ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನದಲ್ಲಿ ಹೋರಾಟ: ಶೆಟ್ಟರ್

Last Updated 1 ಜುಲೈ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಿ ನಿವೇಶನ ಹಂಚಿಕೆ  ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಾವಿರಾರು ಕೋಟಿ ರೂಪಾಯಿಯ ಅಕ್ರಮ ನಡೆಸಿದೆ’ ಎಂದು  ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿದರು.

‘ಜುಲೈ 4ರಂದು ಆರಂಭವಾಗಲಿರುವ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ನಡೆಸಲಾಗುವುದು’  ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಕೆಂಗೇರಿ ಉಪನಗರದಲ್ಲಿ  ಹನುಮಂತೇಗೌಡ ಎಂಬುವರಿಗೆ ಬಿಡಿಎ ಪರ್ಯಾಯ ನಿವೇಶನ ನೀಡಿದ್ದರಿಂದ ನಿರಾಶ್ರಿತಗೊಂಡ ಕುಟುಂಬಗಳನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

‘ಬಿಡಿಎ ಬಡಾವಣೆಗಳಿಗೆ ಹನುಮಂತೇಗೌಡ 800–1000 ಚದರ ಅಡಿ ಜಾಗ ನೀಡಿ ಪರ್ಯಾಯವಾಗಿ ಬೇರೆ ಕಡೆ ಐದು ಸಾವಿರ ಚದರ ಅಡಿಗಳಷ್ಟು ಜಾಗ ಪಡೆದುಕೊಂಡಿದ್ದಾರೆ. ಪತ್ನಿ, ಮಕ್ಕಳು, ಸಂಬಂಧಿಕರ ಹೆಸರಿನಲ್ಲಿ ನೂರಾರು ನಿವೇಶನ ಮಾಡಿಕೊಂಡಿದ್ದಾರೆ. ಅವರಿಗೆ ನೀಡಿರುವ ನಿವೇಶನಗಳನ್ನು ವಾಪಸ್‌ ಪಡೆಯುವಂತೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.

‘ಹನುಮಂತೇಗೌಡ ಯಾರು ಎಂಬುದು ಮುಖ್ಯ ಅಲ್ಲ. ಆದರೆ, ಅವರ ಅಕ್ರಮಗಳಿಗೆಲ್ಲಾ ಬಿಡಿಎ ಆಯುಕ್ತರು ಮತ್ತು ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಮುಖ್ಯಮಂತ್ರಿ ಸುಮ್ಮನಿರುವುದು ನೋಡಿದರೆ  ಈ ಪ್ರಕರಣದಲ್ಲಿ ಅವರ ಮತ್ತು ಕೆಲವು ಮಂತ್ರಿಗಳ ಸಹಕಾರ ಇದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

‘ಬದಲಿ ನಿವೇಶನದ ಅಕ್ರಮಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್‌ ಅಧಿಕಾರಿ ಶಶಿಧರ್‌ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಈಗಾಗಲೇ ವರದಿ ನೀಡಿದ್ದರೂ ಸರ್ಕಾರ ಅದನ್ನು ಜಾರಿ ಮಾಡಿಲ್ಲ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ಟಿ.ಎಂ. ವಿಜಯಭಾಸ್ಕರ್ ಅವರು ಶಶಿಧರ್‌ ಸಮಿತಿ ಜಾರಿ ಮಾಡಬೇಕು ಮತ್ತು ಬಿಡಿಎ ಬದಲಿ ನಿವೇಶನಗಳನ್ನು ನೀಡುವುದು ನಿಲ್ಲಿಸಬೇಕು ಎಂದು ಆದೇಶಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಆಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT