಿ ಸ್ಪರ್ಧೆ ಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ದ್ದರು. ಅಲ್ಲದೇ ಅಲ್ಫ್ರೀನ್‌ ಹಾಗೂ ವಾರ್ತಿಕಾ ಅನೇಕ ಅಂತರರಾಷ್ಟ್ರೀಯ ಮಟ್ಟದ ವಿಶ್ವಸುಂದರಿ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ಸ್ಪರ್ಧೆಗೆ ಸಿನಿಮಾ ಜಗತ್ತಿನ ದಿಗ್ಗಜರಾದ ಜಾನ್‌ ಅಬ್ರಹಾಂ, ಮನೀಷಾ ಕೊಯಿರಾಲ, ಸೋನು ನಿಗಮ್‌, ಅನಿಲ್‌ ಕಪೂರ್‌, ಶಿಲ್ಪಾ ಶೆಟ್ಟಿ, ಸೋನಾಲಿ ಬೇಂದ್ರೆ,  ಚಿತ್ರಾಂಗದಾ ಸಿಂಗ್‌ ಮತ್ತಿತರರು ತೀರ್ಪುಗಾರರಾಗಿದ್ದರು.

‘ಬಾಹ್ಯ ನೋಟದಿಂದ ಮಾತ್ರ ನಾವು ತೀರ್ಪು ನೀಡುವುದು ಅಸಾಧ್ಯ. ಸೌಂದರ್ಯದ ಜತೆ ಅವರ ನಡೆನುಡಿಯೂ ಅಷ್ಟೇ ಮುಖ್ಯ.  ಯಾಕೆಂದರೆ ಇಂದಿನ ಮಿಸ್‌ ಇಂಡಿಯಾ ನಾಳೆ ಅಂತರರಾಷ್ಟ್ರೀಯ ಮಟ್ಟದ ಮಿಸ್‌ವಲ್ಡ್‌ ಸ್ಪರ್ಧೆಯನ್ನು ಪ್ರತಿನಿಧಿಸುತ್ತಾರೆ’ ಎಂದು ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆಯ ತೀರ್ಪುಗಾರರಾಗಿದ್ದ ಜಾನ್‌ ಅಬ್ರಹಾಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT