ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ: ಆಂಧ್ರ ಸಿಐಡಿ

Last Updated 31 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಎನ್‌ಎಚ್‌ 44ರಲ್ಲಿ ನಡೆದಿದ್ದ ವೊಲ್ವೊ ಬಸ್‌ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಆಂಧ್ರ ಪ್ರದೇಶದ ಸಿಐಡಿ  ಸರ್ಕಾರಕ್ಕೆ ತನ್ನ ಅಂತಿಮ ವರದಿ ಸಲ್ಲಿಸಿದೆ. 2013ರಲ್ಲಿ ಆಂಧ್ರದ ಮಹಬೂಬ್‌ನಗರ ಜಿಲ್ಲೆ ಪಾಲೆಂ ಸಮೀಪ ಸಂಭವಿಸಿದ ಈ ಅಪಘಾತದಲ್ಲಿ 45 ಜನ ಮೃತಪಟ್ಟಿದ್ದರು. ಇದಕ್ಕೆ ಹಲವಾರು ಕಾರಣಗಳನ್ನು ಊಹಿಸಲಾಗಿತ್ತು. ಈಗ ಸಿಐಡಿ ವರದಿ ಬಂದಿದೆ.

‘ಅಪಘಾತಕ್ಕೆ ಈಡಾದ ವೊಲ್ವೊಬಸ್‌ನ ತಯಾರಕ ವೊಲ್ವೊ ಬಸ್ಸಸ್‌ ಇಂಡಿಯ ಲಿಮಿಟೆಡ್‌, ಬಸ್‌ ಮಾಲೀಕ ದಿವಾಕರ್‌ ರೋಡ್‌ ಲೈನ್ಸ್ ಮತ್ತು ಬಸ್‌ ನಿರ್ವಾಹಕ ಜಬ್ಬಾರ್‌ ಟ್ರಾವೆಲ್ಸ್‌ ಉದ್ದೇಶಪೂರ್ವಕವಾಗಿ ಪ್ರಯಾಣಿಕ ರನ್ನು ಅಪಾಯಕ್ಕೆ ಸಿಕ್ಕಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಕ ಸುರಕ್ಷತೆ ಇಲ್ಲದಿರಲು ಈ ಮೂವರು ಕಾರಣರಾಗಿದ್ದಾರೆ’ ಎಂದು ಸಿಐಡಿ  ವರದಿ ತಿಳಿಸಿದೆ.

ಬೆಂಗಳೂರಿನಲ್ಲಿರುವ ವೊಲ್ವೊ ಬಸ್‌ನ ತಯಾರಿಕಾ ಘಟಕಕ್ಕೆ  ಆಂಧ್ರ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಬಸ್‌ನ ಮುಖ್ಯ ಇಂಧನದ ಟ್ಯಾಂಕ್‌ ಬ್ಯಾಟರಿ ಘಟಕಕ್ಕೆ ತುಂಬಾ ಸಮೀಪ ಇರದೆ. ಇದರಿಂದ ಬ್ಯಾಟರಿಯಿಂದ ಹೊರಟ ಕಿಡಿಯು  ಇಂಧನದ ಟ್ಯಾಂಕ್‌ನಲ್ಲಿ ಬೆಂಕಿ ಹೊತ್ತಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT