ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದ ಎಟಿಆರ್‌ ಮಂಡನೆ

ಇಂದು ಬಿಬಿಎಂಪಿ ಕೌನ್ಸಿಲ್‌ ಸಭೆ: ಹೊಸ ಸಂಪ್ರದಾಯಕ್ಕೆ ನಾಂದಿ
Last Updated 25 ನವೆಂಬರ್ 2014, 20:08 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೌನ್ಸಿಲ್‌ ಸಭೆ ಬುಧವಾರ ನಡೆಯ­ಲಿದ್ದು, ಹಿಂದಿನ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಕೈಗೊಂಡ ನಿರ್ಣಯ­ಗಳ ಕುರಿತಂತೆ ಸಂಬಂಧಪಟ್ಟ ಅಧಿಕಾ­ರಿಗಳು ಕಾರ್ಯ ಪಾಲನಾ ವರದಿ­ಯನ್ನು (ಎಟಿಆರ್‌) ಮಂಡಿಸುವ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾಗಲಿದೆ.

ಕಾರ್ಯ ಜರುಗಿಸಿದ ವರದಿ ಮಂಡಿ­ಸಲು ಎಲ್ಲ ಅಧಿಕಾರಿಗಳು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಕೌನ್ಸಿಲ್‌ ಸಭೆಯಲ್ಲಿ ನೀಡಬೇಕಾದ ಉತ್ತರಗಳಿಗೆ ಸಂಬಂಧಿಸಿದಂತೆ ಅಧಿಕಾರಿ­ಗಳ ಸಭೆಯನ್ನೂ ನಡೆಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರು ಈಗಾಗಲೇ ಕಳೆದ ತಿಂಗಳ ಸಭೆಯ ನಡಾವಳಿಯನ್ನು ತರಿಸಿಕೊಂಡಿದ್ದಾರೆ. ಚರ್ಚೆಯಾದ ವಿಷಯ­­ಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿ­ದ್ದಾರೆ ಎಂದು ಆ ಮೂಲಗಳು ಸ್ಪಷ್ಟಪಡಿಸಿವೆ.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ­ರಾಗಿ ಕಳೆದ ತಿಂಗಳು ಅಧಿಕಾರ ಸ್ವೀಕರಿ­ಸಿದ ಎನ್‌.ಆರ್‌.ರಮೇಶ್‌, ‘ಪ್ರತಿ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರು ನಿರ್ಣಯ ಕೈಗೊಳ್ಳುತ್ತಾರೆ. ಆದರೆ, ಅಧಿ­ಕಾ­ರಿಗಳು ಅದನ್ನು ಇಲ್ಲಿಯೇ ಮರೆತು ಹೋಗು­ತ್ತಾರೆ. ಈ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಕೈಗೊಂಡ ನಿರ್ಣಯಗಳ ಕುರಿ­ತಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಸಭೆಯಲ್ಲಿ ವರದಿ ಮಂಡಿಸ­ಬೇಕು’ ಎಂದು ಹೇಳಿ­ದ್ದರು. ಈ ಸಂಬಂಧ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು.

‘ಸಭೆಯಲ್ಲಿ ಪ್ರಸ್ತಾಪ­ವಾದ ಯಾವುದೇ ವಿಷಯಕ್ಕೆ ತಕ್ಕ ಪರಿಹಾರ ಸಿಗಬೇಕು ಎನ್ನುವ ಉದ್ದೇಶ­ದಿಂದ ಈ ಪದ್ಧತಿ ಜಾರಿಗೆ ತರ­ಲಾ­ಗುತ್ತಿದೆ’ ಎಂದು ರಮೇಶ್‌ ತಿಳಿಸಿದರು.

ಮತ್ತೆ ಚರ್ಚೆಗೆ: ಬಿಬಿಎಂಪಿ ವ್ಯಾಪ್ತಿ­ಯಲ್ಲಿ 2015ರ ಏಪ್ರಿಲ್‌ ಒಂದರಿಂದ ಜಾರಿಗೆ ಬರು­ವಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡ­ಬೇಕು ಎನ್ನುವ ಪ್ರಸ್ತಾವ ಬುಧ­ವಾರ ನಡೆಯ­ಲಿರುವ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮತ್ತೆ ಚರ್ಚೆಗೆ ಬರಲಿದೆ.

ಹಣಕಾಸಿನ ಮುಗ್ಗಟ್ಟಿನಿಂದ ಹೊರ­ಬರಲು ಆಸ್ತಿ ತೆರಿಗೆ ಹೆಚ್ಚಳ ಮಾಡು­ವುದು ಅನಿವಾರ್ಯವಾಗಿದ್ದು, ವಸತಿ ಕಟ್ಟಡಗಳಿಗೆ ಶೇ 20 ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ 25ರಷ್ಟು ಆಸ್ತಿ ತೆರಿಗೆ ಏರಿಕೆ ಮಾಡಬೇಕು ಎಂಬ ಪ್ರಸ್ತಾವ­ವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸಭೆ ಮುಂದಿಟ್ಟಿದೆ.

ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು (ಸಿಎಜಿ) ಕಳೆದ ಐದು ವರ್ಷಗಳಿಂದ ತೆರಿಗೆ ಹೆಚ್ಚಳವನ್ನು ಏಕೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿ­ಸಿದ್ದರು. ತೆರಿಗೆ ಹೆಚ್ಚಳದ ವಿಷಯ ಈ ಹಿಂದಿನ ಕೌನ್ಸಿಲ್‌ ಸಭೆಗಳಲ್ಲಿ ಎರಡು ಸಲ ಬಂದಿದ್ದರೂ ಯಾವುದೇ ನಿರ್ಣಯ ಕೈಗೊಳ್ಳದೆ ಪ್ರಸ್ತಾವವನ್ನು ಮುಂದೂಡ­ಲಾಗಿದೆ.

‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇ­ಶನ್ (ಕೆಎಂಸಿ) ಕಾಯ್ದೆ ಪ್ರಕಾರ, ಮೂರು ವರ್ಷದಲ್ಲಿ ಒಂದು ಸಲ ಕನಿಷ್ಠ ಶೇ 15 ಮತ್ತು ಗರಿಷ್ಠ 30ರಷ್ಟು ತೆರಿಗೆ ಹೆಚ್ಚಿಸುವುದು ಕಡ್ಡಾಯವಾಗಿದೆ. ಈ ಹಿಂದೆ 2008ರಲ್ಲಿ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಈಗ ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ’ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ಕೌನ್ಸಿಲ್‌ ಅವಧಿ 2015ರ ಏಪ್ರಿಲ್‌ಗೆ ಕೊನೆಗೊಳ್ಳಲಿದ್ದು, ಚುನಾ­ವಣೆ ವರ್ಷದಲ್ಲಿ ತೆರಿಗೆ ಏರಿಕೆ ಯಾವ ಸದಸ್ಯರಿಗೂ ಬೇಕಿಲ್ಲ. ಬೆಂಗಳೂರು ಜಲ­ಮಂಡಳಿ ದರ ಪರಿಷ್ಕರಣೆ ಮಾಡಿದಾಗ ಬಿಜೆಪಿ ಸದಸ್ಯರೇ ಪ್ರತಿಭಟನೆ ನಡೆಸಿದ್ದರು.

ತೆರಿಗೆ ಹೆಚ್ಚಳ ಚರ್ಚೆ
ಬಿಬಿಎಂಪಿ ವ್ಯಾಪ್ತಿ­ಯಲ್ಲಿ 2015ರ ಏಪ್ರಿಲ್‌ ಒಂದರಿಂದ ಜಾರಿಗೆ ಬರು­ವಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡ­ಬೇಕು ಎನ್ನುವ ಪ್ರಸ್ತಾವ ಬುಧ­ವಾರ ನಡೆಯ­ಲಿರುವ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮತ್ತೆ ಚರ್ಚೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT