ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ

ವಿಜಯ ಭಾಸ್ಕರ್‌ ಕಟ್ಟಪ್ಪಣೆ
Last Updated 19 ಏಪ್ರಿಲ್ 2015, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಬೇಕು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು, ಸಾರ್ವಜನಿಕರಿಗೆ ತ್ವರಿತ ಮತ್ತು ಉತ್ತಮ ಸೇವೆ ನೀಡುವುದೇ ಎಲ್ಲರ ಆದ್ಯತೆ ಆಗಬೇಕು’

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತಾಧಿಕಾರಿ ಟಿ.ಎಂ. ವಿಜಯ ಭಾಸ್ಕರ್‌ ಅವರು ಭಾನುವಾರ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ನೀಡಿದ ಕಟ್ಟಪ್ಪಣೆ ಇದಾಗಿದೆ.

ಬೆಳಿಗ್ಗೆ 11ರಿಂದಲೇ ಅವರು ಎಲ್ಲ ಇಲಾಖಾ ಮುಖ್ಯಸ್ಥರ ಸಭೆಯನ್ನು ಕರೆದು ಪ್ರಗತಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಕೊರತೆ, ಪಾಲಿಕೆ ಆಸ್ಪತ್ರೆ, ಆಟದ ಮೈದಾನಗಳ ನಿರ್ವಹಣೆ, ಜಾಹೀರಾತು ಅಕ್ರಮ, ಘನತ್ಯಾಜ್ಯ ವಿಲೇವಾರಿ, ಕಾಮಗಾರಿಗಳ ಪ್ರಗತಿ, ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಕುರಿತು ಮಾಹಿತಿ ಪಡೆದರು.

ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಕಂದಾಯ ಅಧಿಕಾರಿಗಳು ವಾರ್ಡ್‌ವಾರು, ವಲಯವಾರು ಸಂಗ್ರಹಿ ಸಿದ ಆಸ್ತಿ ತೆರಿಗೆ ಮತ್ತು ನಿಗದಿಪ ಡಿಸಲಾಗಿದ್ದ ಗುರಿ ಕುರಿತ ಸಂಪೂರ್ಣ ಮಾಹಿತಿಯನ್ನು ಕೊಡಲು ಕಂದಾಯ ವಿಭಾಗದ ಉಪ ಆಯುಕ್ತರಿಗೆ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಗೆ ₨ 2,900 ಕೋಟಿ ಗುರಿ ಯಿದ್ದು, ಈ ಗುರಿಯನ್ನು ಮುಟ್ಟಲಿಕ್ಕೆ ವಿಶೇಷ ಅಭಿಯಾನ ಪ್ರಾರಂಭಿಸಬೇಕು. ಇದರಲ್ಲಿ ಕಂದಾಯ ವಿಭಾಗದ ಅಧಿಕಾರಿ ಮಾತ್ರವಲ್ಲದೇ ಎಲ್ಲಾ ವಿಭಾಗದ ಅಧಿ ಕಾರಿಗಳು  ಭಾಗವಹಿಸಬೇಕು. ಈ ಕುರಿತು ಕೂಡಲೇ ಕ್ರಿಯಾ ಯೋಜನೆ ಸಿದ್ದಪಡಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಣಕಾಸು ವಿಭಾಗದ ಪರಿಶೀಲನೆ ನಡೆಸಿದ ಅವರು, ಈ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ಆದಾಯ ಮತ್ತು ಖರ್ಚುಗಳ ಕುರಿತು ನಿಖರವಾದ ಮಾಹಿತಿ ಇರಬೇಕು. ಆರ್ಥ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಬೇಕಾಗಿದೆ. ಆದಷ್ಟು ಬೇಗನೆ ಇಲಾಖೆ ಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಬೇಕು ಎಂದು ಹೇಳಿದರು. 

ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕರಿಗೆ ತಮ್ಮ ಕುಂದು ಕೊರತೆಗಳನ್ನು ಹೇಳಿ ಕೊಳ್ಳಲಿಕ್ಕೆ ಯಾವ ರೀತಿಯಲ್ಲಿ ತೊಂದರೆ ಆಗಬಾರದು. ಎಲ್ಲಾ ನಿಯಂತ್ರಣ ಕೊಠಡಿ ಗಳು ಸಮರ್ಪಕ ವಾಗಿ ಕೆಲಸ ನಿರ್ವಹಿಸ ಬೇಕು. ಪ್ರತಿ ವಾರ ಪ್ರಗತಿ ಪರಿಶೀಲನೆ ಮಾಡಬೇಕು. ಇದನ್ನು ನೋಡಿಕೊಳ್ಳಲು ಹಿರಿಯ ಅಧಿಕಾರಿ ಯೊಬ್ಬರನ್ನು ನೇಮಿಸ ಬೇಕು ಎಂದು ಹೆಚ್ಚುವರಿ ಆಯುಕ್ತರಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲಿಕ್ಕೆ ತೊಂದರೆ ಆಗಬಾರದು. ನಿಯಂತ್ರಣ ಕೊಠಡಿಗಳು ಸಮರ್ಪಕ ವಾಗಿ ಕೆಲಸ ನಿರ್ವಹಿಸಬೇಕು.
ಟಿ.ಎಂ. ವಿಜಯ ಭಾಸ್ಕರ್‌, ಬಿಬಿಎಂಪಿ ಆಡಳಿತಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT