ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಕಾ ಹೊಗಳಿದ ರಣವೀರ್‌ ಸಿಂಗ್‌

ಪಂಚರಂಗಿ
Last Updated 26 ಮೇ 2015, 19:30 IST
ಅಕ್ಷರ ಗಾತ್ರ

‘ಓರ್ವ ನಟಿಯಾಗಿ ಮತ್ತು ವ್ಯಕ್ತಿಯಾಗಿ ಅನುಷ್ಕಾ ಶರ್ಮಾ ಸಾಕಷ್ಟು ಬೆಳೆದಿದ್ದಾರೆ’ ಹೀಗೆಂದು ಪ್ರಮಾಣ ಪತ್ರ ನೀಡಿದವರು ಯಾವುದೋ ಸಿನಿ ವಿಮರ್ಶಕರಲ್ಲ. ‘ದಿಲ್‌ ಧಡಕನೇ ದೋ’ ಚಿತ್ರದ ನಾಯಕ ರಣವೀರ್‌ ಸಿಂಗ್‌ ತಮ್ಮ ಸಹನಟಿ ಅನುಷ್ಕಾ ಬಗ್ಗೆ ಹೀಗೆ ಮೆಚ್ಚುಗೆಯ ಮಾತನಾಡಿದ್ದಾರೆ.

‘ದಿಲ್‌ ಧಡಕನೇ ದೋ’ ಚಿತ್ರದಲ್ಲಿ ಅನುಷ್ಕಾ ಜತೆಗೆ ಕೆಲಸ ಮಾಡಿದ್ದೊಂದು ಅಪೂರ್ವ ಅನುಭವ. ನಟಿಯಾಗಿ ಮತ್ತು ವ್ಯಕ್ತಿಯಾಗಿ ಅವರು ಸಾಕಷ್ಟು ಬೆಳೆದಿದ್ದಾರೆ. ಹಲವು ವರ್ಷಗಳ ನಂತರ ಅವರೊಂದಿಗೆ ಕೆಲಸ ಮಾಡಿ ಖುಷಿಯಾಗಿದೆ. ನಾವಿಬ್ಬರೂ ನಮ್ಮ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೆವು. ಆಗ ಅವರಿಂದ ಸಾಕಷ್ಟು ಕಲಿತಿದ್ದೇನೆ’ ಎಂದು ರಣವೀರ್‌ ಕೋಲ್ಕತ್ತದಲ್ಲಿ ನಡೆದ ‘ದಿಲ್‌ ಧಡಕನೇ ದೋ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮುಕ್ತವಾಗಿ ಹೊಗಳಿದ್ದಾರೆ.

ಇವರಿಬ್ಬರೂ ಮೊದಲಿಗೆ ‘ಲೇಡಿ ವರ್ಸಸ್‌ ರಿಕ್ಕಿ ಬೆಹ್ಲ್’ ಮತ್ತು ‘ಬ್ಯಾಂಡ್‌ ಬಜಾ ಭಾರತ್‌’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು.
ಇದೀಗ ರಣವೀರ್‌ ಮತ್ತು ಅನುಷ್ಕಾ ತೆರೆಹಂಚಿಕೊಂಡಿರುವ, ಜೋಯಾ ಅಖ್ತರ್‌್ ನಿರ್ದೇಶನದ ‘ದಿಲ್‌ ಧಡಕನೇ ದೋ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅನಿಲ್‌ ಕಪೂರ್‌, ಪ್ರಿಯಾಂಕಾ ಚೋಪ್ರಾ, ಶೆಫಾಲಿ ಶಾ, ಪರ್ಹಾನ್ ಅಖ್ತರ್‌ ಮತ್ತಿತರರು ಚಿತ್ರದಲ್ಲಿದ್ದಾರೆ.
ಸದ್ಯಕ್ಕೆ ಕ್ರಿಕೆಟ್‌ ಆಟಗಾರ ವಿರಾಟ್‌ ಕೊಹ್ಲಿ ಅವರೊಂದಿಗೆ ಬ್ಯುಸಿಯಾಗಿರುವ ಅನುಷ್ಕಾ ಕೋಲ್ಕತ್ತದ ಪ್ರಚಾರ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.

ನೀವೀಗ ಅನುಷ್ಕಾ ಅವರನ್ನು ಮಿಸ್‌ ಮಾಡಿಕೊಳ್ಳುತ್ತೀದ್ದೀರೇ? ಎಂಬ ಪತ್ರಕರ್ತರ ಪ್ರಶ್ನೆಗೆ ರಣವೀರ್‌, ‘ಅವರೊಬ್ಬರನ್ನೇ ಅಲ್ಲ, ಈ ಚಿತ್ರದಲ್ಲಿ ನಟಿಸಿದ ಪ್ರಿಯಾಂಕಾ, ಶೆಫಾಲಿ ಮತ್ತು ಉಳಿದ ಎಲ್ಲ ನಟನಟಿಯರನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ’ ಎಂಬ ಜಾಣತನದ ಉತ್ತರ ನೀಡಿದರು. ‘ದಿಲ್‌ ಧಡಕನೇ ದೋ’ ಚಿತ್ರ ಜೂನ್‌ 5ಕ್ಕೆ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT