ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಚಿತ ಪದ

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

‘ಬೆಂಗಳೂರು ಸಾಹಿತ್ಯ ಹಬ್ಬ’ದಿಂದ ಹೊರಬರಲು ನಿರ್ಧರಿಸಿದ ವಿಕ್ರಂ ಸಂಪತ್‌ ಅವರಿಗೆ ಸಂಬಂಧಿಸಿದ ಸುದ್ದಿಯ ಶೀರ್ಷಿಕೆಯಲ್ಲಿ ‘ಸಹಿಷ್ಣುತೆ ಮಾಫಿಯಾ’ ಎಂಬ ಪದ ಬಳಸಲಾಗಿದೆ (ಪ್ರ.ವಾ., ನ. 29). ಅದನ್ನು ವಿಕ್ರಂ ಸಂಪತ್ ಅವರೇ ಹೇಳಿದ್ದರೂ ಅದು ಅನುಚಿತವಾದದ್ದು ಎಂದು ಪತ್ರಿಕೆ ಗ್ರಹಿಸದಿದ್ದುದು ದುರದೃಷ್ಟಕರ.

ಶೀರ್ಷಿಕೆಯು ಪಂಚ್‌ಲೈನ್ ಹೊಂದಿದ್ದರೆ ಹೆಚ್ಚು ಜನ ಓದುತ್ತಾರೆ ಎಂಬ ಉದ್ದೇಶ ಪತ್ರಿಕೆಯದ್ದಾಗಿರಬಹುದು. ಆದರೆ ಸಹಿಷ್ಣುತೆ ಒಂದು ಸಕಾರಾತ್ಮಕವಾದ ಪದ.  ಅದನ್ನು ನಕಾರಾತ್ಮಕವಾಗಿ ಮಾಫಿಯಾ ಎಂಬ ಪದದೊಂದಿಗೆ ಬಳಸುವುದು ತಪ್ಪು. ಹೀಗಾದರೆ ಬುದ್ಧ, ಮಹಾವೀರ, ಯೇಸುಕ್ರಿಸ್ತ, ಬಸವಣ್ಣ ಮತ್ತು ಅನೇಕಾನೇಕ ಸಂತರೂ ಈ ಮಾಫಿಯಾದ ಡಾನ್‌ಗಳೇ ಆಗುತ್ತಾರೆ!

ಯೇಸು ಶಿಲುಬೆಯೇರಿದಾಗಲೂ ‘ತಂದೆಯೇ ಇವರನ್ನು ಕ್ಷಮಿಸು. ಇವರಿಗೆ ತಾವೇನು ಮಾಡುತ್ತಿದ್ದೇವೆಂದು ಗೊತ್ತಿಲ್ಲ’ ಎಂದನಂತೆ. ಅದು ಸಹಿಷ್ಣುತೆ. ಯಾವುದೇ ಪದಕ್ಕೆ ವಾಚ್ಯ ಇಲ್ಲವೇ ಅವಾಚ್ಯ ಎಂಬ ಅಂಶವಿರುತ್ತದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT