ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಸೂಚನೆಗೆ ಹೈಕೋರ್ಟ್‌ ತಡೆ

ಪ್ರಸಾಧನ ಸಾಮಗ್ರಿ ಮೇಲೆ ಬಣ್ಣದ ಚುಕ್ಕೆ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಸಾಬೂನು, ಶಾಂಪೂ, ಟೂತ್‌ಪೇಸ್ಟ್‌, ನೈರ್ಮಲ್ಯಕಾರಕಗಳು ಹಾಗೂ  ಪ್ರಸಾಧನ ಸಾಮಗ್ರಿಗಳ ಮೇಲೆ ಸಸ್ಯಜನ್ಯವೇ ಅಥವಾ ಪ್ರಾಣಿಜನ್ಯವೇ ಎನ್ನುವುದನ್ನು ಸೂಚಿಸಲು ಕ್ರಮವಾಗಿ ಹಸಿರು ಹಾಗೂ ಕೆಂಪು/ ಕಂದು ಚುಕ್ಕೆಗಳನ್ನು ಇಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ   ಸೌಂದರ್ಯ ವರ್ಧಕ ಉತ್ಪನ್ನ ತಯಾರಿಕಾ ಉದ್ದಿಮೆಗಳು ಕೋರ್ಟ್‌್ ಮೆಟ್ಟಿಲೇರಿವೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ಅವಧಿಯೊಳಗೇ ಗ್ರಾಹಕ ವ್ಯವಹಾರಗಳ ಇಲಾಖೆ ಈ  ಅಧಿಸೂಚನೆ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಇಂಡಿಯನ್‌್ ಬ್ಯೂಟಿ ಆಂಡ್‌್ ಹೈಜೀನ್‌್ ಅಸೋಸಿಯೇಷನ್‌್  (ಐಬಿಎಚ್‌ಎ) ಸೆ.೩ರಂದು ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ. ಅಧಿಸೂಚನೆ ಜಾರಿಗೆ ಬಾಂಬೆ ಹೈಕೋರ್ಟ್‌್ ವಿಭಾಗೀಯ ಪೀಠ ತಡೆ ನೀಡಿದೆ.

‘ಪೂರ್ವ ಮಾಹಿತಿ ಇಲ್ಲದೆಯೇ ಈ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಐಬಿಎಚ್‌ಎ ಪ್ರಧಾನ ಕಾರ್ಯದರ್ಶಿ ಮಾಲತಿ ನಾರಾಯಣನ್‌್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ಸೌಂದರ್ಯ ವರ್ಧಕ ಉತ್ಪನ್ನ ತಯಾರಿಕಾ ಉದ್ದಿಮೆಯು ವಾರ್ಷಿಕ ೬೦ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದು, ಪ್ರತಿವರ್ಷ ಶೇ 20ರಷ್ಟು ಬೆಳವಣಿಗೆ ದಾಖಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT