ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಪ್ರಯಾಣ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ದೂರದೂರುಗಳಿಗೆ ಪ್ರಯಾಣಿಸುವವರು ಹೆಚ್ಚಾಗಿ ಬಸ್ಸು, ಕಾರು, ಇತರ ವಾಹನಗಳಲ್ಲಿ ರಾತ್ರಿ ವೇಳೆ ಸಂಚರಿಸಲು ಇಷ್ಟಪಡುವುದು ಸ್ವಾಭಾವಿಕ. ರಾತ್ರಿಯಲ್ಲಿ ಬೇಗನೆ ನಿದ್ರೆಗೆ ಜಾರುವುದರಿಂದ ಪ್ರಯಾಣದ ಆಯಾಸ ಕಡಿಮೆಯಾಗುತ್ತದೆ ಎಂಬುದೇ ಇದಕ್ಕೆ ಮುಖ್ಯ ಕಾರಣ. ಆದರೆ ವಾಹನ ಚಾಲಕರೂ ನಮ್ಮಂತೆ ಮನುಷ್ಯರಲ್ಲವೇ?  ಅವರಿಗೂ ನಮ್ಮಂತೆ ನಿದ್ರೆ-ನೀರಡಿಕೆ ಅವಶ್ಯ ಎಂಬುದನ್ನು ಮರೆಯುವ ನಾವು ಇಡೀ ರಾತ್ರಿ ಅವರಿಗೆ ಕೆಲಸ ನೀಡುತ್ತೇವೆ. 

ಸರ್ಕಾರಿ ಇಲ್ಲವೆ ಖಾಸಗಿ ಬಸ್ಸುಗಳಲ್ಲಾದರೆ ಇಬ್ಬರು ಚಾಲಕರಿರುತ್ತಾರೆ. ಆದರೆ ಕಾರು, ಟ್ಯಾಕ್ಸಿ, ಟೆಂಪೊಗಳಲ್ಲಿ ಒಬ್ಬರೇ ಚಾಲಕರನ್ನು ಕಾಣುತ್ತೇವೆ. ತಡರಾತ್ರಿ ತೂಕಡಿಸುತ್ತಲೇ ವಾಹನ ಚಲಿಸುವ ಇವರ ಕಷ್ಟ, ನಿದ್ರಿಸುತ್ತಿರುವ ನಮ್ಮ ಗಮನಕ್ಕೆ ಬರುವುದಿಲ್ಲ. ಈ ಕಷ್ಟಗಳನ್ನು ಸಹಿಸಿಕೊಳ್ಳುತ್ತಲೇ ಒಮ್ಮೊಮ್ಮೆ ಅಪಘಾತಗಳಿಂದ ಪ್ರಾಣಹಾನಿಯೂ ಆಗುತ್ತದೆ. ಆಗಲೇ ರಾತ್ರಿ ಪ್ರಯಾಣ ಎಷ್ಟು ಅಪಾಯಕಾರಿ ಎಂಬುದು ನಮ್ಮ ಅರಿವಿಗೆ ಬರುವುದು.

ಬದಲಾಗಿ ಹಗಲು ಪ್ರಯಾಣ ಮಾಡುವ ಮೂಲಕ ಜೀವಹಾನಿಯ ಜೊತೆಗೆ ಅಪಘಾತಗಳನ್ನೂ ತಡೆಗಟ್ಟಲು ನಾವೆಲ್ಲ ಪ್ರಯತ್ನಿಸಬಹುದು.
-ಅಶೋಕ ವಿ. ಬಳ್ಳಾ, ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT