ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈರ್ಮಲ್ಯ ತಾಣ ವಿನೋಬಾ ನಗರ

ಕಾಲೊನಿಯಲ್ಲಿ ತಿಪ್ಪೆ ತೆರವಿಗೆ ಆಗ್ರಹ
Last Updated 3 ಸೆಪ್ಟೆಂಬರ್ 2015, 6:22 IST
ಅಕ್ಷರ ಗಾತ್ರ

ಅಜ್ಜಂಪುರ: ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚಾಗಿ ನೆಲಸಿರುವ ಪಟ್ಟಣದ ವಿನೋಬಾ ನಗರದ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಅನೈರ್ಮಲ್ಯ ತಾಣವಾಗಿರುವ ತಿಪ್ಪೆಗಳನ್ನು ತೆರವುಗೊಳಿಸುವಂತೆ  ನಿವಾಸಿಗಳು ಒತ್ತಾಯಿಸಿದ್ದಾರೆ.

ಕಾಲೊನಿಯ ಸಮೀಪವೇ ಕೆಲವರು ನೂರಾರು ತಿಪ್ಪೆಗಳು ನಿರ್ಮಿಸಿ ಕೊಂಡು, ಸಗಣಿ ಸಂಗ್ರಹಿಸಿದ್ದಾರೆ. ಮಳೆಗಾಲ ಬಂತೆ ಂದರೆ ತಿಪ್ಪೆಗಳು ಕೆಸರಿನ ರಾಡಿಯಾಗಿ ಮಾರ್ಪಟ್ಟು, ಡೆಂಗಿ, ಚಿಕೂನ್‌ ಗುನ್ಯಾ ದಂತಹ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ತಾಣವಾದರೆ, ಇದೇ ತಿಪ್ಪೆಗಳು ಬೇಸಿಗೆ ಕಾಲದ ತಾಪದ ಬಿಸಿಗೆ, ಒಣಗಿ ದುರ್ವಾಸನೆ ಬೀರುತ್ತಿವೆ.

ಕಾಲೊನಿಯಲ್ಲಿ ಚರಂಡಿ ಇಲ್ಲ. ಪರಿಣಾಮ ಬಳಕೆ ನೀರು ಸರಾಗವಾಗಿ ಹರಿಯದೇ ಕೊಳಚೆ ನಿರ್ಮಾಣ ಆಗಿದೆ. ಇನ್ನು ಇರುವ 100–110 ಮನೆಗಳ ಪೈಕಿ, ಶೇ 60ರಷ್ಟು ಮನೆಗಳು ಶೌಚಾಲಯದಿಂದ ವಂಚಿತ ವಾಗಿದ್ದು, ಈ ನಿವಾಸಿಗಳು ಮಲ ಮೂತ್ರ ವಿಸರ್ಜನೆಗೆ ತಿಪ್ಪೆ ಮತ್ತು ಸುತ್ತಲಿನ ಬಯಲನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಕಾಲೊನಿಯ ಸುತ್ತಮುತ್ತಲ ಇಡೀ ವಾತಾವರಣ ಕಲುಷಿತಗೊಂಡಿದೆ.

   ಇದೆಲ್ಲದರಿಂದ ಕಾಲೋನಿ ಸ್ವಚ್ಚತೆ ಕೊರತೆಯಿಂದ ಬಳಲುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯೆ ಹೇಮಾವತಿ ಸೇರಿದಂತೆ ಮತ್ತೊಂದು ಒಂದೇ ಮನೆಯ ಮಂಜುಳಾ, ರಂಗಪ್ಪ, ವೆಂಕ ಟೇಶ್‌ಮೂರ್ತಿ, ಮನೆಯ ನಾಲ್ವರೂ... ಹೀಗೆ ಸುಮಾರು 35ಕ್ಕೂ ಅಧಿಕ ನಿವಾಸಿಗಳು ಚಿಕುನ್‌ಗುನ್ಯಾ, ಜ್ವರ, ಅತಿಸಾರ ಭೇದಿ ಸೇರಿದಂತೆ ಹಲವು ಕಾಯಿಲೆಗಳಿಂದ ನರಳಿದ್ದು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕಾಲೋನಿಗೆ ಹೊಂದಿಕೊಂಡಂತೆ ಉತ್ತರ ದಿಕ್ಕಿನ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, ಇಲ್ಲಿ ಕಲಿಯುತ್ತಿರುವ ಕಾಲೋನಿಯ 70ಕ್ಕೂ ಅಧಿಕ ಮಕ್ಕಳ ಪೈಕಿ ಕೆಲವರು ಖಾಯಿಲೆಯಿಂದ ಬಳಲುತ್ತಿದ್ದಾರೆ.

ಈ ನಿಮಿತ್ತ ಕಾಲೋನಿಗೆ ಹೊಂದಿ ಕೊಂಡ ರೋಗ ಹರಡಬಲ್ಲ ತಿಪ್ಪೆಗಳನ್ನು ತೆರವುಗೊಳಿಸುವಂತೆ, ರಸ್ತೆಗಳಲ್ಲಿನ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ಉತ್ತಮ ರಸ್ತೆ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಗಿದ್ದರೂ ಪ್ರಯೋಜನ ಆಗಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾ ರಿಗಳು ಈ ಬಗ್ಗೆ ಕ್ರಮಕೈ ಗೊಳ್ಳುವಂತೆ ನಿವಾಸಿ ಮಧುಸೂದನ್‌ ಆಗ್ರಹಿಸಿದ್ದಾರೆ.

ಈ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ಇಲ್ಲಿ ರಸ್ತೆ ಕಾಮಗಾರಿ ನಿರ್ಮಿಸಿದ್ದನ್ನು ಹೊರತುಪಡಿಸಿದರೆ, ಕಾಲೊನಿಯ ಹಲವೆಡೆ ಅವಶ್ಯವಿರುವ ಚಿಕ್ಕರಸ್ತೆ ಕಾಂಕ್ರಿಟೀಕರಣ ಹಾಗೂ ಬಾಕ್ಸ್‌ ಚರಂಡಿ ಕಾಮಗಾರಿಯಂತಹ ಯಾವು ದೇ ಕಾಮಗಾರಿಗಳು ಇದುವ ರೆಗೂ ನಡೆದಿಲ್ಲ. ಪ್ರತೀ ವರ್ಷ ಪಂಚಾಯಿತಿ ಅನುದಾನದಲ್ಲಿ ಕಾಲೊನಿ ಅಭಿವೃದ್ಧಿಗೆ ಶೇ 22.5 ಮೀಸಲಿಟ್ಟಿದ್ದರೂ, ಹೇಳಿಕೊ ಳ್ಳುವಂತಹ ಯಾವುದೇ ಬದಲಾವಣೆ ಹೊಂದಿಲ್ಲ. 4 ವರ್ಷಗ ಳಿಂದ ಕಾಲೋನಿ ಅಭಿವೃದ್ಧಿಗೆ ಪಂಚಾ ಯಿತಿಗೆ ಬಂದ ಅನುದಾನ ಹಾಗೂ ಬಳಕೆ ಬಗ್ಗೆ ಸಾಕಷ್ಟು ಅನುಮಾ ನವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಾಲೊನಿಯ ಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT