ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ತಡೆಗೆ ಕ್ರಮ

Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕೇವಲ ಹೆಲ್ಮೆಟ್ ಕಡ್ಡಾಯದಿಂದ ದ್ವಿಚಕ್ರ ವಾಹನ ಸವಾರರ ಪ್ರಾಣಹಾನಿ ತಪ್ಪಿಸಬಹುದು ಎಂದುಕೊಳ್ಳುವುದು ಸರ್ಕಾರದ ತಪ್ಪು ಕಲ್ಪನೆ. ಇದರ ಜೊತೆಗೆ ಇನ್ನೊಂದಿಷ್ಟು ಕ್ರಮಗಳನ್ನು ಕೈಗೊಳ್ಳುವುದು ಅಪಘಾತಗಳನ್ನು ತಡೆಯಲು ಅಗತ್ಯ. ಕೆಲವು ರಸ್ತೆಗಳಲ್ಲಿ ಇಂತಿಷ್ಟೇ ವೇಗದಲ್ಲಿ ವಾಹನಗಳು ಚಲಿಸಬೇಕು ಎನ್ನುವ ನಿಯಮ ಅಳವಡಿಸಬೇಕು ಹಾಗೂ ಕೆಲವೆಡೆ ರಸ್ತೆಗಳಲ್ಲಿ ಬಿದ್ದ ತಗ್ಗುಗಳನ್ನು ಮುಚ್ಚಬೇಕು. ಹೆಲ್ಮೆಟ್‌ ಧರಿಸುವುದನ್ನು ಇದ್ದಕ್ಕಿದ್ದಂತೆ ಕಡ್ಡಾಯಗೊಳಿಸಿದ್ದರಿಂದ ಮಾರುಕಟ್ಟೆಗೆ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಬಂದಿವೆ. ಇದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ಬಗ್ಗೆ ಗಮನಹರಿಸಬೇಕು. 

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಬಿಸಿಲು ಇರುವುದರಿಂದ ಅಲ್ಲಿಯ ಜನರಿಗೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಲ್ಮೆಟ್ ಧರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಅಲ್ಲಿಯ ವಾತಾವರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಂಪೆನಿಗಳು ಹೆಲ್ಮೆಟ್‌ಗಳನ್ನು ತಯಾರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT