ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನದತ್ತ ಪೇಟೆ ನೋಟ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಈ ಬಾರಿಯ ಚಳಿಗಾಲದ ಅಧಿವೇಶನ ಸೋಮ­ವಾರ ಆರಂಭವಾಗಲಿದ್ದು, ಇದರತ್ತ ಷೇರುಪೇಟೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆರ್ಥಿಕ ಸುಧಾ-­ರಣಾ ಕ್ರಮಗಳು, ಸರಕು ಮತ್ತು ಸೇವಾ ತೆರಿಗೆ ಜಾರಿ, ಕಲ್ಲಿದ್ದಲು ವಲಯದ ಸುಧಾರಣೆ... ಹೀಗೆ ಹಲವು ವಿಷಯಗಳ ಬಗ್ಗೆ ಹೂಡಿಕೆ-­ದಾರರು ಕುತೂಹಲ ತಳೆದಿದ್ದಾರೆ ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಿಸಿದ್ದಾರೆ.

ಷೇರುಪೇಟೆ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಈ ವಾರ ಚಳಿಗಾಲದ ಅಧಿವೇಶನದಲ್ಲಿನ ಪ್ರಮುಖ ನಿರ್ಧಾರಗಳ ಮೇಲೆ ವಹಿವಾಟಿನ ದಿಕ್ಕು ನಿರ್ಧಾರ­ವಾಗಲಿದೆ. ಆದರೆ, ವಾಯಿದಾ ವಹಿವಾಟು ಅವಧಿ ಮುಕ್ತಾಯ ದಿನ ಮತ್ತು ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಅಂಕಿ–ಅಂಶ ಆಧರಿಸಿ ಹೂಡಿಕೆದಾರರು ಎಚ್ಚರಿ­ಕೆಯ ವಹಿವಾಟಿಗೆ ಮುಂದಾಗ­ಲಿದ್ದಾರೆ ಎನ್ನುವುದು ಪರಿಣಿತರ ಅಭಿಪ್ರಾಯ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಮಸೂದೆ­ಗಳ ತಿದ್ದುಪಡಿ ಮೇಲೆ ಹೂಡಿಕೆ­ದಾರರ ಮುಂದಿನ ಚಟುವಟಿಕೆಗಳು ನಿರ್ಧಾರ­ವಾಗಲಿವೆ. ಯೂರೋಪ್‌ ಆರ್ಥಿಕತೆಯ ಮಿಶ್ರ ಸ್ಥಿತಿಗತಿಯೂ ಮುಖ್ಯವಾಗಲಿದೆ ಎಂದು ಸಿಯಾನ್ಸ್‌ ಅನಲಿಟಿಕ್ಸ್‌ ಸಂಸ್ಥಾಪಕ ಅಮನ್‌ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್‌ 27ರಂದು ವಾಯಿದಾ ಕರಾರು ಅವಧಿ ಮುಕ್ತಾಯ­ವಾಗ-­ಲಿದ್ದು, ಪೇಟೆ ವಹಿವಾಟು ವಾರವಿಡೀ ಚಂಚಲತೆಯಿಂದ ಕೂಡಿರ­ಲಿದೆ. ನವೆಂಬರ್‌ 28ರಂದು ಜಿಡಿಪಿ ಅಂಕಿ–ಅಂಶ ಹೊರಬೀಳಲಿದೆ. ಇವುಗಳ ಆಧಾರದ ಮೇಲೆ ಮುಂದಿನ ಷೇರುಪೇಟೆ ವಹಿವಾಟು ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT