ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾಪನದಲ್ಲಿ ತಂತ್ರಜ್ಞಾನದ ಬಳಕೆ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರದ ಕೇಂಬ್ರಿಜ್‌ ತಾಂತ್ರಿಕ ಮಹಾವಿದ್ಯಾಲಯವು ಮೈಕ್ರೊ­ಸಾಫ್ಟ್‌  ಕಂಪೆನಿಯ ಸಹಯೋಗದಲ್ಲಿ  ‘ಅಧ್ಯಾಪನದಲ್ಲಿ ತಂತ್ರಜ್ಞಾನದ ಕುರಿತ ಕಾರ್ಯಾಗಾರ’ ವನ್ನು ಏರ್ಪಡಿಸ­ಲಾಗಿತ್ತು.

ವಾಷಿಂಗ್ಟನ್‌ ಬೋಥೆಲ್‌ ವಿವಿಯ ಸಹ ಪ್ರಾಧ್ಯಾಪಕಿ ರಾಬಿನ್‌ ಎಂಗೊಟ್‌ ಅವರು ಮಾತನಾಡಿ, ‘ಶಿಕ್ಷಣದಲ್ಲಿ ತಂತ್ರಜ್ಞಾನ­ವನ್ನು ಹೆಚ್ಚು ಹೆಚ್ಚು ಬಳಸುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ತಗ್ಗಿಸಬಹುದು’ ಎಂದು ಹೇಳಿದರು.

ಮೈಕ್ರೊಸಾಫ್ಟ್‌   ಇಂಡಿಯಾದ ಸಾರ್ವಜನಿಕ ವಲಯದ ಮುಖ್ಯಸ್ಥ ಅರುಣ್ ರಾಜಾಮಣಿ ಅವರು ಮಾತನಾಡಿ, ‘ಬೋಧನಾ ಕ್ರಮದಲ್ಲಿ ಇಂದು ತಂತ್ರಜ್ಞಾನ­ವನ್ನು ಬಳಸುವುದು ಅಗತ್ಯವಾಗಿದೆ. ಇದರಿಂದ, ವಿದ್ಯಾರ್ಥಿ­ಗಳಿಗೆ ಹೆಚ್ಚಿನ ಅನುಕೂಲ­ ವಾಗಲಿದೆ. ಅಧ್ಯಾಪಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT