ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಪಮ್‌ ಕನಸಿನ ಪಾತ್ರ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ತಮ್ಮ ಮೂರುವರೆ ದಶಕದ ಸಿನಿಜೀವನದಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಗುರ್ತಿಸಿಕೊಂಡಿರುವ ನಟ ಅನುಪಮ್‌ ಖೇರ್‌. ಎಲ್ಲ ರೀತಿಯ ಪಾತ್ರಗಳನ್ನೂ ಸಲೀಸಾಗಿ ನಿರ್ವಹಿಸಬಲ್ಲ ಈ ಮಾಗಿದ ನಟನಿಗೆ ‘ಮೊಗ್ಯಾಂಬೋ’ ಪಾತ್ರವನ್ನು ಮಾಡುವ ಆಸೆಯಿದೆ.

ಅನುಪಮ್ ಖೇರ್ ಅವರಿಗೆ ಖಳಪಾತ್ರಗಳೇನೂ ಹೊಸತಲ್ಲ. ವೃತ್ತಿಜೀವನದುದ್ದಕ್ಕೂ ಅನೇಕ ರೀತಿಯ ಖಳಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಅನುಪಮ್‌ ಅವರಿಗೆ ಬೇರೆಯವರು ಮಾಡಿದ ಪಾತ್ರವನ್ನು ಮತ್ತೆ ಮಾಡುವುದು ಇಷ್ಟದ ಸಂಗತಿಯೇನೂ ಅಲ್ಲ.
‘‘ಬೇರೆಯವರು ಮಾಡಿರುವ ಪಾತ್ರವನ್ನು ಮತ್ತೆ ಮಾಡುವುದರಲ್ಲಿ ನನಗೆ ಆಸಕ್ತಿಯಿಲ್ಲ.

ಯಾಕೆಂದರೆ ನನ್ನ ವೃತ್ತಿಜೀವನದಲ್ಲಿ ನನಗೆ ಯಾವ ಸಮಯದಲ್ಲಿ ಯಾವ ಪಾತ್ರಗಳು ಸಿಗಬೇಕಿತ್ತೋ ಅಂತಹ ಪಾತ್ರಗಳು ಸಿಕ್ಕಿವೆ. ಆದರೆ ಒಂದೊಮ್ಮೆ ‘ಮಿ.ಇಂಡಿಯಾ’ ಚಿತ್ರವನ್ನು ಮತ್ತೆ ಮಾಡಿದರೆ, ನನಗೆ ಅವಕಾಶ ಸಿಕ್ಕರೆ ನಾನು ಮೊಗ್ಯಾಂಬೋ ಪಾತ್ರವನ್ನು ಮಾಡಲು ಇಷ್ಟಪಡುತ್ತೇನೆ.’’ ಎಂದು ಅವರು ಹೇಳಿದ್ದಾರೆ.

ಶೇಖರ್ ಕಪೂರ್ ನಿರ್ದೇಶಿದ್ದ ‘ಮಿ.ಇಂಡಿಯಾ’ ಚಿತ್ರದಲ್ಲಿ ಅಮರೀಶ್‌ ಪುರಿ ನಿರ್ವಹಿಸಿದ್ದ ಮೊಗ್ಯಾಂಬೋ ಪಾತ್ರ ಅತ್ಯಂತ ಜನಪ್ರಿಯವಾಗಿತ್ತು. ‘ಮೊಗ್ಯಾಂಬೋ ಖುಷ್‌ ಹುವಾ’ ಎನ್ನುವ ಸಂಭಾಷಣೆ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿದಿದೆ.
ಇದು ಅನುಪಮ್‌ ಖೇರ್‌ ಕನಸಿನ ಪಾತ್ರವಾದರೂ ‘ಅಮರೀಶ್‌ ಪುರಿ ಆ ಪಾತ್ರವನ್ನು ಕಟ್ಟಿಕೊಟ್ಟಷ್ಟು ಜೀವಂತವಾಗಿ ಕಟ್ಟಿಕೊಡುವುದು ನನ್ನಿಂದ ಸಾಧ್ಯವಿಲ್ಲ’ ಎಂದು ಅವರಿಗೆ ಅನಿಸಿದೆ.

‘ನಾನು ಆ ಪಾತ್ರವನ್ನು ನನ್ನದೇ ಆದ ರೀತಿಯಲ್ಲ ನಿರ್ವಹಿಸಲು ಇಷ್ಟಪಡುತ್ತೇನೆ. ಯಾಕೆಂದರೆ ಅಮರೀಶ್‌ ಪುರಿ ಅವರು ಕಟ್ಟಿಕೊಟ್ಟ ರೀತಿಯಲ್ಲಿಯೇ ಆ ಪಾತ್ರವನ್ನು ಮರುಸೃಷ್ಟಿಸುವುದು ಅಸಾಧ್ಯ’ ಎಂಬುದು ಅನುಪಮ್‌ ವಿವರಣೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT